Advertisement

ವಿಭಜನೆ, ಪ್ರತಿರೋಧ ಸಲ್ಲ: ಅಯೋಧ್ಯೆ ಮೇಲ್ಮನವಿ ಸಂಬಂಧ ಸಚಿವ ನಖ್ವೀ ಟೀಕೆ

10:02 AM Dec 02, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿರುವ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹಾಗೂ ಜಮೀಯತ್‌-ಉಲೆಮಾ-ಇ- ಹಿಂದ್‌ (ಜೆಯುಎಚ್‌) ಸಂಘಟನೆಗಳ ವಿರುದ್ಧ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಕಿಡಿ ಕಾರಿದ್ದಾರೆ. ಮೇಲ್ಮನವಿ ಸಲ್ಲಿಸುವ ಮೂಲಕ ಈ ಎರಡೂ ಸಂಘಟನೆಗಳು ದೇಶದಲ್ಲಿ ವಿಭಜನೆ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.

Advertisement

‘ಮುಸ್ಲಿಮರಿಗೆ ಬಾಬ್ರಿ (ಮಸೀದಿ) ಮಾತ್ರ ಮುಖ್ಯವಲ್ಲ. ಬರಾಬರಿ (ಸಮಾನತೆ) ಕೂಡ ಮುಖ್ಯ. ಆ ಸಮಾನತೆಯನ್ನು ಶಿಕ್ಷಣ, ಆರ್ಥಿಕ ಸಬಲೀಕರಣದ‌ಲ್ಲಿ ಸಾಧಿಸಬೇಕಿದೆ. ಹಳೆಯ ಸಮಸ್ಯೆಯನ್ನು ಎಳೆದಾಡುವುದು ಸಲ್ಲದು” ಎಂದಿದ್ದಾರೆ.

ಶೇ.99 ಮುಸ್ಲಿಮರ ಬಯಕೆ: ಅಯೋಧ್ಯೆ ಭೂವಿವಾದದ ಕುರಿತ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ದೇಶದ ಶೇ.99ರಷ್ಟು ಮುಸ್ಲಿಮರು ಬಯಸುತ್ತಿದ್ದಾರೆ.

ಡಿ.9ರಂದು ನಾವು ಅರ್ಜಿ ಸಲ್ಲಿಸಲಿದ್ದೇವೆ. ಮುಸ್ಲಿಮರು ನ್ಯಾಯಾಂಗದ ಮೇಲೆ ನಂಬಿಕೆಯಿಟ್ಟಿದ್ದಾರೆ. ಈ ತೀರ್ಪಿನಿಂದ ಆ ನಂಬಿಕೆಗೆ ಧಕ್ಕೆಯಾಗಿದೆ. ಹಾಗಾಗಿ, ನಾವು ಅರ್ಜಿ ಸಲ್ಲಿಸುತ್ತಿರುವುದು ಎಂದು ಎಐಎಂಪಿಎಲ್‌ಬಿ ಹೇಳಿದೆ.

ಮೇಲ್ಮನವಿ ಸಲ್ಲಿಸುವಂಥ ನಿರ್ಧಾರವು ಇಬ್ಬಗೆಯ ಧೋರಣೆಯಾಗುತ್ತದೆ. ವಿವಾದಿತ ಜಾಗದಲ್ಲೇ ಮಸೀದಿ ನಿರ್ಮಿಸಬೇಕು ಎನ್ನುವುದು ಮೊಂಡುತನ. ಹಿಂದೂ-ಮುಸ್ಲಿಮರು ಒಂದಾಗಿ ದೇಶದ ಆರ್ಥಿಕತೆ ಬಲಿಷ್ಠಗೊಳಿಸಲು ಶ್ರಮಿಸಬೇಕು.
– ಶ್ರೀ ರವಿಶಂಕರ್‌ ಗುರೂಜಿ, ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ

Advertisement
Advertisement

Udayavani is now on Telegram. Click here to join our channel and stay updated with the latest news.

Next