Advertisement

ಮೂಲ್ಕಿಗೆ ಅಗ್ನಿಶಾಮಕ ಘಟಕ ಮಂಜೂರು: ಜಮೀನಿಗೆ ಹುಡುಕಾಟ

03:27 PM Jun 08, 2017 | |

ಹಳೆಯಂಗಡಿ: ಮೂಲ್ಕಿಯಲ್ಲಿ ಅಗ್ನಿ ಶಾಮಕ ಘಟಕವನ್ನು ತೆರೆಯಬೇಕೆಂಬ ಹಲವು ವರ್ಷದ ಬೇಡಿಕೆಗೆ ಸರಕಾರ ಕೊನೆಗೂ ಮಣಿದಿದೆ.

Advertisement

ಘಟಕ ಸ್ಥಾಪನೆಗೆ ಸರಕಾರ ಹಸಿರು ನಿಶಾನೆ ತೋರಿದೆ. ಜಮೀನಿನ ಲಭ್ಯತೆಯನ್ನು ಆಧರಿಸಿ ಒಂದೆರಡು ತಿಂಗಳಲ್ಲಿ ಘಟಕವು ಕಾರ್ಯಾಚರಣೆ ನಡೆಸಲಿದೆ.

ಜಿಲ್ಲೆಯಲ್ಲಿ ಪಾಂಡೇಶ್ವರ, ಕದ್ರಿ, ಮೂಡಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಅಗ್ನಿಶಾಮಕ ದಳದ ಘಟಕಗಳು ತಾಲೂಕು ಮಟ್ಟದಲ್ಲಿ ಕಾರ್ಯಾಚರಿಸುತ್ತಿವೆ. ಮೂಲ್ಕಿಯಲ್ಲಿ ನಿರ್ಮಾಣವಾದರೆ ಹೋಬಳಿ ಮಟ್ಟಕ್ಕೂ ವ್ಯಾಪಿಸಿದಂತಾಗುತ್ತದೆ. 

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಧ್ಯ ಭಾಗದಲ್ಲಿನ ಮೂಲ್ಕಿಗೆ ಸುಸಜ್ಜಿತ ಅಗ್ನಿಶಾಮಕ ದಳದ ಘಟಕದ ಬೇಡಿಕೆಯನ್ನು ನಾಗರಿಕ ಸಮಿತಿಯ ನೇತೃತ್ವದಲ್ಲಿ ಹಲವು ಬಾರಿ ಮನವಿ ಮಾಡಲಾಗಿತ್ತು.

ಮೂಲ್ಕಿಯ ಸುತ್ತಮುತ್ತ ಪ್ರದೇಶಕ್ಕೆ ಘಟಕ ಅತೀ ಅಗತ್ಯವಾಗಿದ್ದು, ಕೊಲಾ°ಡು ಕೈಗಾರಿಕಾ ಪ್ರಾಂಗಣ, ಮುಕ್ಕ ಕೈಗಾರಿಕಾ ಘಟಕಗಳು, ಒಂದು ಭಾಗದಲ್ಲಿ ಸಮುದ್ರದ ಹಿನ್ನೆಲೆ, ತಗ್ಗು  ಪ್ರದೇಶಗಳಾದ ಮಟ್ಟು, ಮಾನಂಪಾಡಿ, ಕರ್ನಿರೆ, ಪಂಜ- ಕೊçಕುಡೆ, ಉಲ್ಯ, ಸಸಿಹಿತ್ಲು, ಪಕ್ಕದ ಫಲಿಮಾರು, ಪಡುಬಿದ್ರಿ, ಚೇಳಾçರು, ಪೆರ್ಮುದೆ, ಎಕ್ಕಾರು, ಬಜಪೆಯಂತಹ ಪ್ರದೇಶಗಳಿಗೂ ನೆರೆ ಹಾವಳಿ ಮತ್ತು ಇನ್ನಿತರ ದುರ್ಘ‌ಟನೆ ಸಂಭವಿಸಿದಾಗ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಜತೆಗೆ ಮುಚ್ಚಾರು, ಬೋಳ, ಐಕಳ, ಗುತ್ತಕಾಡು, ತೋಕೂರು, ತಪೋವನ, ಕೊಲ್ಲೂರು, ಬಳುRಂಜೆಯಂತಹ ಗುಡ್ಡಕಾಡು ಪ್ರದೇಶಗಳಲ್ಲಿ ಸಂಭವಿಸುವ ಅಗ್ನಿ ದುರಂತಗಳನ್ನೂ ಹತ್ತಿಕ್ಕಲು ಘಟಕದಿಂದ ಸಹಾಯವಾಗಲಿದೆ.

Advertisement

ಕಟೀಲು, ಬಪ್ಪನಾಡು ಧಾರ್ಮಿಕ ಕ್ಷೇತ್ರಗಳು, ಮೂಲ್ಕಿ ಹೋಬಳಿಯ ಹತ್ತು ಗ್ರಾಮ ಪಂಚಾಯತ್‌ಗಳು, ಒಂದು ನಗರ ಪಂಚಾಯತ್‌, ನಂದಿನಿ ಮತ್ತು ಶಾಂಭವಿ ನದಿಯ ತೀರಗಳಿವೆ. 

