ಕೋವಿಡ್ ಹೊಡೆತದಿಂದ ನಲುಗಿದ್ದ ಕನ್ನಡ ಚಿತ್ರರಂಗ ಈಗ ಚೇತರಿಕೆಯ ಹಾದಿಯಲ್ಲಿದೆ. ಈಗಾಗಲೇ ಚಿತ್ರಮಂದಿರಗಳು ಆರಂಭವಾಗಿರುವ ಖುಷಿ ಒಂದು ಕಡೆಯಾದರೆ ಹೊಸ ಸಿನಿಮಾಗಳು ಸೆಟ್ಟೇರುತ್ತಿರುವ ಸಂಭ್ರಮ ಮತ್ತೂಂದು ಕಡೆ. ಹೌದು, ಸಾಕಷ್ಟು ಹೊಸ ಸಿನಿಮಾಗಳು ಆರಂಭವಾಗುತ್ತಿವೆ. ಮತ್ತೆ ಚಿತ್ರರಂಗದಲ್ಲಿ ಮುಹೂರ್ತ ಸಮಾರಂಭ ಕಳೆಗಟ್ಟಿದೆ. ಸ್ಟಾರ್ ನಟರಿಂದ ಹಿಡಿದು ಹೊಸಬರ ಚಿತ್ರಗಳು ಆರಂಭವಾಗುತ್ತಿವೆ. ಒಂದರ್ಥದಲ್ಲಿ ಕನ್ನಡಚಿತ್ರರಂಗದಲ್ಲಿ ಮತ್ತೆ ಸಿನಿ ಸಂಭ್ರಮ ಆರಂಭವಾಗಿದೆ ಎನ್ನಬಹುದು. ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡ ಹಾಗೂ ಶೀಘ್ರದಲ್ಲಿ ಆಚರಿಸಿಕೊಳ್ಳಲಿರುವ ಸಿನಿಮಾಗಳ ಕುರಿತು ಒಂದು ರೌಂಡಪ್ ಇಲ್ಲಿದೆ …
ಗಣೇಶ್ ತ್ರಿಬಲ್ ರೈಡಿಂಗ್ ಶುರು : ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ “ತ್ರಿಬಲ್ ರೈಡಿಂಗ್’ನ ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದೆ.ಮೈಸೂರಿನಲ್ಲಿ ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ, “ತ್ರಿಬಲ್ ರೈಡಿಂಗ್’ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇನ್ನು ಸುಮಾರು ಆರು ತಿಂಗಳ ಬಳಿಕ ನಟ ಗಣೇಶ್ ಈ ಚಿತ್ರದ ಮೂಲಕ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಗಣೇಶ್, “ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರುಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದಆಸಲುಗೆಗೆ ಅದಾವಕಣ್ಣು ತಗುಲಿತ್ತೂ.6 ತಿಂಗಳಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ, ತ್ರಿಬಲ್ ರೈಡಿಂಗ್ ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ” ಎಂದು ಬರೆದುಕೊಂಡಿದ್ದಾರೆ. ಪಕ್ಕಾ ಲವ್,ಕಾಮಿಡಿ, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಕಥಾನಕ ಹೊಂದಿರುವ “ತ್ರಿಬಲ್ ರೈಡಿಂಗ್’ ಚಿತ್ರಕ್ಕೆ ಮಹೇಶ್ ಗೌಡ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಹೊಸ ಚಿತ್ರಕ್ಕೆ ಧ್ರುವ ರೆಡಿ : ನಟ ಧ್ರುವ ಸರ್ಜಾ ಇತ್ತೀಚೆಗಷ್ಟೇ “ಪೊಗರು’ ಚಿತ್ರದ ಚಿತ್ರೀಕರ ಪೂರ್ಣಗೊಳಿಸಿದ್ದು, ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಅವರ ಹೊಸ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದು, ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಅಕ್ಟೋಬರ್26 ರಂದು ನಡೆಯಲಿದೆ. ಈ ಚಿತ್ರದ ಟೈಟಲ್ ಲಾಂಚ್ ನವೆಂಬರ್ 6 ರಂದು ಆಗಲಿದೆ. ಈ ಮೂಲಕ ಧ್ರುವ ಹೊಸ ಸಿನಿಮಾದಕ್ರೇಜ್ ಶುರುವಾಗಲಿದೆ. ನಿರ್ಮಾಪಕ ಉದಯ್ ಮೆಹ್ತಾ ಈಗಾಗಲೇಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಧ್ರುವ ಹಾಗೂ ನಂದಕಿಶೋರ್ ಅವರಜೊತೆಯಾಗಿರುವುದರಿಂದ ಮತ್ತೂಂದು ಗೆಲುವಿನ ನಿರೀಕ್ಷೆ ಆರಂಭವಾಗಿದೆ
