Advertisement

ಮೂಲ್ಕಿ ನ.ಪಂ.: 14.91 ಕೋ.ರೂ. ಗಾತ್ರದ ಬಜೆಟ್‌ ಮಂಡನೆ

09:46 PM Mar 18, 2020 | Team Udayavani |

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್‌ನ 2020-21ನೇ ಸಾಲಿನ 14.91 ಕೋ.ರೂ. ವೆಚ್ಚದ ಗಾತ್ರದ ಬಜೆಟ್‌ನ ಮೂಲ್ಕಿ ತಹಶೀಲ್ದಾರ ಮಾಣಿಕ್ಯಂ ಅವರು ನ.ಪಂ.ನ ಆಡಳಿತಾಧಿಕಾರಿಯಾಗಿ 28.45 ಲಕ್ಷರೂ ಮಿಗತೆಯುಳ್ಳ ಮುಂಗಡ ಪತ್ರವನ್ನು ಬುಧವಾರ ಮಂಡಿಸಿದರು.

Advertisement

ನಗರ ಪಂಚಾಯತ್‌ ಮುಂದಿನ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 2.25 ಕೋ.ರೂ. ಅನುದಾನವನ್ನು ಬಜೆಟ್‌ನಲ್ಲಿ ನಿರೀಕ್ಷಿಸಿದರೆ, ಮುಂದಿನ ಸಾಲಿಗೆ ರೂ. 2 ಕೋಟಿ 40 ಲಕ್ಷದ ಸ್ವಂತ ಆದಾಯವನ್ನು ತನ್ನ ಮುಂಗಡ ಪತ್ರದಲ್ಲಿ ಕಾಯ್ದಿರಿಸಿದೆ.

ಮೂಲ ಸೌಕರ್ಯ
ಈ ಬಾರಿಯ ಮುಂಗಡ ಪತ್ರದಲ್ಲಿ ಮೂಲಸೌಕರ್ಯಗಳಾದ ದಾರಿ ದೀಪ, ರಸ್ತೆ, ಕುಡಿಯುವ ನೀರು, ಮಿಸೇಲಿನೀಯಸ್‌ ಖರ್ಚಿಗಾಗಿ ಮತ್ತು ವ್ಯವಸ್ಥೆಗಳಿಗೆ ರೂ. 15 ಕೋಟಿ ಖರ್ಚು ಮಾಡುವ ಯೋಜನೆಯನ್ನು ಹಂಚಿಕೆ ಮಾಡಲಾಗಿದೆ. ಸಹಾಯ ಧನಕ್ಕಾಗಿ, ಅಭಿವೃದ್ಧಿಗಾಗಿ ಮೀಸಲು ಎಸ್‌.ಎಫ್‌.ಸಿ. ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 24.10ರ ನಿಧಿಯಡಿ ರೂ.24 ಲಕ್ಷ ಮೊತ್ತವನ್ನು ಕಾಯ್ದಿರಿಸಿದರೆ ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್‌. ಕುಟುಂಬದವರಿಗೆ ಶೇ. 7.25ರ ನಿಧಿಯಡಿ ಸಹಾಯ ಧನ ಒದಗಿಸಲು ರೂ. 7 ಲಕ್ಷ ಹಾಗೂ ಭಿನ್ನ ಸಾಮರ್ಥ್ಯ ಹೊಂದಿದವರಿಗೆ ಶೇ.5ರ ನಿಧಿಯಾಗಿ ರೂ. 5ಲಕ್ಷ ಮತ್ತು ಕಚೇರಿ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗೊಳಿಸುವುದಕ್ಕಾಗಿ ತಂತ್ರಾಂಶ ಅಭಿವೃದ್ಧಿಗೆ ರೂ. 3 ಲಕ್ಷ, ಹೊಸ ದಾರಿ ದೀಪಗಳ ಖರೀದಿಗೆ ರೂ. 6 ಲಕ್ಷ, ನೀರು ಸರಬರಾಜು ಸಾಮಗ್ರಿ ಖರೀದಿಗೆ ರೂ.4 ಲಕ್ಷ, ನೀರು ಸರಬರಾಜು ಹೊರ ಗುತ್ತಿಗೆ ನಿರ್ವಹಣೆಗೆ ರೂ. 12ಲಕ್ಷ ತೆಗೆದಿರಿಸಲಾಗಿದೆ.

