Advertisement

ದೋಟಿಹಾಳ: ಕಣ್ಮರೆಯಾಗುತ್ತಿದೆ ಹಳೆ ಕಾಲದ ಮೊಹರಂ ಹೆಜ್ಜೆ ಕುಣಿತ

02:18 PM Aug 09, 2022 | Team Udayavani |

ದೋಟಿಹಾಳ: ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾಂಧವ್ಯದ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಪ್ರಯುಕ್ತ ಗ್ರಾಮದ ಸುತ್ತ ಮುತ್ತ ಊರುಗಳಲ್ಲಿ ಹೆಜ್ಜೆ ಕುಣಿತ ಕಂಡು ಬರುತ್ತಿದ್ದವು. ಆದರೆ ಅವು ಹೀಗ ಕಣ್ಮರೆಯಾಗುತ್ತಿವೆ.

Advertisement

ಗ್ರಾಮದ ಮಕಳೇಪ್ಪ ಬಳೂಟಗಿ ಇವರು ಸುಮಾರ 20-25 ವರ್ಷಗಳಿಂದ ಮೊಹರಂ ಹಬ್ಬದ ದಿನಗಳಲ್ಲಿ 2-3 ದಿನಗಳ ಕಾಲ ತಮ್ಮ ತಂಡದೊಂದಿಗೆ ಗ್ರಾಮದ ಸುತ್ತಮುತ್ತಲ್ಲ ಗ್ರಾಮಗಳಾದ ಶಿರಗುಂಪಿ, ಬಳೂಟಗಿ, ಮೇಗೂರ, ದೋಟಿಹಾಳ, ಮುದೇನೂರ ಜುಮಲಾಪೂರ ಮತ್ತು ಇನ್ನಿತರ ಊರುಗಳಲ್ಲಿ ಸಂಚಾರಿ ಗೆಜ್ಜೆ ಕುಣಿತಗಳನ್ನು ಹಾಡುತ್ತಾರೆ. ತಾವು ಭೇಟಿ ಕೊಡುವ ಗ್ರಾಮಗಳ ಪ್ರತಿ ಮನೆ, ಅಂಗಡಿಗಳ ಮುