Advertisement

ಮುಖರ್ಜಿ ಕನಸು ನನಸಾಗಿಸಿದ್ದು ಬಿಜೆಪಿ ಹೆಗ್ಗಳಿಕೆ

04:51 PM May 18, 2022 | Team Udayavani |

ಚಿಕ್ಕಮಗಳೂರು: ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಯುವ ಮೋರ್ಚಾ ಕಾರ್ಯಕರ್ತರು ಅಳಿಸಲು ಸೇವೆ ಸಲ್ಲಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹನುಮಂತ ಬಿರಾದಾರ ಕರೆ ನೀಡಿದರು.

Advertisement

ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನೆಹರೂ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶ್ಯಾಮಪ್ರಸಾದ್‌ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜಗಳು ನಡೆಯುವುದಿಲ್ಲ ಎಂದು ಹೇಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗುರೂಜಿ ಅವರನ್ನು ಭೇಟಿಯಾಗಿ ರಾಷ್ಟ್ರೀಯವಾದಿ ಪಕ್ಷದ ಅವಶ್ಯಕತೆ ಇದೆ ಎಂದು ಜನಸಂಘವನ್ನು ಕಟ್ಟಿ ಕಾಶ್ಮೀರದ ವಿಮೋಚನೆಗೆ ಹೋರಾಟ ಆರಂಭಿಸಿ ಬಲಿ ದಾನವನ್ನೂ ಮಾಡಿದ್ದರು ಎಂದರು.

2019ರಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬಂದ ನಂತರ ಗೃಹಸಚಿವ ಅಮಿತ್‌ ಶಾ ಅವರು ಕಾಶ್ಮೀರಕ್ಕಾಗಿ ಜೀವ ತೆರಲೂ ಸಿದ್ಧ ಎಂದು ಹೇಳಿದ್ದಲ್ಲದೆ ಸದ್ದು, ಗದ್ದಲಕ್ಕೆ ಅವಕಾಶವಿಲ್ಲದೆ ಜಮ್ಮು- ಕಾಶ್ಮೀರದ ಕಲಂ 370ನ್ನು ರದ್ದುಪಡಿಸುವ ಮೂಲಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಕನಸನ್ನು ನನಸು ಮಾಡಿದರು ಎಂದರು.

ಹಾಗೆಯೇ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಅಂತ್ಯೋದಯದ ಕನಸನ್ನು ಕಟ್ಟಿಕೊಟ್ಟರು. ಸರ್ಕಾರದ ಪ್ರತಿಯೊಂದು ಯೋಜನೆಯೂ ಸಮಾಜದ ಕಟ್ಟ ಕಡೆಯ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಆಶಯ ಇದಾಗಿತ್ತು. ಇಷ್ಟು ವರ್ಷಗಳ ನಂತರ ಆ ಪರಿಕಲ್ಪನೆಯನ್ನು ನರೇಂದ್ರ ಮೋದಿ ಅವರು ಈಡೇರಿಸುತ್ತಿದ್ದಾರೆ. ಇಂತಹ ಪಕ್ಷದ ಕಾರ್ಯ ಕರ್ತರಾಗಿರುವುದು ನಮ್ಮ ಹೆಮ್ಮೆ ಎಂದರು.

Advertisement

ಹಿಂದುತ್ವದ ಸಂಸ್ಕೃತಿ ಉಳಿಯಬೇಕು, ಧರ್ಮ ಗಟ್ಟಿಗೊಳ್ಳಬೇಕು ಎನ್ನುವ ಎಲ್‌.ಕೆ.ಅಡ್ವಾಣಿ ಅವರು ರಾಮರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಹಿಂದುತ್ವದ ಜಾಗೃತಿ ಮೂಡಿಸಿದರು.ಇದೀಗ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಈ ಮೂಲಕ ಆಡ್ವಾಣಿ ಅವರ ಕನಸು ನನಸಾಗುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ ಮಾತನಾಡಿ, ದೇಶದ ಜನರನ್ನು ಯಾವ ರೀತಿ ದಿಕ್ಕು ತಪ್ಪಿಸಬಹುದು ಎನ್ನುವುದಕ್ಕೆ ಉದಾಹರಣೆ ಕಾಂಗ್ರೆಸ್‌ ಪಕ್ಷ. ರಾಷ್ಟ್ರೀಯತೆಯನ್ನು ಪಕ್ಕಕ್ಕಿಟ್ಟು ಜಾತ್ಯತೀತತೆ ಎನ್ನುವ ಸೋಗಲಾಡಿತನವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಅಧಿಕಾರ ನಡೆಸಿದ ಕಾರಣ ನಮ್ಮ ದೇಶ ದುಸ್ಥಿತಿಗೆ ತಲುಪಿತ್ತು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಮಾತನಾಡಿ, ಯುವಮೋರ್ಚಾ ಕಾರ್ಯಕರ್ತರು ಉತ್ತಮ ದೇಶ ಕಟ್ಟುವ ಛಲ ಬೆಳೆಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ ಹರವಿನಗಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್‌ ವೆಂಕಟೇಶ್‌, ರಾಜ್ಯ ಕಾರ್ಯಕಾರಣಿ ಸದಸ್ಯ ಧನಿಕ್‌, ಮಾಲತೇಶ್‌ ಸಿಗಾಸೆ, ಜಿಲ್ಲಾ ಪ್ರಭಾರಿ ಚಿಕ್ಕದೇವನೂರು ರವಿ, ಜಿಲ್ಲಾ ಯುವ ಮೊರ್ಚಾ ಉಪಾಧ್ಯಕ್ಷ ಮತ್ತಾವರ ಸಚಿನ್‌ ಗೌಡ, ಕಾರ್ಯದರ್ಶಿಗಳಾದ ಸಂತೋಷ್‌ ಕೋಟ್ಯಾನ್‌ ಮತ್ತು ಗಗನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next