Advertisement

ಮುಲಿಮಜಲು: ಕಳಪೆ ಕಾಮಗಾರಿ ಆರೋಪ; ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಸ್ಥಳೀಯರು

11:40 AM Jan 12, 2021 | Team Udayavani |

ಕಡಬ: ಸುಬ್ರಹ್ಮಣ್ಯ-ಕಡಬ ಮುಖ್ಯ ರಸ್ತೆಯಿಂದ ನ್ಯೂಜಿಬಾಳ್ತಿಲವನ್ನು ಸಂಪರ್ಕಿಸುವ ರಸ್ತೆಯಲ್ಲಿ ಹಳೆಸ್ಟೇಶನ್ ನಿಂದ ಮುಲಿಮಜಲು ತನಕ 10 ಲಕ್ಷ ರೂ. ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಡಾಮರು ಸೀಲ್ ಕೋಟ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯ ಜನರು ಮಂಗಳವಾರ ಬೆಳಗ್ಗೆ ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

Advertisement

ಕಡಬದಿಂದ ನೂಜಿಬಾಳ್ತಿಲವನ್ನು ಸಂಪರ್ಕಿಸುವ ರಸ್ತೆಯು ಸಂಪೂರ್ಣವಾಗಿ ದುರಸ್ತಿ ಸ್ಥಿತಿಯಲ್ಲಿದ್ದು ಅದನ್ನು ದೂರಸ್ತಿಗೊಳಿಸಲು 10 ಲಕ್ಷ ರೂ. ಅನುದಾನ ಇರಿಸಲಾಗಿತ್ತು.  ಸುಳ್ಯ ಶಾಸಕ ಎಸ್.ಅಂಗಾರ ಅವರು ಕೆಲ ಸಮಯದ ಹಿಂದೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದರು. ಗುತ್ತಿಗೆದಾರರು ಸೋಮವಾರ ಕಾಮಗಾರಿ ಆರಂಭಿಸಿದ್ದರು.

ಕಾಮಗಾರಿ ಕಳಪೆಯಾಗಿರುವುದನ್ನು ಗಮನಿಸಿದ ಸ್ಥಳೀಯ ಜನರು ಆಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಮಂಗಳವಾರವೂ ಗುತ್ತಿಗೆದಾರರು ಅಸಮರ್ಪಕ ಕಾಮಗಾರಿ ಮುಂದುವರಿಸಿರುವುದನ್ನು ಕಂಡ ಸಾರ್ವಜನಿಕರು ಕಾಮಗಾರಿಗೆ ತಡೆಯೊಡ್ಡಿದ್ದಾರೆ.

ಇದನ್ನೂ ಓದಿ:ಗಾಜನೂರ್‌ ಹೆಸರಿನಲ್ಲಿ ಹೊಸಬರ ಚಿತ್ರ : ಜ. 16ಕ್ಕೆ ಚಿತ್ರದ ಮುಹೂರ್ತಕ್ಕೆ ಸಿದ್ಧತೆ

ಜಿ.ಪಂ.ಇಂಜಿನಿಯರ್ ಹುಕ್ಕೇರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದುವರೆಗೆ ಮಾಡಿದ ಕಾಮಗಾರಿಯನ್ನು ಮತ್ತೆ ಸಮರ್ಪಕವಾಗಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

Advertisement

ಸ್ಥಳೀಯ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಜಯಚಂದ್ರ ರೈ ಕುಂಟೋಡಿ, ಜನಾರ್ಧನ ರಾವ್, ಸುರೇಶ್ ಕೋಟೆಗುಡ್ಡೆ, ಶಿವರಾಮ ಶೆಟ್ಟಿ ಕೇಪು, ಶಿವಪ್ರಸಾದ್ ರೈ ಮೈಲೇರಿ, ಮನಮೋಹನ್ ರೈ, ಹರೀಶ್ ರೈ, ಸಿ.ಪಿ.ಸೈಮನ್, ರವಿರಾಜ್ ಶೆಟ್ಟಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next