Advertisement

ಅಂಬಾನಿಯ “ನಂ. 1′ಪಟ್ಟ ಕಿತ್ತುಕೊಂಡ ಕೊರೊನಾ

09:23 AM Mar 11, 2020 | sudhir |

ನವದೆಹಲಿ; ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌, ಉದ್ಯಮಿ ಮುಕೇಶ್‌ ಅಂಬಾನಿ ಅವರಿಂದ “ಏಷ್ಯಾದ ಅತಿ ದೊಡ್ಡ ಶ್ರೀಮಂತ’ ಎಂಬ ಪಟ್ಟವನ್ನೂ ಕಿತ್ತುಕೊಂಡಿದೆ. ಕೊರೊನಾ ಭೀತಿಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗಿದ್ದರ ಪರಿಣಾಮ, ಅಂಬಾನಿಯವರ ಒಟ್ಟು ಆದಾಯದಲ್ಲಿ 42,000 ಕೋಟಿ ರೂ. ಖೋತಾ ಆಗಿದ್ದು, ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟ ಕೈ ಜಾರಿ ಚೀನಾ ಮೂಲದ ಅಲಿಬಾಬಾ ಗ್ರೂಪ್‌ ಹೋರ್ಡಿಂಗ್ಸ್‌ ಲಿಮಿಟೆಡ್‌ನ‌ ಮಾಲೀಕ ಜ್ಯಾಕ್‌ ಮಾ ಅವರ ಮುಡಿಯೇರಿದೆ. ಸದ್ಯಕ್ಕೆ ಜ್ಯಾಕ್‌ ಅವರ ಆದಾಯ 3.2 ಲಕ್ಷ ಕೋಟಿ ರೂ.ಗಳಷ್ಟು ಇದ್ದು, ಅಂಬಾನಿಗಿಂತ 19,000 ಕೋಟಿ ರೂ.ನಷ್ಟು ಹೆಚ್ಚು ಗಳಿಕೆ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next