Advertisement

ಮುಕೇಶ್‌, ನೀತುಗೆ ಬೆದರಿಕೆ ಪತ್ರ

12:18 AM Feb 27, 2021 | Team Udayavani |

ಮುಂಬಯಿ: ದೈತ್ಯ ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕ ಸಾಮಗ್ರಿ ಹೊಂದಿದ್ದ ವಾಹನ ಪತ್ತೆ ಪ್ರಕರಣದ ತನಿಖೆ ಮುಂದುವರಿದಿದ್ದು ಹಲ­ವಾರು ಕುತೂಹಲಕರ ವಿಚಾರಗಳು ಹೊರಬರುತ್ತಿವೆ. ಎಲ್ಲಕ್ಕಿಂತ ಮೊದಲಿಗೆ, ಕಾರಿನಲ್ಲಿ ಮುಕೇಶ್‌ ಅಂಬಾನಿ ಹಾಗೂ ನೀತು ಅಂಬಾನಿಯವರನ್ನು ಕುರಿತು ಬರೆಯ ಲಾಗಿರುವ ಬೆದರಿಕೆ ಪತ್ರವೊಂದು ದೊರಕಿದೆ. ಪತ್ರದಲ್ಲಿನ ಲೇಖನವನ್ನು ಕಂಪ್ಯೂಟರ್‌ನಲ್ಲಿ ಹಿಂದಿ ಭಾಷೆಯಲ್ಲಿ ಟೈಪ್‌ ಮಾಡಿ, ಅನಂತರ ಅದನ್ನು ಟ್ರಾನ್ಸ್‌ ಲಿಟರೇಷನ್‌ನ ಮೂಲಕ ಇಂಗ್ಲಿಷ್‌ ತರ್ಜುಮೆ ಮಾಡ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪತ್ರದ ಸಾರಾಂಶವನ್ನು ಬಹಿರಂಗಪಡಿಸಿಲ್ಲ.

Advertisement

ಹೂಡಿ ಮಾದರಿ ಉಡುಪಿನ ಡ್ರೈವರ್‌: ಗುರುವಾರ ದಂದು, ಹೂಡಿ ಮಾದರಿಯ ಉಡುಪು (ತಲೆಗವಚ ಹೊಂದಿರುವ ಜರ್ಕಿನ್‌) ವ್ಯಕ್ತಿಯೊಬ್ಬ ಈ ಕಾರನ್ನು ತಂದು, ಮುಕೇಶ್‌ ನಿವಾಸ ಆ್ಯಂಟಾಲಿಯಾಕ್ಕೆ ಹತ್ತಿರದಲ್ಲೇ ಇರುವ ಕಾರ್ಮಿಚೆಲ್‌ ರಸ್ತೆಯಲ್ಲಿ ತಂದು ನಿಲ್ಲಿಸಿ, ಆತ ಕಾರಿನಲ್ಲೇ ಮಲಗಿ ಅನಂತರ ಕಾರಿನಿಂದ ಇಳಿದುಹೋಗಿರುವುದನ್ನು ಪೊಲೀಸರು ಸಿಸಿಟಿವಿ ಫ‌ೂಟೇಜ್‌ಗಳಿಂದ ಪತ್ತೆ ಹಚ್ಚಿದ್ದಾರೆ. ಇನ್ನು, ಈ ಕಾರು ಬೇರೆಯವರದ್ದಾಗಿದ್ದು, ಅದನ್ನು ಮುಂಬಯಿಯ ವಿಖ್ಖೊಲಿ ಎಂಬಲ್ಲಿಂದ ಕಳವು ಮಾಡಲಾಗಿತ್ತು. ನಂಬರ್‌ ಪ್ಲೇಟ್‌ ಬದಲಿಸಿ ತರಲಾಗಿದೆ. ಕಾರಿನ ಚಾಸಿಸ್‌ ಸಂಖ್ಯೆಯನ್ನು ಅಳಿಸಲು ವಿಫ‌ಲ ಯತ್ನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ, ಕಾರಿನ ಮೂಲ ಮಾಲಕರನ್ನು ಪತ್ತೆ ಮಾಡಲಾಗಿದೆ.

ಸೇಮ್‌ ನಂಬರ್‌ಪ್ಲೇಟ್‌?: ನಂಬರ್‌ಪ್ಲೇಟ್‌ ವಿಚಾರದ­ಲ್ಲೊಂದು ಟ್ವಿಸ್ಟ್‌ ಇದೆ. ಅನುಮಾನಾಸ್ಪದ ಕಾರಿಗೆ ಅಳವಡಿ­ ಸ­ಲಾಗಿರುವ ನಂಬರ್‌ಪ್ಲೇಟ್‌ನ ಸಂಖ್ಯೆಗಳು, ಮುಕೇಶ್‌ ಅವರ ಭದ್ರತಾ ಸಿಬಂದಿಗಾಗಿ ನೀಡಲಾಗಿರುವ ಕಾರೊಂ­ದರ ನಂಬರ್‌ಪ್ಲೇಟ್‌ ಸಂಖ್ಯೆಗೆ ಹೋಲುತ್ತವೆ! ಇದು ಮತ್ತೂಂದು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.

ಮೈನಿಂಗ್‌ ಗ್ರೇಡ್‌ನ‌ ಕಡ್ಡಿಗಳು: ತನಿಖೆ ಆರಂಭಿಸಿದಾಗ ಅದರಲ್ಲಿ 20 ಜಿಲೆಟಿನ್‌ ಕಡ್ಡಿಗಳು ಸಿಕ್ಕಿದ್ದಾಗಿ ವರದಿ ಯಾಗಿತ್ತು. ಶುಕ್ರವಾರ ತೇಲಿಬಂದ ಮಾಹಿತಿಗಳ ಪ್ರಕಾರ, ಆ ಜಿಲೆಟಿನ್‌ ಕಡ್ಡಿಗಳು ಮಿಲಿಟರಿ ಗ್ರೇಡ್‌ ಮಾದರಿಯವಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಅವು ಬಂಡೆಗಳನ್ನು ಸೀಳಲು ಬಳಸಲಾಗುವಂಥ ಅಥವಾ ಮೈನಿಂಗ್‌ಗೆ ಬಳಸುವಂಥ ಮಾದರಿಯವು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next