Advertisement

ಅಟಾರ್ನಿ ಜನರಲ್ ಆಗಿ ಮುಕುಲ್ ಮತ್ತೆ ನೇಮಕವಾಗಲಿದ್ದಾರೆ

05:50 PM Sep 13, 2022 | Team Udayavani |

ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭಾರತದ ಅಟಾರ್ನಿ ಜನರಲ್ ಆಗಿ ನೇಮಕವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಮುಕುಲ್ ರೋಹಟಗಿ ಅವರು ಜೂ. 2017 ರಲ್ಲಿ ಅಟಾರ್ನಿ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕೆ. ಕೆ ವೇಣುಗೋಪಾಲ್ ಅಧಿಕಾರ ವಹಿಸಿಕೊಂಡಿದ್ದರು.

ವೇಣುಗೋಪಾಲ್ ಅವರ ವಿಸ್ತೃತ ಅಧಿಕಾರಾವಧಿಯು ಸೆ. 30 ರಂದು ಕೊನೆಗೊಳ್ಳುತ್ತದೆ. ಅವರು ಐದು ವರ್ಷಗಳ ಕಾಲ ಕೇಂದ್ರದ ಉನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅವರು 2020 ರಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದಾಗ, 91 ವರ್ಷದ ಶ್ರೀ ವೇಣುಗೋಪಾಲ್ ಅವರು ತಮ್ಮ ವಯಸ್ಸಿನ ಕಾರಣ ನೀಡಿ ಹುದ್ದೆಯಿಂದ ಕೆಳಗಿಳಿಸುವಂತೆ ಕೇಂದ್ರ ಸರಕಾರವನ್ನು ವಿನಂತಿಸಿಕೊಂಡಿದ್ದರು.

ಆದರೆ, ಇನ್ನೊಂದು ಅವಧಿಗೆ ಮುಂದುವರಿಯುವಂತೆ ಸರಕಾರ ಕೇಳಿಕೊಂಡಿತು. ಈ ಪ್ರಕಾರವಾಗಿ ಆದರೆ ಕೇವಲ ಎರಡು ವರ್ಷಗಳಿಗೆ ವೇಣುಗೋಪಾಲ್ ಹುದ್ದೆಯನ್ನು ವಿಸ್ತರಿಸಿಕೊಂಡರು. ಸೆ.30 ನಂತರ ಅಧಿಕಾರಾವಧಿಯಲ್ಲಿ ಇರುವುದಿಲ್ಲ ಎಂದ ವೇಣುಗೋಪಾಲ್ ಸರಕಾರಕ್ಕೆ ಸೂಚಿಸಿದ್ದರು.

ಮುಕುಲ್ ರೋಹಟಗಿ ಅ.1 ರಂದು ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement

2017 ರಲ್ಲಿ ರೋಹಟಗಿ ಅವರು ಅಧಿಕಾರವನ್ನು ತೊರೆದ ನಂತರವೂ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ಸೂಕ್ಷ್ಮ ಕಾನೂನು ವಿಷಯಗಳ ಬಗ್ಗೆ ಸರ್ಕಾರವು ಅವರನ್ನು ಸಂಪರ್ಕಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

2014 ರಲ್ಲಿ ಬಿಜೆಪಿ ಭಾರಿ ಜನಾದೇಶವನ್ನು ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ ರೋಹಟಗಿ ಅವರನ್ನು ಸರಕಾರದ ಉನ್ನತ ವಕೀಲರಾಗಿ ನೇಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next