Advertisement
ಬಲ್ಲ ವೃತ್ತ, ಕಾಯ್ದಿರಿಸಬೇಕು 415 ಎಕರೆ: ತಾಲೂಕಿನ ಆವಣಿ ಹೋಬಳಿಯಲ್ಲಿ ಬಲ್ಲ ವೃತ್ತದಲ್ಲಿ ಕಾಶೀಪುರ, ಬಲ್ಲ, ಕೆ.ಚದುಮನಹಳ್ಳಿ, ಶೆಟ್ಟಿಬಣಕನಹಳ್ಳಿ ಗ್ರಾಮ ಗಳಲ್ಲಿ 384 ಎಕರೆ ಗೋಮಾಳವಿದ್ದು ಬಲ್ಲ ಮತ್ತು ಕಾಶೀಪುರದಲ್ಲಿ ಉಳಿದ 44 ಎಕರೆ ಜಮೀನನ್ನು ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು 32 ಎಕರೆ ಉಳಿಕೆ ಇರುತ್ತದೆ. ಈ ಹಳ್ಳಿಗಳಲ್ಲಿ 1,395 ಜಾನುವಾರುಗಳಿದ್ದು ಹಿಂ ದಿನ ಸರ್ಕಾರಿ ಆದೇಶದಂತೆ 100 ಜಾನುವಾರುಗಳಿಗೆ 37 ಎಕರೆ ಜಮೀನು ಕಾಯ್ದಿರಿಸಬೇಕೆಂಬ ನಿಯಮದಂತೆ ಜಾನುವಾರು ಸಂರಕ್ಷಣೆಗಾಗಿ 415 ಎಕರೆ ಜಮೀನು ಕಾಯ್ದಿರಿಸಬೇ ಕಾಗಿತ್ತು. ಆದರೆ ಒಂದೇ ಒಂದು ಎಕರೆ ಜಮೀನನ್ನೂ ಸಹ ಕಾಯ್ದಿರಿಸ ಲಾಗಿಲ್ಲ ಆದ್ದರಿಂದ ಜಾನುವಾರುಗಳ ಸಂರಕ್ಷಣೆ ಹೇಗೆ ಎಂಬ ಆತಂಕ ಸಾಕಾಣಿಕೆದಾರರಿಗೆ ಎದುರಾಗಿದೆ.
Related Articles
Advertisement
ಊ.ಮಿಟ್ಟೂರು ವೃತ್ತ: ಆವಲಮರಕಲಘಟ್ಟ, ಊ. ಮಿಟ್ಟೂರು, ನಾಗಸಂದ್ರ, ಬಂಡಹಳ್ಳಿ ಗ್ರಾಮಗಳಲ್ಲಿ ಕಾಯ್ದಿ ರಿಸಿದ್ದ 501 ಎಕರೆ ಗೋಮಾಳದಲ್ಲಿ ಉಳಿದ 67 ಎಕರೆ ಜಮೀನನ್ನು ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುತ್ತಾರೆ. 1,588 ಜಾನುವಾರುಗಳಿದ್ದು 473 ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ 110 ಎಕರೆ ಜಮೀನು ಮಾತ್ರ ಉಳಿಕೆ ಇರುತ್ತದೆ.
ರೆಡ್ಡಿಹಳ್ಳಿ ವೃತ್ತ: ಚೆನ್ನಾಪುರ, ರೆಡ್ಡಿಹಳ್ಳಿ, ಕಗ್ಗಿನಹಳ್ಳಿ,ಯಡಹಳ್ಳಿ, ಬೊಮ್ಮಸಂದ್ರ, ಶೇಷಾಪುರ, ವೀರಶೆಟ್ಟಿಹಳ್ಳಿ, ಚಿತ್ತೇರಿ, ಕಮ್ಮರಕುಂಟೆಯಲ್ಲಿ 497 ಎಕರೆ ಗೋಮಾಳ ದಲ್ಲಿ 2,562 ಜಾನುವಾರುಗಳಿಗೆ 765 ಎಕರೆ ಕಾಯ್ದಿರಿ ಸಬೇಕಾಗಿದ್ದು 52 ಎಕರೆ ಮಾತ್ರ ಉಳಿಕೆ ಇರುತ್ತದೆ. ಅಂಗೊಂಡಹಳ್ಳಿ ವೃತ್ತ: ಸುಣ್ಣಂಗೂರು, ಅಂ ಗೊಂ ಡಹಳ್ಳಿ, ಹೊನಗಾನಹಳ್ಳಿ, ಬೆಳಪನಹಳ್ಳಿ, ಕೊರವೇನೂರು ಗ್ರಾಮಗಳಲ್ಲಿನ 434 ಎಕರೆ ಗೋಮಾಳದಲ್ಲಿ ಉಳಿದಿರುವ 126 ಎಕರೆ ಜಮೀನನ್ನು ಅನಧಿಕೃತವಾಗಿ