ವೇತನಕ್ಕೆ 60 ಲಕ್ಷ ರೂ.
ಖಾಯಂ ಸಿಬಂದಿಗಳ ವೇತನಕ್ಕಾಗಿ ರೂ. 60 ಲಕ್ಷ, ಸರಕಾರಕ್ಕೆ ಸೆಸ್‌ ಪಾವತಿಗೆ ರೂ. 65 ಲಕ್ಷ ಮತ್ತು ಸರಕಾರದ ತೆರಿಗೆಗೆ ರೂ. 59 ಲಕ್ಷ ಹಾಗೂ ವಾಹನ ಖರೀದಿಗೆ ರೂ. 30 ಲಕ್ಷ ದಾರಿ ದೀಪ ನಿರ್ವಹಣೆಗೆ ರೂ. 10ಲಕ್ಷ ಮೊತ್ತವನ್ನು ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ.

ವಾಹನ ದಟ್ಟಣೆಯನ್ನು ತಡೆಗಟ್ಟಲು ಹಾಗೂ ಬಸ್ಸು ಪಾರ್ಕಿಂಗ್‌ ಹಾಗೂ ಇತರ ಆವಶ್ಯಕತೆಗೆ ಸರಕಾರದಿಂದ ಈಗಾಗಲೇ ಬಿಡುಗಡೆಯಾದ ರೂ. 3 ಕೋಟಿ ಮೊತ್ತವನ್ನು ನೂತನ ಬಸ್ಸು ನಿಲ್ದಾಣಕ್ಕೆ ಅವಶ್ಯ ಇರುವ ಜಾಗ ಖರೀದಿ ಮತ್ತು ಬಸ್ಸು ನಿಲ್ದಾಣ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ.
ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಸ್ವಾಗತಿಸಿ ವರದಿ ದಾಖಲಿಸಿಕೊಂಡರು. ಸದಸ್ಯರ ಸಲಹೆ ಸೂಚನೆ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಸದಸ್ಯರಿಂದ ಬಂದ ಸೂಚನೆಗಳನ್ನು ಆಡಳಿತಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

Advertisement

ಮೂಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ| ಕೃಷ್ಣ, ಕೆಮ್ರಾಲ್‌ ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಡಾ| ಚಿತ್ರಾ ಹಾಗೂ ಆರೋಗ್ಯ ಸಹಾಯಕ ಪ್ರದೀಪ್‌ ಅವರು ಮಾರಕ ಕರೋನಾ ಬಗ್ಗೆ ಮಾಹಿತಿ ನೀಡಿ ನ.ಪಂ. ಸದಸ್ಯರ ಹಾಗೂ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರ ಕೋರಿದರು.

ಸ್ವಂತ ಆದಾಯದ ನಿರೀಕ್ಷೆ
ಮುಂದಿನ ಸಾಲಿಗೆ ವೇತನ ಅನುದಾನ ಮತ್ತು ಎಸ್‌.ಎಫ್‌.ಸಿ. ಮತ್ತು ವಿದ್ಯುತ್‌ ಅನುದಾನ ಸೇರಿ ರೂ. 3 ಕೋಟಿ 17 ಲಕ್ಷ ಮೊತ್ತವನ್ನು ನಿರೀಕ್ಷಿಸಲಾಗಿದ್ದು, ಆಸ್ತಿ ತೆರಿಗೆ ಮತ್ತು ಇತರ ತೆರಿಗೆ ಸೇರಿ ರೂ. 99 ಲಕ್ಷ 20 ಸಾವಿರ ಮೊತ್ತವನ್ನು ಸಂಗ್ರಹಿಸುವ ಗುರಿ ಹಾಗೂ ನೀರಿನ ಶುಲ್ಕದಲ್ಲಿ ರೂ. 32 ಲಕ್ಷದಷ್ಟು, ಕಟ್ಟಡ ಹಾಗೂ ಉದ್ಯಮ ಪರವಾನಿಗೆಯಲ್ಲಿ ರೂ. 28 ಲಕ್ಷ , ವಾಣಿಜ್ಯ ಸಂಕೀರ್ಣ ಬಾಡಿಗೆ, ಮಾರುಕಟ್ಟೆ ನೆಲ ಬಾಡಿಗೆಯಿಂದ ಸುಮಾರು 15 ಲಕ್ಷ ಆದಾಯವನ್ನು ನ.ಪಂ. ಈ ಬಾರಿ ನಿರೀಕ್ಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next