Advertisement

2018ರ ಫೋರ್ಬ್ಸ್ ಪಟ್ಟಿ; ಮುಕೇಶ್‌ ಸ್ಥಾನ ಅಬಾಧಿತ

01:19 AM Mar 08, 2018 | Team Udayavani |

ನ್ಯೂಯಾರ್ಕ್‌: ವಿಶ್ವದ ಜನ ಪ್ರಿಯ ನಿಯತಕಾಲಿಕೆ ಫೋರ್ಬ್ಸ್ ವಿಶ್ವದ ಸಿರಿವಂತರ ಪಟ್ಟಿ ಪ್ರಕಟಿಸಿದ್ದು, ಭಾರತೀಯ ಉದ್ಯಮಿ ಮುಕೆೇಶ್‌ ಅಂಬಾನಿ ಮತ್ತೆ ಅಗ್ರಸ್ಥಾನಿಯಾಗಿದ್ದಾರೆ. ಈ ಮೂಲಕ, ಸತತ 11ನೇ ವರ್ಷ ಈ ಪಟ್ಟಿಯಲ್ಲಿ ಅಗ್ರರಾಗಿ ಮುಂದು ವರಿದಿರುವ ಹೆಗ್ಗಳಿಕೆ ಅವರದ್ದಾಗಿದೆ. ಇದಲ್ಲದೆ, ಭಾರತದಲ್ಲಿ ಸದ್ಯಕ್ಕೆ 119 ಶತಕೋಟಿ ಸರದಾರರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 18 ಮಂದಿ ಶತಕೋಟಿದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

Advertisement

ಬೆಝೋಸ್‌ ಮೊದಲಿಗ: ಅಮೆ ಜಾನ್‌ ಕಂಪೆನಿಯ ಸಂಸ್ಥಾಪಕ ಜೆಫ್ ಬೆಝೋಸ್‌ ನಂ.1 ಸ್ಥಾನಕ್ಕೇರಿದ್ದಾರೆ. ಅವರ ಒಟ್ಟಾರೆ ಆಸ್ತಿ ಮೌಲ್ಯ 7.27 ಲಕ್ಷ ಕೋ. ರೂ. 12 ಡಿಜಿಟ್‌ ಮೊತ್ತದ ಆಸ್ತಿಯನ್ನು ಹೊಂದಿರುವ ವಿಶ್ವದ ಏಕೈಕ ವ್ಯಕ್ತಿಯೆಂಬ ಹೆಗ್ಗಳಿಕೆಯನ್ನೂ ಅವರು ಪಡೆದಿದ್ದಾರೆ. ಈ ಪಟ್ಟಿಯ ನಂಬರ್‌ ಒನ್‌ ಸ್ಥಾನದಲ್ಲಿದ್ದ ಬಿಲ್‌ ಗೇಟ್ಸ್‌ (5 ಲಕ್ಷದ 84 ಸಾವಿರ ಕೋಟಿ ರೂ.) ಅವರನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾರೆ ಬೆಝೋಸ್‌. ಇನ್ನು, ಮಾಧ್ಯಮ ಲೋಕದ ದಿಗ್ಗಜ ವಾರೆನ್‌ ಬಫೆಟ್‌ (5 ಲಕ್ಷದ 49 ಸಾವಿರ ಕೋ. ರೂ.) ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next