Advertisement

“ಅಂಬಿ ನಿಂಗೆ ವಯಸ್ಸಾಯ್ತೋ’ಗೆ ಮುಹೂರ್ತ

01:06 PM Nov 25, 2017 | |

ಸುದೀಪ್‌ ಅವರ ಬ್ಯಾನರ್‌ನಲ್ಲಿ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಸಿನಿಮಾ ಬರಲಿದೆ ಎಂಬ ಸುದ್ದಿ ನಿಮಗೆ ಗೊತ್ತಿರಬಹುದು. ಅಂಬರೀಶ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಚಿತ್ರವನ್ನು ಗುರುದತ್ತ ಗಾಣಿಗ ನಿರ್ದೇಶಿಸುತ್ತಿದ್ದಾರೆ.

Advertisement

ಸುದೀಪ್‌ ಜೊತೆ ಸಹಾಯಕರಾಗಿದ್ದ ಗುರುದತ್‌ ಅವರಿಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಸುದೀಪ್‌ ಅವರ ಚಿತ್ರಕಥೆ ಇದೆ. ಜಾಕ್‌ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಶ್‌ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಗುರುವಾರ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಸುದೀಪ್‌ ತಾಯಿ ಸರೋಜ ಸಂಜೀವ್‌ ಕ್ಲ್ಯಾಪ್‌ ಮಾಡಿ ಚಿತ್ರಕ್ಕೆ ಶುಭ ಕೋರಿದರು.   

ಅಂದಹಾಗೆ, “ಅಂಬಿ ನಿಂಗೆ ವಯಸ್ಸಾಯ್ತೋ’ ತಮಿಳಿನ “ಪಾ ಪಾಂಡಿ’ ಚಿತ್ರದ ರೀಮೇಕ್‌. ಅಲ್ಲಿ ರಾಜ್‌ಕಿರಣ್‌ ಮಾಡಿದ ಪಾತ್ರವನ್ನು ಇಲ್ಲಿ ಅಂಬರೀಶ್‌ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಶ್‌ ಅವರ ಯೌವನದ ದಿನಗಳ ಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next