ಪೆಟ್ರೋಮ್ಯಾಕ್ಸ್‌ಗೆ ಚಾಲನೆ : ನೀನಾಸಂ ಸತೀಶ್ ನಾಯಕರಾಗಿರುವ “ಪೆಟ್ರೋಮ್ಯಾಕ್ಸ್’ ಚಿತ್ರಕ್ಕೂ ಸೋಮವಾರ ಮೈಸೂರಿನಲ್ಲಿ ಮುಹೂರ್ತ ನಡೆದಿದೆ. ಈ ಚಿತ್ರವನ್ನು “ಸಿದ್ಲಿಂಗು’, “ನೀರ್ ದೋಸೆ’ ಚಿತ್ರ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿದ್ದಾರೆ. 15 ದಿನಗಳಕಾಲ ಮೈಸೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಅರುಣ್, ನಾಗಭೂಷಣ್,ಕಾರುಣ್ಯಾ ರಾಮ್ ಮುಂತಾದವರು ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ “ಪೆಟ್ರೋಮ್ಯಾಕ್ಸ್’ ಗೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ
ದಿಗಂತ್ ಚಿತ್ರಕ್ಕೆ ಮುಹೂರ್ತ : ನಟದಿಗಂತ್ ನಾಯಕರಾಗಿರುವ ಹೊಸ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದರು. ಇದು ತೆಲುಗಿನ “ಎವರು’ ಚಿತ್ರದ ರೀಮೇಕ್ ಆಗಿದ್ದು, ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ವಸಿಷ್ಠ ಸಿಂಹ ಕೂಡಾ ಪ್ರಮುಖಪಾತ್ರ ಮಾಡುತ್ತಿದ್ದಾರೆ. ಅಶೋಕ್ ತೇಜಾ ನಿರ್ದೇಶನದ ಈ ಚಿತ್ರವನ್ನು ರಾಜೇಶ್ ಅಗರ್‌ವಾಲ್ ಹಾಗೂ ಜಯಪ್ರಕಾಶ್‌ರಾವ್ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲು ಚಿತ್ರತಂಡ ತಯಾರಿ ನಡೆಸಿದೆ.
1980ಯಲ್ಲಿ ಪ್ರಿಯಾಂಕಾ : ನಟಿ ಪ್ರಿಯಾಂಕಾ ಉಪೇಂದ್ರ ಸದ್ದಿಲ್ಲದೇ ಹೊಸಸಿನಿಮಾ ಒಪ್ಪಿಕೊಂಡಿದ್ದಾರೆ. ಅದು 1980. ಹೀಗೊಂದು ವಿಭಿನ್ನ ಶೀರ್ಷಿಕೆಯ ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ 28ರಿಂದ ಆರಂಭ ವಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣಕೊಡಗಿನಸುಂದರ ಪರಿಸರ ದಲ್ಲಿ ನಡೆಯಲಿದೆ. ರಾಜ್‌ಕಿರಣ್ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದಿದ್ದಾರೆ. ಆರ್.ಕೆ. ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿಛಾಯಾ ಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.
ಹೊಸಬರ ವಿಧಿಬರಹ ಆರಂಭ : ಇತ್ತೀಚೆಗೆ ಹೊಸಬರ “ವಿಧಿಬರಹ’ ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿ ರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್ ಅರಂಭ ಫಲಕ ತೋರಿದರು. ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ“ವಿಧಿಬರಹ” ಚಿತ್ರದಲ್ಲಿದೆ. ರಘುವರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಚಿತ್ರಗಳ ನಿರ್ದೇಶಿಸಿ ಅನುಭವವಿರುವ ರಘುವರ್ಮ ನಿರ್ದೇ ಶನದ ಮೂರನೇ ಚಿತ್ರವಿದು. ದೀಪ ಕ್ರಿಯೇ ಷನ್ಸ್ ಲಾಂಛನದಲ್ಲಿ ಮಂಜುನಾಥ್ ಈ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್ 30ರಿಂದ ಬೆಂಗಳೂರು, ಶಿವಮೊಗ್ಗ ಮುಂತಾದಕಡೆ ಚಿತ್ರೀಕರಣನಡೆಯಲಿದೆ. ಚಿತ್ರದಲ್ಲಿ ಶೋಭರಾಜ್, ಲಯಕೋಕಿಲ, ರಾಜೇಶ್ ನಟರಂಗ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜಾ, ರಾಜೇಶ್ ಗಟ್ಟಿಮೇಳ ಮುಂತಾದವರು ನಟಿಸುತ್ತಿದ್ದಾರೆ.