Advertisement

ದುಬೈನ ದ್ವೀಪದಲ್ಲಿ 1,350 ಕೋಟಿ ವೆಚ್ಚದಲ್ಲಿ ಬಂಗಲೆ ಖರೀದಿಸಿದ ಮುಕೇಶ್‌ ಅಂಬಾನಿ

05:38 PM Oct 19, 2022 | Team Udayavani |

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ದುಬೈನ ಪಾಮ್‌ ಜುಮೇರಿಯಾ ದ್ವೀಪದಲ್ಲಿ 1,350 ಕೋಟಿ ರೂ. ಮೌಲ್ಯದ ಅದ್ಧೂರಿ ಬಂಗಲೆಯನ್ನು ಖರೀದಿ ಮಾಡಿದ್ದಾರೆ.

Advertisement

ಕುವೈತ್‌ನ ಮೊಹಮ್ಮದ್‌ ಅಲ್ಶಯಾ ಎಂಬ ಉದ್ಯಮಿ ಅವರಿಂದ ಕಳೆದ ವಾರ ಖರೀದಿ ಮಾಡಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ಅಂಬಾನಿಯವರು ಕಿರಿಯ ಪುತ್ರ ಅನಂತ್‌ ಅಂಬಾನಿ ಅವರಿಗಾಗಿ ದುಬೈನಲ್ಲಿ ಹತ್ತು ಬೆಡ್‌ರೂಮ್‌ನ ವಿಲ್ಲಾವನ್ನು 80 ಮಿಲಿಯ ಡಾಲರ್‌ ವೆಚ್ಚದಲ್ಲಿ ಖರೀದಿ ಮಾಡಿದ್ದರು. ಅದರಲ್ಲಿ ಪ್ರೈವೇಟ್‌ ಸ್ಪಾ ಸೇರಿದಂತೆ ಹಲವು ಅದ್ಧೂರಿ ವ್ಯವಸ್ಥೆಗಳು ಇವೆ. ಕಳೆದ ವರ್ಷ ಯುನೈಟೆಡ್‌ ಕಿಂಗ್‌ಡಮ್‌ನ ಸೋಲ್‌ಪಾರ್ಕ್‌ ಕ್ಲಬ್‌ ಅನ್ನು 79 ಮಿಲಿಯನ್‌ ಡಾಲರ್‌ ಮೌಲ್ಯದ ವೆಚ್ಚದಲ್ಲಿ ಅಂಬಾನಿ ಖರೀದಿ ಮಾಡಿದ್ದರು.

ಪಾಮ್‌ ಜುಮೆರಿಯಾ ದ್ವೀಪದಲ್ಲಿ ತೀರಾ ಇತ್ತೀಚಿನ ದಿನಗಳ ವರೆಗೆ ಅದ್ಧೂರಿ ಬಂಗಲೆ ಖರೀದಿ ಎಂದರೆ 82 ಮಿಲಿಯನ್‌ ಡಾಲರ್‌ ಮೌಲ್ಯದ್ದಾಗಿತ್ತು. “ಕಾಸಾ ಡೆಲ್‌ ಸೋಲ್‌’ ಎಂಬ ಹೆಸರಿನ ವಿಲ್ಲಾ 8 ಬೆಡ್‌ರೂಮ್‌, 18 ಬಾತ್‌ರೂಮ್‌ಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next