Advertisement

“ಸಲಗ’ಚಿತ್ರಕ್ಕೆ ಅದ್ಧೂರಿ ಮುಹೂರ್ತ

10:55 AM Jun 09, 2019 | Team Udayavani |

ದುನಿಯಾ ವಿಜಯ್‌ ನಟನೆ ಹಾಗೂ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಮುಹೂರ್ತ ಗುರುವಾರ ನಗರದ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.

Advertisement

ಜೊತೆಗೆ ಎರಡು ಸಾವಿರ ರೂಪಾಯಿಯ ಮೇಲೆ “ಒಳ್ಳೆಯದಾಗಲಿ’ ಎಂದು ಬರೆದು ವಿಜಿ ಕೈಗಿತ್ತ, ಸುದೀಪ್‌, “ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ, ಒಳ್ಳೆಯದಾಗುತ್ತದೆ’ ಎಂದು ಗೆಳೆಯನಿಗೆ ಶುಭಕೋರಿದರು.

ಚಿತ್ರದ ಮುಹೂರ್ತಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್‌, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಅನೇಕರು ಭಾಗವಹಿಸಿ, ಚಿತ್ರತಂಡಕ್ಕೆ ಶುಭಕೋರಿದರು.

ಕೆ.ಪಿ.ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು. ಸಂಜನಾ ಆನಂದ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಧನಂಜಯ್‌, ಸುಧೀರ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next