Advertisement

7ರಂದು ಅಬಕಾರಿ ಸಚಿವರ ವಿರುದ್ಧ ಪ್ರತಿಭಟನೆ

04:36 PM Mar 05, 2020 | Team Udayavani |

ಮುಳಬಾಗಿಲು: ತಾಲೂಕಿನಲ್ಲಿರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು. ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲು ಸಂಬಂಧಿಸಿದಂತೆ ಮೌನ ತಾಳಿರುವ ಅಬಕಾರಿ ಸಚಿವರ ವಿರುದ್ಧ ಮಾ.7ರಂದು ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಲು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕಿನಲ್ಲಿ ಸತತವಾಗಿ 20 ವರ್ಷಗಳಿಂದ ಭೀಕರ ಬರಗಾಲ ಉಂಟಾಗಿರುವುದರಿಂದ ಕೃಷಿಗೆ ನೀರಿಲ್ಲದೆ ಸಾವಿರಾರು ರೈತರು ಕೃಷಿಯಿಂದ ವಿಮುಖರಾಗಿ, ಬೆಂಗಳೂರು ಹಾಗೂ ಮತ್ತಿತರ ದೊಡ್ಡ ದೊಡ್ಡ ನಗರಗಳತ್ತ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಆದರೆ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು, ರಾಜಕಾರಣಿಗಳ ಗುಲಾಮರಾಗಿದ್ದು, ರಾಜಕಾರಣಿಗಳು ಕರೆದರೇ ನಿಮಿಷಗಳಲ್ಲಿ ಸ್ಥಳದಲ್ಲಿರುತ್ತಾರೆ. ಆ ನಂತರ ಕಚೇರಿಗಳಲ್ಲಿ ಜನರ ಕೈಗೆ ಸಿಗದೆ ಓಡಾಡುತ್ತಿರುವುದರಿಂದ ತಾಲೂಕು ಆಡಳಿತ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದರು.

ದಿ.ಡಿ.ಕೆ.ರವಿ ರವರ ಕನಸಿನ ಕೂಸಾದ ಕೆ.ಸಿ.ವ್ಯಾಲಿ ನೀರನ್ನು ಸಂಸ್ಕರಿಸಿ ಕೋಲಾರದ 126 ಕೆರೆಗಳಿಗೆ ಹರಿಸಬೇಕೆಂದು ಕಂಡಿದ್ದ ಕನಸನ್ನು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್‌ ಸರ್ಕಾರದ ಮೇಲೆ ಒತ್ತಡ ಹಾಕಿ ಕೆರೆಗಳಿಗೆ ನೀರು ಹರಿಸುತ್ತಿರುವುದು ಸ್ವಾಗರ್ತಾಹ. ಅಂತೆಯೇ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಗಳಲ್ಲಿನ ಕೆರೆಗಳಿಗೆ ನೀರು ಹರಿಸುತ್ತಿದ್ದರೆ, ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರು ಮೌನವಾಗಿರುವುದು ಏಕೆ? ಅಸಮಾನಧಾನ ವ್ಯಕ್ತಪಡಿಸಿದರು.

ತಾಲೂಕು ಗೌರವಾದ್ಯಕ್ಷ ಅಣ್ಣಿಹಳ್ಳಿ ನಾಗರಾಜ್‌ ಮಾತನಾಡಿ, ಪೂರ್ವಜರು ಕಟ್ಟಿ ಉಳಿಸಿರುವ ಕೆರೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳು ರಕ್ಷಿಸದೇ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದರಿಂದ ದಿನೇ ದಿನೆ ಕಣ್ಮರೆಯಾಗುತ್ತಿವೆ. ಆದರೆ ತಾಲೂಕು ಆಡಳಿತ ಮಾತ್ರ ಕೆರೆಗಳ ಒತ್ತುವರಿ, ತೆರವು ಮಾಡಿ ಅಭಿವೃದ್ಧಿಗೊಳಿಸುವಲ್ಲಿ ವಿಫ‌ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್‌ ಶ್ರೀನಿವಾಸ್‌, ತಾಲೂಕು ಅಧ್ಯಕ್ಷ ಫಾರೂಕ್‌ ಪಾಷ, ಯಲುವಳ್ಳಿ ಪ್ರಭಾಕರ್‌, ಜಿಲ್ಲಾಧ್ಯಕ್ಷೆ ಎ.ನಳಿನಿ, ಜಗದೀಶ್‌, ರವಿ, ವಿನೋದ್‌, ಸುಧಾಕರ್‌, ಹೆಬ್ಬಣಿ ಆನಂದರೆಡ್ಡಿ, ಕೇಶವ, ವೇಣು, ನವೀನ್‌, ಜುಬೇರ್‌ ಪಾಷ, ಮಂಜುನಾಥ್‌, ವಡ್ಡಹಳ್ಳಿ ಮಂಜುನಾಥ್‌, ಐತಾಂಡಹಳ್ಳಿ ಮಂಜುನಾಥ್‌, ಹರೀಶ್‌, ನಾರಾಯಣಸ್ವಾಮಿ ವೆಂಕಟೇಶ್‌, ಅನಿಲ್‌, ವೆಂಕಟರಾಮಪ್ಪ, ರಾಜು, ಪ್ರಸಾದ್‌, ಕುಮಾರ್‌ ಸಭೆಯಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next