ಈ ಭಾಗದಲ್ಲಿ ಅವಘಡಗಳು ಸಂಭವಿಸಿದಲ್ಲಿ ಮಂಗಳೂರು, ಕದ್ರಿ, ಮೂಡಬಿದಿರೆಯಿಂದ ದಳವು ಬರಬೇಕಿದೆ. ಅವಘಡ ನಡೆದು ಎರಡು ತಾಸುಗಳ ಅಂತರದಲ್ಲಿ ಸ್ಪಂದಿಸಬೇಕಿದ್ದು, ದೂರದಿಂದ ಬರುವಾಗ ಕೆಲವೊಮ್ಮೆ ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಘಟಕ ಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. 

ಜಮೀನಿನ ಹುಡುಕಾಟ
ಅಗ್ನಿಶಾಮಕ ದಳದ ಜಿಲ್ಲಾ  ಅಗ್ನಿಶಾಮಕ ಅಧಿಕಾರಿ ಪರಮೇಶ್ವರ್‌ ಅವರು ಮೂಲ್ಕಿ ವಿಶೇಷ ತಹಶೀಲ್ದಾರ್‌ ಕಚೇರಿಯಲ್ಲಿ ಇಲ್ಲಿನ ಜಮೀನಿನ ಲಭ್ಯತೆಯನ್ನು ಪರಿಶೀಲಿಸಿದ್ದಾರೆ. 

ಕೊಲಾ°ಡು ಇಂಡಸ್ಟ್ರಿಯಲ್‌ ಪೆಟ್ರೋಲ್‌ ಪಂಪ್‌ನ ಬಳಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ  ಒಂದು ಎಕ್ರೆ ಪ್ರದೇಶವನ್ನು ಸರಕಾರವು ಮೀಸಲಿರಿಸಿದೆ ಎಂದು ಕಂದಾಯ ಅ ಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಘಟಕದ ಕಟ್ಟಡ ನಿವಿåìಸಲು ಕನಿಷ್ಠ 6 ತಿಂಗಳು ಬೇಕಿದ್ದು, ಜಮೀನಿನಲ್ಲಿ ಪಂಚಾಯತ್‌ನ ನೀರು ಸಂಗ್ರಹ ವ್ಯವಸ್ಥೆ ಇದೆ. ಈ ಜಮೀನಿನ ಒಂದಷ್ಟು ಭಾಗವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಮೂಲ್ಕಿ ನಗರ ಪಂಚಾಯತ್‌ನ ಬಳಿಯಲ್ಲಿರುವ ಶೆಡ್‌ನ‌ಲ್ಲಿ ತಾತ್ಕಾಲಿಕವಾಗಿ ಘಟಕ ಕಾರ್ಯಾಚರಿಸಬಹುದು. ಇಲ್ಲಿನ ಗಾಂಧಿ ಮೈದಾನದಲ್ಲಿ ಘಟಕದ ಕವಾಯತು ಮಾಡಬಹುದು ಹಾಗೂ ಮಡಿವಾಳ ಕೆರೆಯಲ್ಲಿನ ನೀರನ್ನು ಬಳಸಬ ಹುದು. ನ.ಪಂ. ಕಚೇರಿ ಮೂಲ್ಕಿಯ ಹೃದಯ ಭಾಗದಲ್ಲಿ ಇರುವುದರಿಂದ ತಾತ್ಕಾಲಿಕವಾಗಿ ಸುಲಭವಾಗಿ ಸಂಚರಿಸಲು ಸಾಧ್ಯವಿದೆ ಎಂದು ಈ ಹಿಂದೆ ಅಗ್ನಿಶಾಮಕ ದಳದ ಘಟಕಕ್ಕೆ ಹೋರಾಟ ನಡೆಸುತ್ತಿರುವ ಮೂಲ್ಕಿ ನಾಗರಿಕ ಸಮಿತಿ ತಿಳಿಸಿತ್ತು.

ಬೇಡಿಕೆಗೆ ಸಿಕ್ಕ ಪ್ರತಿಫಲ
ಮೂಲ್ಕಿಗೆ ಒಂದು ಅಗ್ನಿಶಾಮಕ ದಳದ ಘಟಕ ಅವಶ್ಯವಿದೆ ಎಂದು 25 ವರ್ಷದಿಂದ ಅಂದಿನ ಮೂಲ್ಕಿ ಪುರಸಭೆಯ ಅಧ್ಯಕ್ಷರಾಗಿದ್ದ ಶೇಖರ ಕೋಟ್ಯಾನ್‌ ಅವರ ಮೂಲಕ ಸರಕಾರಕ್ಕೆ ಬೇಡಿಗೆ ಸಲ್ಲಿಸಿದ್ದೆವು. ಬಳಿಕವೂ ವಿವಿಧ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸುತ್ತಲೇ ಇದ್ದೆವು. ಈಗಲಾದರೂ ಘಟಕ ಆರಂಭಿಸಲು ಮುಂದಾಗಿರುವುದು ಸೂಕ್ತ. ಕೂಡಲೇ ಸರಕಾರಿ ಜಮೀನು ಈ ಘಟಕಕ್ಕೆ ಸರಕಾರ ಮಂಜೂರು ಮಾಡಬೇಕು.

