Advertisement

ಮುಕುಲ-ಯುಗಲ-ಬಹುಲ ನೃತ್ಯೋತ್ಸವ ಝಲಕ್‌

04:21 PM Feb 03, 2018 | Team Udayavani |

ನೃತ್ಯೋತ್ಸವ ನೋಡುವುದೇ ಒಂದು ಸೊಗಸು. ಇತ್ತೀಚೆಗೆ ಸಾಧನ ಸಂಗಮ ನೃತ್ಯ ಕೇಂದ್ರವು “ಮುಕುಲ-ಯುಗಲ-ಬಹುಲ ಶಾಸ್ತ್ರೀಯ ನೃತ್ಯೋತ್ಸವ’ವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿತು. ಒಟ್ಟು ಮೂರು ದಿನ, ಮೂರು ಸ್ಥಳಗಳಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿನ್ಯಾಸ ಮಾಡಿದ್ದು ನೃತ್ಯ ಗುರು ಜ್ಯೋತಿ ಪಟ್ಟಾಭಿರಾಮ್‌ ಅವರು.

Advertisement

ಕಾರ್ಯಕ್ರಮದ ಉದ್ದಕ್ಕೂ ನಿಪುಣ, ಪರಿಣತರು ಈಗಷ್ಟೇ ಗೆಜ್ಜೆ ಕಟ್ಟಿ ವೇದಿಕೆ ಮೇಲೆ ಹೆಜ್ಜೆ ಇಡುವ ಕಿರಿಯರಿಗೆ ಹೇಗೆ ಮಾರ್ಗದರ್ಶಕರಾಗುತ್ತಾರೆ ಎನ್ನುವುದಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಅಷ್ಟೇ ಅಲ್ಲ, ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ರಾಗಿಣಿ ಸಂಗೀತ ನೃತ್ಯಾಲಯ, ನಾಟ್ಯ ಸಿಂಚನ ಸಂಗೀತ ನೃತ್ಯಶಾಲೆ, ವೆಂಕಟೇಶ ನಾಟ್ಯ ಮಂದಿರ, ಸ್ಫೂರ್ತಿ ನೃತ್ಯಶಾಲೆ, ಶ್ರುತ ನೃತ್ಯಶಾಲೆ, ರಾಜರಾಜೇಶ್ವರಿ ಕಲಾನಿಕೇತನ, ನೃತ್ಯಗಾನ ಅಕಾಡೆಮಿ, ನೃತ್ಯ ಕಲಾಮಂದಿರಂನ ಕಲಾದರಿಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. 

ನೃತ್ಯಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕಲಾವಿದರಿಗೆ ಇದೇ ವೇಳೆ “ಕಲಾಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭರತಾಂಜಲಿ ನಾಟ್ಯ ಶಾಲೆಯ ಗುರು ಶ್ರೀಮತಿ ಸೀತಾ ಗುರುಪ್ರಸಾದ್‌, ಕೈಸಿಕಿ ನಾಟ್ಯವಾಹಿನಿ ಕೇಂದ್ರದ ಗುರು ಶ್ರೀಮತಿ ಮಾಲಾ ಶಶಿಕಾಂತ್‌, ಮೃದಂಗ ಕಲಾವಿದರಾದ ವಿದ್ವಾನ್‌ ಶ್ರೀಹರಿ ರಂಗಸ್ವಾಮಿ, ಪ್ರಸಾಧನ ಕಲಾವಿದ ನೃತ್ಯ ಗುರು ಸತೀಶ್‌ ಬಾಬು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೃತ್ಯಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು “ಹರಿ ಮಾನಸ ವಿಹಾರ’ ನೃತ್ಯ ರೂಪಕ ಸಾಬೀತುಪಡಿಸಿತು. 72 ವರ್ಷದ ಗುರು ಬಿ. ಭಾನುಮತಿ ಹಾಗೂ ಗುರು ಶೀಲಾ ಚಂದ್ರಶೇಖರ್‌ ಅವರ ನೃತ್ಯ ಕಲಾಮಂದಿರಮ್‌ ತಂಡ ಸದಸ್ಯರ ಅಭಿನಯ, ಎರಡನೇ ದಿನದಲ್ಲಿ ಅನಂತ ನಾಗರಾಜ್‌ ಮತ್ತು ಶ್ರೀಮತಿ ಚೈತ್ರಾ ಅನಂತ್‌ ಸಾದರಪಡಿಸಿದ “ಸಂಕ್ಷಿಪ್ತ ರಾಮಾಯಣ’ ರೂಪಕ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next