Advertisement
ಪಡುಪಣಂಬೂರು ಬಾಕಿಮಾರು ಗದ್ದೆಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು. ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಹಳೆಯಂಗಡಿಯ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸಭಾಪಾಲಕ ರೆ| ವಿನಯಲಾಲ್ ಬಂಗೇರ, ಗೌತಮ್ ಜೈನ್ ಉಪಸ್ಥಿತರಿದ್ದರು. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಜಿಲ್ಲೆಯಲ್ಲಿ ಸಂಘಟಿಸುವ ಕಂಬಳಕ್ಕೆ 5 ಕೋ.ರೂ.ಗಳ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದೇನೆ ಎಂದರು. ಗಣ್ಯರಾದ ರೆ| ಫಾ| ವಿಕ್ಟರ್ ಡಿ’ಮೆಲ್ಲೋ, ಪ್ರಕಾಶ್ ಶೆಟ್ಟಿ ಹಳೆ ಯಂಗಡಿ, ಪಿ.ಆರ್. ಶೆಟ್ಟಿ, ಎಚ್. ವಸಂತ ಬೆರ್ನಾಡ್, ಚರಣ್ ಶೆಟ್ಟಿ ಪಕ್ಷಿಕೆರೆ, ಅಬ್ದುಲ್ ರಜಾಕ್, ಕೊಲಾ°ಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ, ಶಶೀಂದ್ರ ಎಂ. ಸಾಲ್ಯಾನ್, ಸುಚೀಂದ್ರ ಅಮೀನ್ ಬರ್ಕೆ, ಬಂಕಿ ನಾಯ್ಕ, ಸತೀಶ್ ಭಟ್ ಹೊಗೆಗುಡ್ಡೆ, ವಾಸು ದೇವ ಶೆಣೈ ಕೊಲಾಡು, ಪಂಜಗುತ್ತು ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್. ಅರವಿಂದ ಪೂಂಜ, ನವೀನ್ ಶೆಟ್ಟಿ ಎಡೆಮಾರ್, ಚಂದ್ರ ಶೇಖರ್ ಜಿ., ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಸುಂದರ ದೇವಾಡಿಗ, ದಿನೇಶ್ ಶೆಟ್ಟಿ, ದಿನೇಶ್ ಸುವರ್ಣ, ಶುಭ್ರತ್ ದೇವಾಡಿಗ, ಉಮೇಶ್ ಪೂಜಾರಿ, ಹರ್ಷಿತ್ ಡಿ. ಸಾಲ್ಯಾನ್, ನವೀನ್‌ಕುಮಾರ್ ಬಾಂದಕೆರೆ, ಕಿರಣ್ ಹೊಗೆಗುಡ್ಡೆ, ರಂಜಿತ್ ಪುತ್ರನ್, ಮನ್ಸೂರ್ ಎಚ್., ಸಾಹುಲ್ ಹಮೀದ್ ಕದಿಕೆ, ಅಮರನಾಥ ಶೆಟ್ಟಿ, ಶ್ಯಾಂಕುಮಾರ್, ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು. ರಾಮಚಂದ್ರ ನಾಯ್ಕ ಸ್ವಾಗತಿಸಿದರು, ಕೋಶಾಧಿಕಾರಿ ಕೆ. ವಿಜಯ ಕುಮಾರ್ ಶೆಟ್ಟಿ ಕೊಲಾಡು ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.