Advertisement
“ಇದು ರಾಜಕೀಯ ವಾಸ್ತವತೆಯ ಕುರಿತ ಸಿನಿಮಾ. ಇಲ್ಲಿ ಮತದಾರರಿಗೂ ಒಂದು ಸಂದೇಶವಿದೆ. ಸಮಾಜದಲ್ಲಿ ಆಗುತ್ತಿರುವ ಭ್ರಷ್ಟತೆ, ಮೌಡ್ಯತೆಯನ್ನು ಇಲ್ಲಿ ತೋರಿಸಲಾಗಿದೆ. ಕೆಟ್ಟ ರಾಜಕಾರಣಿಗಳು ಹೇಗೆಲ್ಲಾ ಜನರನ್ನು ವಂಚಿಸುತ್ತಾರೆ ಎಂಬುದು ಚಿತ್ರದ ಕಥೆ. ಒಂದು ಶೌಚಾಲಯ ಹಗರಣ ದೊಡ್ಡ ಸುದ್ದಿಯಾದಾಗ, ಮುಖ್ಯಮಂತ್ರಿ ಕಳೆದೋಗ್ತಾನೆ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ಕಥೆಗೆ ಪೂರಕವಾಗಿ ಹಾಡುಗಳಿವೆ. ಇಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಬಾಬು ಹಿರಣ್ಣಯ್ಯ ಚಿತ್ರದ ಹೈಲೆಟ್. ಅವರಿಲ್ಲಿ ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೊಬ್ಬ ಮುಖ್ಯಮಂತ್ರಿ ಇದ್ದಾರೆ. ಅದು ಸಿನಿಮಾದಲ್ಲೇ ನೋಡಬೇಕು’ ಅಂದರು ಶಿವಕುಮಾರ್.
ನಾಟಕ ಮಾಡುತ್ತ ಬಂದಿದ್ದಾರೆ. ಅವರು ನಾಟಕ ಮಾಡಿದ್ದು ಬದಲಾವಣೆ ಸಿಗುತ್ತೆ ಅಂತ ಅಲ್ಲವಂತೆ. “”ಲಂಚಾವತಾರ’ದಿಂದ ಹಿರಣ್ಣಯ್ಯ ಅವರ ಹೊಟ್ಟೆಪಾಡು ಆಯೆ¤à ವಿನಃ, ಸಮಾಜ ಬದಲಾಗಲಿಲ್ಲ ಎಂಬುದು ಬಾಬು ಹಿರಣ್ಣಯ್ಯ ಅವರ ಮಾತು. ಇಲ್ಲಿ ಶಿವಕುಮಾರ್ ಅವರ ಕಥೆ ಚೆನ್ನಾಗಿದೆ. ಇದರ ಮೂಲಕ ಬದಲಾವಣೆ ಆಗುತ್ತೆ ಅಂತ ಹೇಳಲ್ಲ. ಆದರೆ, ವಾಸ್ತವತೆಯನ್ನು ಚೆನ್ನಾಗಿ ಬಿಂಬಿಸಲಾಗಿದೆ. ನೋಡುಗರಿಗೆ ಸ್ವಲ್ಪವಾದರೂ ನಾಟಿದರೆ ಸಾಕು’ ಅಂದರು ಬಾಬು ಹಿರಣ್ಣಯ್ಯ.ಅಂದು ಶುಭಹಾರೈಸಲು ಬಿ.ಟಿ.ಲಲಿತಾ ನಾಯ್ಕ ಬಂದಿದ್ದರು. ಆಲೂರು ನಾಗಪ್ಪ ಚಿತ್ರದ ನಾಯಕ ಭರತ್ ಭದ್ರಯ್ಯ ಅವರಿಗೆ “ನ್ಯಾಚುರಲ್ ಸ್ಟಾರ್’ ಬಿರುದು ಕೊಟ್ಟು ಖುಷಿಯಾದರು. ನಾಯಕಿ ಅಮೂಲ್ಯ ರಾಜ್ ಮೊದಲ ಸಿನಿಮಾದ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ನಯನ್ ನಾಲ್ಕು ಹಾಡುಗಳ ಬಗ್ಗೆ ಹೇಳಿಕೊಂಡರು. ಎಲ್ಲರೂ ಮಾತಾಡಿ ಮುಗಿಸುವ ಹೊತ್ತಿಗೆ, ಸಮಯ ಮೀರಿತ್ತು, ಪತ್ರಿಕಾಗೋಷ್ಠಿಗೂ ತೆರೆಬಿತ್ತು.