Advertisement

ಮುಲಾಯಂ ಸೊಸೆ ಆಸ್ತಿ ಕೇವಲ 23 ಕೋಟಿ ರೂ!

03:45 AM Jan 31, 2017 | Team Udayavani |

ನವದೆಹಲಿ/ಮುಂಬೈ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಎಸ್ಪಿ ಸಂಸ್ಥಾಪ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಮತ್ತು ಅವರ ಪತಿ ಪ್ರತೀಕ್‌ ಯಾದವ್‌ ಹೊಂದಿರುವ ಆಸ್ತಿ ಮೌಲ್ಯ 23 ಕೋಟಿ ರೂ. ಲಕ್ನೋ ಕಂಟೋನ್ಮೆಂಟ್‌ ಕ್ಷೇತ್ರದಿಂದ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. 

Advertisement

ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರಗಳನ್ನೂ ಅಫಿಡವಿಟ್‌ ಮೂಲಕ ಅರ್ಪಣಾ ನೀಡಿದ್ದಾರೆ. ಅದರ ಪ್ರಕಾರ ಒಂದು ಲಾಂಬ್ರೋಗಿನಿ ಕಾರು ಕೂಡ ಸೇರಿದೆ. ಚರ ಆಸ್ತಿಯ ಮೌಲ್ಯ 3.27 ಕೋಟಿ ಮತ್ತು ಅವರ ಪತಿ 13.41 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಆದಾಯ ತೆರಿಗೆ ವಿವರ ನೀಡಿದ ಮುಲಾಯಂರ ಎರಡನೇ ಸೊಸೆ 2015-16ನೇ ಸಾಲಿನಲ್ಲಿ 50.18 ಲಕ್ಷ ಮತ್ತು ಅವರ ಪತಿ ಪ್ರತೀಕ್‌ ಯಾದವ್‌ 1.47 ಕೋಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಅಪರ್ಣಾ ಹೆಸರಲ್ಲಿ ಯಾವುದೇ ವಾಹನ ಇಲ್ಲ. ಆದರೆ 1.88 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದರೆ, ಸಾಲ ಮತ್ತು ಇತರ ವಿಚಾರಗಳು 8.54 ಕೋಟಿ ಇವೆ. ಮಲ ಸಹೋದರ, ಮುಖ್ಯಮಂತ್ರಿ ಅಖೀಲೇಶ್‌ ಬಳಿಯಿಂದ ಅವರ ಪತಿ ಪ್ರತೀಕ್‌ 81.50 ಲಕ್ಷ ಸಾಲ ಪಡೆದುಕೊಂಡಿರುವುದನ್ನು ಉಲ್ಲೇಖೀಸಿದ್ದಾರೆ.

ಶಾಸಕನಾದರೆ ಕರ್ಫ್ಯೂ ಜಾರಿ ಮಾಡುವೆ: ಸುರೇಶ್‌ ರಾಣಾ 
2013ರ ಮುಜಾಫ‌ರ್‌ನಗರ್‌ ಗಲಭೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಸುರೇಶ್‌ ರಾಣಾ ಪುನಃ ವಿವಾದಿತ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. 

“ಶಾಸಕನಾಗಿ ನಾನು ಆರಿಸಿಬಂದರೆ ಕೈರಾಣ ಕ್ಷೇತ್ರದಲ್ಲಿ ಸದಾ ಕರ್ಫ್ಯೂ ಜಾರಿ ಮಾಡುತ್ತೇನೆ’ ಎಂದು ಹೇಳಿದ್ದಾರೆ. ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಡಿಯಲ್ಲಿ ಕೇಸು ದಾಖಲಿಸಲಾಗಿದೆ.

Advertisement

ಪರ್ರಿಕರ್‌ ವಿರುದ್ಧ ಪ್ರಕರಣ
“ಹಣ ತೆಗೆದುಕೊಳ್ಳಿ, ಆದರೆ ಆಪ್‌ಗೆ ಮತ ಚಲಾಯಿಸಿ’ ಎಂದು ಹೇಳಿಕೆ ನೀಡಿದ್ದ ಆಪ್‌ನ ಅರವಿಂದ ಕೇಜ್ರಿವಾಲ್‌ ಮಾದರಿಯಲ್ಲಿಯೇ ಗೋವಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದೆ. ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌, “ಯಾರಾದರೂ ರ್ಯಾಲಿಗೆ ಕರೆದರೆ, ಆ ಅಭ್ಯರ್ಥಿ ನೀಡುವ 500 ರೂ.ಗಳನ್ನು ಧಾರಾಳವಾಗಿ ತೆಗೆದುಕೊಳ್ಳಿ. ಆದರೆ, ಮತ ಮಾತ್ರ ಕಮಲಕ್ಕೆ ನೀಡಿ’ ಎಂದು ಚಿಂಬೆಲ್‌ ಪ್ರದೇಶದಲ್ಲಿ ಮತದಾರರಿಗೆ ಹೇಳಿದ್ದಾರೆ. ಈ ಹಿಂದೆ ಕೇಜ್ರಿವಾಲ್‌ ವಿರುದ್ಧ ಚುನಾವಣಾ ಆಯೋಗ ಎಫ್ಐಆರ್‌ ದಾಖಲಿಸಿತ್ತು.  ಇದೀಗ ಪೆರ್ರಿಕರ್‌ ವಿರುದ್ಧವೂ ಕೇಸು ದಾಖಲಿಸಲಾಗಿದೆ.  

ಚಪ್ಪಲಿಪೂಜೆ
“ನನ್ನನ್ನು ಕ್ಷಮಿಸಿ ಬಿಡಿ’ ಎನ್ನುತ್ತಾ ಮತದಾರರ ಮುಂದೆ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡ ಎಸ್ಪಿ ಅಭ್ಯರ್ಥಿಯ ವಿಡಿಯೋ ಇದೀಗ ವೈರಲ್‌ ಆಗಿದೆ. ಎರಡು ದಿನಗಳ ಕೆಳಗೆ ಈ ಘಟನೆ ನಡೆದಿದ್ದು, ಸಮಾಜವಾದಿ ಪಕ್ಷದ ಶುಜತ್‌ ಅಲಂ ಕಳೆದೆರಡು ಬಾರಿ ಎಸ್ಪಿ ಪರವಾಗಿ ಬುಲಂದ್‌ ಶಹರ್‌ನಲ್ಲಿ ಸ್ಪರ್ಧಿಸಿ ಸೋತಿದ್ದಕ್ಕೆ ಚಪ್ಪಲಿ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next