ಮುಲ್ಕಿ: ಕಾರೊಂದು ಗ್ಯಾಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಉದ್ಯಾವರದಲ್ಲಿ ನಡೆದಿದೆ.
ಮುಲ್ಕಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಜಿ ರಾಕೇಶ್ (27) ಗಂಭೀರವಾಗಿ ಗಾಯಗೊಂಡ ಗೃಹರಕ್ಷಕ ದಳದ ಸಿಬ್ಬಂದಿ.
ರಾತ್ರಿ ಪಾಳಿಯ ಕೆಲಸ ಮುಗಿಸಿ ಕಾರಿನಲ್ಲಿ ಉಡುಪಿಯತ್ತ ಹಿಂದಿರುಗುತ್ತಿದ್ದ ರಾಕೇಶ್, ಇಂದು ಮುಂಜಾನೆ 5.30 ರ ಸಮಯದಲ್ಲಿ ಉದ್ಯಾವರದ ಬಳಿ ಗ್ಯಾಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ರಾಕೇಶ್ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದವು.
ಕೂಡಲೇ ಅವರನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.
ಇದನ್ನೂ ಓದಿ: ಡಿಜಿಟಲ್ ಪಾವತಿ : ಮುಂದಿನ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯತೆ