Advertisement
ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192ಎ ಅನ್ವಯ ಒತ್ತುವರಿದಾರರನ್ನು ಶಿಕ್ಷೆಗೆ ಗುರಿಪಡಿಸಲು ಕಾಯ್ದೆಯಲ್ಲಿ ಈಗಾಗಲೇ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ವರದಿಗಳ ಅನ್ವಯ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿಗಳ ಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವುಗೊಳಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್ 2013ರ ಮೇ 27 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.
Related Articles
ಜಿಲ್ಲಾಧಿಕಾರಿಗಳು ಗಮನಹರಿಸಲಿ
ತಹಶೀಲ್ದಾರ್ ಎಂ.ಗಂಗಪ್ಪ ವರ್ಗಾವಣೆ ಯಾಗಿದ್ದರಿಂದ ನಂತರ ತಹಶೀಲ್ದಾರ್ ಆಗಿ ಬಂದ ತಹಶೀಲ್ದಾರ್ ಕಾಂತವೀರಯ್ಯ ಆಗಲಿ, ಅಥವಾ ಆ ನಂತರ ಬಂದ ಹಲವು ತಹಶೀಲ್ದಾರ್‌ಗಳು ಯಾವುದೇ ಕಾರ್ಯ ಕೈಗೊಳ್ಳಲಿಲ್ಲ. ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುವ ಬಿ.ಎನ್.ಪ್ರವೀಣ್ ಅವರು ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಗಮನಹರಿಸಿಲ್ಲ. ಹೀಗಾಗಿ ಉಳಿದ ಕೆರೆಗಳು ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿವೆ. ಇದರಿಂದ ಕನ್ನಸಂದ್ರ ಕೆರೆ ಸೇರಿದಂತೆ ಹಲವಾರು ಕೆರೆಗಳು, ರಾಜಕಾಲುವೆಗಳು ಹಾಗೂ ಮತ್ತಿತರ ಸರ್ಕಾರಿ ಜಮೀನುಗಳಲ್ಲಿ ಮತ್ತಷ್ಟು ಒತ್ತುವರಿ ನಡೆಯುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮುಳಬಾಗಿಲು ತಾಲೂಕು ತಹಶೀಲ್ದಾರ್ ಗಂಗಪ್ಪ ಸೇವೆಯ ಅವಧಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಬಹುತೇಕ ಕೆರೆಗಳನ್ನು ಸರ್ವೇ ಮಾಡಿಸಿದ್ದಾರೆ. ಉಳಿದಿರುವ ಕೆರೆ ಮತ್ತು ರಾಜಕಾಲುವೆಗಳನ್ನು ಇದುವರೆಗೂ ಯಾವುದೇ ತಹಶೀಲ್ದಾರರು ಒತ್ತುವರಿ ತೆರವುಗೊಳಿಸಿಲ್ಲ.
● ಸಂಗಸಂದ್ರ ವಿಜಯಕುಮಾರ್, ದಸಂಸ(ಸಂಯೋಜಕ) ರಾಜ್ಯ ಸಂಘಟನಾ ಸಂಚಾಲಕ ವರದಿ ಬಳಿಕ ಕ್ರಮ ತೆರವುಗೊಳಿಸದೇ ಬಾಕಿ ಉಳಿದಿರುವ ಕೆರೆಗಳ ವಿವರ ಸಲ್ಲಿಸಲು 2 ತಿಂಗಳ ಹಿಂದೆ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ. ಈ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
● ಸಂಗಸಂದ್ರ ವಿಜಯಕುಮಾರ್, ದಸಂಸ(ಸಂಯೋಜಕ) ರಾಜ್ಯ ಸಂಘಟನಾ ಸಂಚಾಲಕ ವರದಿ ಬಳಿಕ ಕ್ರಮ ತೆರವುಗೊಳಿಸದೇ ಬಾಕಿ ಉಳಿದಿರುವ ಕೆರೆಗಳ ವಿವರ ಸಲ್ಲಿಸಲು 2 ತಿಂಗಳ ಹಿಂದೆ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ. ಈ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಎಂ.ನಾಗರಾಜಯ್ಯ
Advertisement