ನವದೆಹಲಿ: ಕೇಂದ್ರ ಸಚಿವರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ, ಮತ್ತು ಆರ್.ಸಿ. ಪಿ.ಸಿಂಗ್ ಅವರ ರಾಜ್ಯಸಭೆಯ ಸದಸ್ಯತ್ವದ ಅವಧಿ ಜು.7ಕ್ಕೆ ಮುಕ್ತಾಯವಾಗಲಿದೆ.
ಹೀಗಾಗಿ, ಅವರು ಸಂಪುಟದಲ್ಲಿ ಸಚಿವರಾಗಿ ಮುಂದು ವರಿಯಲಿದ್ದಾರೆಯೇ ಇಲ್ಲವೋ ಎನ್ನುವುದರ ಬಗ್ಗೆ ಸಂಶಯಗಳು ಮೂಡಿದೆ.
ಮುಂದಿನ ಆರು ತಿಂಗಳ ಒಳ ಗಾಗಿ ಅವರು ತಮ್ಮ ಸದಸ್ಯತ್ವವನ್ನು ನವೀಕರಿಸ ಬೇಕಾಗಿದೆ. ಬಿಜೆಪಿ ಉಪಾಧ್ಯಕ್ಷರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಮುಂದಿನ ತಿಂಗಳು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಚರ್ಚೆ ನಡೆದಿದೆ.
ಅದು ಸಾಧ್ಯವಾಗದೇ ಇದ್ದರೆ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚಿಂತನೆಗಳಿವೆ.
Related Articles
ಇನ್ನೊಂದೆಡೆ, ರಾಷ್ಟ್ರಪತಿಯಿಂದ ನೇಮಕಗೊಳ್ಳಬೇಕಾಗಿರುವ ರಾಜ್ಯಸಭೆಯ 7 ಸ್ಥಾನ ಇನ್ನೂ ತೆರವಾಗಿವೆಯೇ ಇವೆ.