Advertisement
ಹೌದು, ಸಾಹಿತಿ ಬಿ.ಎಲ್.ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಸಂಭಾಷಣೆ ಕೆಲಸ ಮುಗಿದಿದ್ದು, ನ.29 ರಂದು ಬಿ.ಎಲ್.ವೇಣು ಅವರು ತಾವು ಬರೆದ ಸಂಭಾಷಣೆಯನ್ನು ಚಿತ್ರತಂಡಕ್ಕೆ ಒಪ್ಪಿಸಿದ್ದಾರೆ. ಇತ್ತೀಚೆಗೆ ನಟ ದರ್ಶನ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಡೈಲಾಗ್ ರೀಡಿಂಗ್ ನೀಡಿದ ವೇಣು ಅವರು, ಅಂತಿಮವಾಗಿ ಸಂಭಾಷಣೆಯನ್ನು ಒಪ್ಪಿಸಿದ್ದಾರೆ. ಡಿಸೆಂಬರ್ 6 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
Related Articles
Advertisement
ಸದ್ಯಕ್ಕೆ ಚಿತ್ರತಂಡ ಸಂತಸದಲ್ಲಿದೆ. ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ತುಂಬಾನೇ ಎಚ್ಚರವಹಿಸಿ, ಏನೆಲ್ಲಾ ಚಿತ್ರಕ್ಕೆ ಬೇಕು, ಎಷ್ಟೆಲ್ಲಾ ಅವಧಿ ಇರಬೇಕು. ಯಾವುದು ಬೇಕು, ಬೇಡ ಎಂಬ ಬಗ್ಗೆ ಯೋಚಿಸಿ, ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.
ದರ್ಶನ್ ಈಗಾಗಲೇ “ಸಂಗೊಳ್ಳಿ ರಾಯಣ್ಣ‘, “ಕುರುಕ್ಷೇತ್ರ‘ ಚಿತ್ರಗಳ ಮೂಲಕ ಜನಮನಗೆದ್ದಿದ್ದರು. ಈಗ ಮಹತ್ವಾಕಾಂಕ್ಷೆಯ “ಗಂಡುಗಲಿ ಮದಕರಿ ನಾಯಕ‘ ಚಿತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಪಡೆದುಕೊಂಡಿದ್ದಾರೆ. ಇಲ್ಲಿ ಮದಕರಿನಾಯಕನ ಖಡಕ್‌ಡೈಲಾಗ್, ಆ ಮೀಸೆ ಮತ್ತು ಎದುರಾಳಿಗಳ ವಿರುದ್ಧಹೋರಾಡುವ ಧೈರ್ಯ ಹೈಲೈಟ್ ಆಗಿದೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಬಹು ನಿರೀಕ್ಷೆಯ ಚಿತ್ರವಿದು. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಚಿತ್ರ ದೊಡ್ಡ ಚಾಲೆಂಜ್. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಈಗಾಗಲೇ ಚಿತ್ರಕ್ಕೆ ಎಲ್ಲಾ ತಯಾರಿಮಾಡಿಕೊಂಡಿದ್ದು, ಡಿ.6 ರಂದು ಮುಹೂರ್ತ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಿದ್ದಾರೆ.