 – ಹರಿಕೃಷ್ಣ  ಪುನರೂರು ಅಧ್ಯಕ್ಷರು, ನಾಗರಿಕ ಸಮಿತಿ ಮೂಲ್ಕಿ

ತಾತ್ಕಾಲಿಕ ಬೇಡ ಶಾಶ್ವತವಾಗಿರಲಿ
ಮೂಲ್ಕಿಯಲ್ಲಿ ಅಗ್ನಿಶಾಮಕ ದಳದ ಘಟಕಕ್ಕೆ ಕೊಲಾ°ಡು ಕೈಗಾರಿಕಾ ಪ್ರಾಂಗಣದಲ್ಲಿ  ಪ್ರಶಸ್ತÂ ಸ್ಥಳಾವಕಾಶ ಇದೆ. ಇದಕ್ಕೆ ಇಲ್ಲಿನ ಕೈಗಾರಿಕಾ ಉದ್ಯಮಿಗಳು ಸಹ ಬೆಂಬಲಿಸಿದ್ದಾರೆ. ಘಟಕವು ತಾತ್ಕಾಲಿಕವಾಗಿ ಎಲ್ಲೂ ಮಾಡದೇ ನೇರವಾಗಿ ಶಾಶ್ವತವಾದ ನಿರ್ದಿಷ್ಟ ಜಮೀನಿನಲ್ಲಿಯೇ ಶೀಘ್ರವಾಗಿ ನಿರ್ಮಾಣ ಆಗಲಿ. ಮೂಲ್ಕಿಯಲ್ಲಿನ ಬೇಡಿಕೆ ಶೀಘ್ರ ಕಾರ್ಯರೂಪಕ್ಕೆ ಬರಬೇಕು.

 – ಸುನಿಲ್‌ ಆಳ್ವ  ಅಧ್ಯಕ್ಷರು,  ಮೂಲ್ಕಿ ನಗರ ಪಂಚಾಯತ್‌.

ಜಿಲ್ಲೆಯ ಗಡಿಭಾಗಕ್ಕೆ ಆದ್ಯತೆ
ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಅಗ್ನಿ ಶಾಮಕ ದಳದ ಘಟಕವನ್ನು  ನೀಡಲು ಸಾಧ್ಯವಿಲ. ಆದರೂ ಮೂಲ್ಕಿ ಪ್ರದೇಶ ಜಿಲ್ಲೆಯ ಗಡಿಭಾಗದಲ್ಲಿದೆ ಮತ್ತು ಪಕ್ಕದ ಉಡುಪಿ ಜಿಲ್ಲೆಗೂ ಇದರ ಅನುಕೂಲತೆ ಇ¨. ಎಂದು ಸರಕಾರ ಒಪ್ಪಿದೆ. ಮಂಗಳೂರು ತಾಲೂಕು ವ್ಯಾಪ್ತಿ ಹೆಚ್ಚಾಗಿದೆ, ಇದೆಲ್ಲವನ್ನು  ಗೃಹಸಚಿವರಲ್ಲಿ ಮನವರಿಕೆ ಮಾಡಿ ದ್ದರಿಂದ ಸರಕಾರವು ವಿಶೇಷವಾಗಿ ಮೂಲ್ಕಿಗೆ ಘಟಕವನ್ನು ಮಂಜೂರು ಮಾಡಿದೆ.

 – ಕೆ. ಅಭಯಚಂದ್ರ ಜೈನ್‌  ಶಾಸಕರು, ಮೂಲ್ಕಿ-ಮೂಡಬಿದಿರೆ ಕ್ಷೇತ್ರ

ಜಮೀನು ಸಿಕ್ಕಲ್ಲಿ ಘಟಕ ನಿರ್ಮಾಣ
ಮೂಲ್ಕಿಯ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿನ ಸುತ್ತಮುತ್ತ ಪ್ರದೇಶಕ್ಕೆ ಅನುಗುಣವಾಗಿ ಅಗ್ನಿಶಾಮಕ ದಳದ ಘಟಕವನ್ನು ನಿರ್ಮಿಸಲು ಸರಕಾರದ ನಿರ್ದೇಶನದಂತೆ ಗ್ರಾಮ, ಗ್ರಾಮಸ್ಥರ ಹಾಗೂ ಪರಿಸರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಂದಾಯ ಇಲಾಖೆಯ ಮೂಲಕ ಕ್ರೋಢಿಕರಿಸಿ ಮೇಲ ಧಿಕಾರಿಗಳಿಗೆ ನೀಡಿದ್ದೇವೆ. ಸೂಕ್ತವಾದ ಜಮೀನು ಸಿಕ್ಕಲ್ಲಿ ತಕ್ಷಣ ಘಟಕ ಆರಂಭವಾಗುವುದು.

– ಪರಮೇಶ್ವರ್‌,
ಜಿಲ್ಲಾ ಅಗ್ನಿಶಾಮಕ ಅಧಿಕಾರಿ

– ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next