Advertisement
ಕಳೆದ ಐದಾರು ವರ್ಷಗಳಿಂದ ಮೂಲ್ಕಿ ಗಾಂಧಿ ಮೈದಾನದಲ್ಲಿ ಪ್ರತೀ ಶುಕ್ರವಾರ ಚಾಲನಾ ಪರವಾನಿಗೆ ಪರೀಕ್ಷೆ ನಡೆಯುತ್ತದೆ. ಮಂಗಳೂರು ಆರ್‌ಟಿಓ ಕಚೇರಿಯಿಂದ ಇಲ್ಲಿಗೆ ಒಬ್ಬ ಬ್ರೇಕ್ ಇನ್‌ಸ್ಪೆಕ್ಟರ್ ಹಾಗೂ ಸಿಬಂದಿ ಆಗಮಿಸುತ್ತಾರೆ. ಪರೀಕ್ಷೆಯ ಜತೆಗೆ ಇಲ್ಲಿ ಕೆಲವು ಸೇವೆಗಳನ್ನು ನೀಡುವುದು ಉದ್ದೇಶ.
ಪ್ರತೀ ವಾರವೂ ಇಲ್ಲಿಗೆ 300-400 ಮಂದಿ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ, ಇಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ಮಾತ್ರ ನಡೆಯುತ್ತಿದೆ. ಉಳಿದ ಕೆಲವು ಕೆಲಸ ಗಳಿಗೆ ಇಲ್ಲಿನ ಜನರು ಮತ್ತೆ ಮಂಗಳೂರು ಕಚೇರಿಗೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಸೇವೆ ಪಡೆಯಬೇಕಾಗಿದೆ. ಕಾಯುವುದೇ ಕೆಲಸವಾಗಿದೆ
ಆರ್‌ಟಿಒ ಕೆಲಸಗಳಿಗೆ ಬಹಳಷ್ಟು ಜನರು ಮೈದಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತರೂ ತಮ್ಮ ಎಲ್ಲ ಕೆಲಸ ಪೂರ್ತಿಯಾಗದೆ ಮಂಗಳೂರಿನಲ್ಲಿ ಇಲಾಖೆಯ ಸೇವೆಯನ್ನು ಪಡೆಯು ವಂತಾಗಿದೆ. ಜನರ ಅಗತ್ಯ ಮತ್ತು ತಾಲೂಕು ಕೇಂದ್ರದ ಸವಲತ್ತು ಈ ಎರಡನ್ನು ಪರಿಗಣಿಸಿ ಆರ್‌ಟಿಓ ಕಚೇರಿಯನ್ನು ಶೀಘ್ರವಾಗಿ ಮೂಲ್ಕಿ ಯಲ್ಲಿ ಸ್ಥಾಪಿಸಬೇಕೆಂಬುದು ಜನರ ಬೇಡಿಕೆಯಾಗಿದೆ.
Related Articles
ನನ್ನ ಮೊದಲ ಅವಧಿಯಲ್ಲಿ ನಮ್ಮದೇ ಪಕ್ಷದ ಸರಕಾರವಿತ್ತು. ಎಲ್ಲ ಕಡೆ ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಈಗ ಮೂಲ್ಕಿ ತಾಲೂಕು ಕಟ್ಟಡ ಕಾಮಗಾರಿಯೂ ನನ್ನ ನಿರೀಕ್ಷೆಯ ವೇಗದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ಸರಕಾರದಿಂದ ಯಾವುದೇ ಅನುದಾನ ಮತ್ತು ಸಹಕಾರ ಸಿಗದಿರುವುದು. ಸಾರಿಗೆ ಇಲಾಖೆಯ ವಾರದ ಕ್ಯಾಂಪ್‌ನಿಂದ ಜನರಿಗೆ ಪೂರ್ಣ ಪ್ರಯೋಜನ ಸಿಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಪ್ರಯತ್ನ ಮುಂದುವರಿಸುತ್ತೇನೆ.
-ಉಮಾನಾಥ ಕೋಟ್ಯಾನ್,ಶಾಸಕರು
Advertisement
ಮೊದಲಿನಿಂದಲೂ ಇತ್ತುಮೂಲ್ಕಿಗೆ ಆರ್‌ಟಿಒ ಸಂಬಂಧಿತ ಚಟುವಟಿಕೆಗಳ ತುರ್ತು ತಾಲೂಕು ರಚನೆಗೂ ಮೊದಲೇ ಇತ್ತು. ಇದನ್ನು ಪರಿಗಣಿಸಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಕೃಷ್ಣ ಪಾಲೇಮಾರ್ ಅವರು ಗಾಂಧಿ ಮೈದಾನದಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಮೂಲ್ಕಿ ತಾಲೂಕು ಆಗುವ ಮೊದಲೇ ಇದ್ದ ವ್ಯವಸ್ಥೆ ಈಗಲೂ ಮುಂದುವರಿದಿದೆ. ಈಗಲೂ ಕೂಡಾ ವಾರಕ್ಕೊಂದು ದಿನದ ಸೇವೆ ಮಾತ್ರ ಲಭ್ಯವಿದೆಯೇ ಹೊರತು ಉಪ ಕಚೇರಿ ನಿರ್ಮಾಣ ಕಾರ್ಯವಾಗಿಲ್ಲ. -ಸರ್ವೋತ್ತಮ ಅಂಚನ್