ಸಾಗು ವಳಿ ಮಾಡುತ್ತಿರುತ್ತಾರೆ. 2,381 ಜಾನುವಾರುಗಳಿಗೆ 7,11 ಎಕರೆ ಕಾಯ್ದಿರಿಸಬೇಕಾಗಿತ್ತಾದರೂ ಒಂದೇ ಒಂದು ಎಕರೆ ಜಮೀನು ಉಳಿಕೆ ಇರುವುದಿಲ್ಲ. ದೇವರಾಯಸಮುದ್ರ ವೃತ್ತ: ಬೆಳ್ಳಂಬಳ್ಳಿ, ದೇವರಾಯಸಮುದ್ರ, ದೊಡ್ಡಿಗಾನಹಳ್ಳಿ, ಕನ್ನಸಂದ್ರ ವೃತ್ತಕ್ಕೆ ಬಾದೇನಹಳ್ಳಿ, ಮಜರಾ ಅತ್ತಿಕುಂಟೆ, ತಿರುಮನಹಳ್ಳಿ, ಕನ್ನಸಂದ್ರ ಗ್ರಾಮಗಳಲ್ಲಿನ 1,721 ಎಕರೆ ಗೋಮಾಳದಲ್ಲಿ 1,459 ಜಾನುವಾರುಗಳಿಗೆ 4,37 ಎಕರೆ ಕಾಯ್ದಿರಿಸಬೇಕಾಗಿತ್ತು. 141 ಎಕರೆ ಉಳಿಕೆ ಇರುತ್ತದೆ. ದೇವರಾಯಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿದೆ, ಅಂತೆಯೇ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಆದರೆ ಜಾನುವಾರುಗಳಿಗೆ ಒಂದೇ ಒಂದು ಎಕರೆಯೂ ಕಾಯ್ದಿರಿಸಿಲ್ಲ.
ಯಳಗೊಂಡಹಳ್ಳಿ ವೃತ್ತ: ಮಿಣಜೇನಹಳ್ಳಿ,ಯಳಗೊಂಡಹಳ್ಳಿ, ಪಿಚ್ಚಗುಂಟ್ಲಹಳ್ಳಿ, ಚಿಯಾಂಡಹಳ್ಳಿ, ಕೀಲು ಹೊಳಲಿ, ದೊಡ್ಡಹೊನ್ನಶೆಟ್ಟಿಹಳ್ಳಿ, ಕೆಂಂಪಾಪುರ, ಹೊಸಕೆರೆ, ಪುತ್ತೇರಿ ಗ್ರಾಮಗಳಲ್ಲಿನ 1,721 ಎಕರೆ ಗೋಮಾಳದಲ್ಲಿ 1,459 ಜಾನುವಾರುಗಳಿಗೆ 437 ಎಕರೆಕಾಯ್ದಿರಿಸಬೇಕಾಗಿತ್ತು. ಆದರೆ 141 ಎಕರೆ ಮಾತ್ರ ಉಳಿಕೆ ಇರುವುದರಿಂದ ಯಾವುದೇ ಹಳ್ಳಿಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹುಲ್ಲುಗಾವಲು ಇಲ್ಲದೇ ಇರುವುದರಿಂದ ಮುಂದೆ ಜಾನುವಾರುಗಳ ಸಂರಕ್ಷಣೆ ಹೇಗೆ ಎಂಬ ಆತಂಕ ದನಗಾಹಿಗಳಲ್ಲಿ ಎದುರಾಗಿರುತ್ತದೆ. ಒಟ್ಟಿನಲ್ಲಿ ಸರ್ಕಾರದ ವಿವಿಧ ಕಲ್ಯಾಣ ಹಾಗೂ ಮೂಲಭೂತ ಸೌಕರ್ಯದ ಯೋಜನೆಗಳಿಗಾಗಿ ಮತ್ತು ವಸತಿ, ಸ್ಮಶಾನ ಭೂಮಿಯಂತಹ ಸಾರ್ವಜನಿಕ ಉದ್ದೇಶ ಗಳಿಗೆ ಸರ್ಕಾರಿ ಜಮೀನಿನ ತೀವ್ರ ಕೊರತೆಯಿದೆ.
ಇದನ್ನೂ ಓದಿ :ಕ್ರೀಡಾ ಮನೋಭಾವದಿಂದ ಆಟೋಟದಲ್ಲಿ ಪಾಲ್ಗೊಳ್ಳಿ : ಡಿಸಿ ಮಹಾಂತೇಶ
ಖಾಸಗಿಯವರಿಂದಲೇ ಸರ್ಕಾರಕ್ಕೆ ಜಮೀನು ಖರೀದಿಸುವಂತಹ ಅನಿವಾರ್ಯವಾಗಿರುವ ಕಾರಣ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿಯಲ್ಲಿ ಜಮೀ ನು ಮಂಜೂರು ಮಾಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜಾನುವಾರುಗಳ ಸಂರಕ್ಷಣೆ ಕಾಯ್ದೆಯನ್ನು ಪರಿಪಾಲಿಸಬೇಕಾಗಿದೆ.