Advertisement
“ಸಾಲ ಪಡೆದು ನಾನು ಈ ಕಾರನ್ನು ಖರೀದಿಸಿದ್ದೇನೆ; ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಪತ್ರಗಳು ನನ್ನ ಬಳಿ ಇವೆ; ನನ್ನ ಬಳಿಕ ಇನ್‌ಕಂ ಟ್ಯಾಕ್ಸ್ ದಾಖಲೆ ಪತ್ರಗಳೂ ಇವೆ; ಹಾಗಿರುವಾಗಿ ಈ ಅನಗತ್ಯ ವಾದ-ವಿವಾದ, ಟೀಕೆಗಳು ಯಾಕೆ?’ ಎಂದು ಪ್ರತೀಕ್ ಯಾದವ್ ಪ್ರಶ್ನಿಸಿದ್ದಾರೆ.
Related Articles
Advertisement
ರಾಜ್ಯದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಚುನಾವಣಾ ಮೈತ್ರಿಯನ್ನು ಸಮರ್ಥಿಸಿಕೊಂಡ ಪ್ರತೀಕ್, “ಈ ಮೈತ್ರಿಕೂಟ 250ಕ್ಕಿಂತ ಹೆಚ್ಚು ಅಥವಾ 300ರಷ್ಟು ಸೀಟುಗಳನ್ನು ಗೆದ್ದೇ ಗೆಲ್ಲುವುದು’ ಎಂದು ಹೇಳಿದರು.
ಪ್ರತೀಕ್ ಯಾದವ್‌ಗೆ ರಾಜಕಾರಣದಲ್ಲಿರುವ ಆಸಕ್ತಿ ಅಷ್ಟಕ್ಕಷ್ಟೇ; ಆತನ ಮನಸ್ಸು ನೆಟ್ಟಿರುವದು ವೈಭವೋಪೇತ ಮತ್ತು ಐಷಾರಾಮೀ ಜೀವನದಲ್ಲಿ ಮತ್ತು ಸುಖ ಭೋಗಗಳಲ್ಲಿ ಎಂಬ ಟೀಕೆ ಇದೆ. ಅಂದ ಹಾಗೆ ಪ್ರತೀಕ್ ಯುನಿವರ್ಸಿಟಿ ಆಫ್ ಲೀಡ್ಸ್ ನ ಪದವೀದರ; ಕುಟುಂಬದ ಅಪಾರ ಪ್ರಮಾಣದ ಆಸ್ತಿ ಪಾಸ್ತಿಯ ಉಸ್ತುವಾರಿ ಆತನದ್ದೇ !