Advertisement
ಜಾಕ್‌ರನ್ನು ಹಿಂದಿಕ್ಕಿದ ಮುಕೇಶ್ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಜಾಕ್ ಮಾ ಅವರ ಸ್ಥಾನಕ್ಕೆ ಈಗ ಮುಕೇಶ್ ಏರಿ ದ್ದಾರೆ. 84.5 ಶತ ಕೋಟಿ ಡಾಲರ್ ಸಂಪತ್ತು ಹೊಂದಿರುವ ಮುಕೇಶ್ ಜಾಗತಿಕ ಕೋಟ್ಯಧಿಪತಿ ಗಳ ಪಟ್ಟಿ ಯಲ್ಲಿ 10ನೇ ಸ್ಥಾನ ಪಡೆದು ಕೊಂಡಿ ದ್ದಾರೆ. ಪಟ್ಟಿ ಯಲ್ಲಿ ಅಮೆರಿಕದ 724 ಶ್ರೀಮಂತರು ಸ್ಥಾನ ಪಡೆ ದಿದ್ದರೆ, ಚೀನದ 626 ಮಂದಿ ಸ್ಥಾನ ಪಡೆದಿ ದ್ದಾರೆ. ಜತೆಗೆ ಭಾರತದ 140 ಉದ್ಯಮಿಗಳೂ ಸ್ಥಾನ ಪಡೆ ದು ದೇಶಕ್ಕೆ ಹೆಗ್ಗಳಿಕೆ ತಂದಿದ್ದಾರೆ.
2019-20ರ ಫೋಬ್ಸ್ì ಪಟ್ಟಿಯಲ್ಲಿ ಭಾರತದ 102 ಶ್ರೀಮಂತರು ಬಿಲಿಯನೇರ್‌ಗಳೆನಿಸಿಕೊಂಡಿದ್ದರು. 2020-21ರಲ್ಲಿ ಭಾರತದ 37 ಮಂದಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ. ಅಲ್ಲಿಗೆ ಭಾರತದಲ್ಲಿನ ಒಟ್ಟು ಬಿಲಿಯನೇರ್‌ಗಳ ಸಂಖ್ಯೆ 140ಕ್ಕೇರಿದೆ. ಇವರೆಲ್ಲರ ಒಟ್ಟಾರೆ ಆಸ್ತಿ ಮೌಲ್ಯ 44 ಲಕ್ಷ ಕೋಟಿ ರೂ. ಎನ್ನಲಾಗಿದೆ. ಎಲ್ಲರಿಗಿಂತ ಅತೀ ಶ್ರೀಮಂತ ಎಂಬ ಖ್ಯಾತಿ ಮುಕೇಶ್‌ಗೆ (6.2 ಲಕ್ಷ ಕೋಟಿ ರೂ.) ದೊರಕಿದೆ. ಭಾರತದ ಪ್ರಮುಖ ಬಿಲಿಯನೇರ್‌ಗಳು
ಶಿವನಾದರ್(63ನೇ ಸ್ಥಾನ), ಲಕ್ಷ್ಮೀ ಮಿತ್ತಲ್(110), ಉದಯ್ ಕೋಟಕ್(128), ಕುಮಾರ ಬಿರ್ಲಾ(162), ಸಾವಿತ್ರಿ ಜಿಂದಾಲ್ ಕುಟುಂಬ(181), ಅಜೀಂ ಪ್ರೇಮ್ ಜೀ(281), ಬಜಾಜ್ ಸಹೋ ದರರು(392), ರಾಹುಲ್ ಬಜಾಜ್(444), ಕಿರಣ್ ಮಂಜುಂದಾರ್(676), ನಾರಾಯಣ ಮೂರ್ತಿ(783), ನಂದನ್ ನಿಲೇಕಣಿ (1,158).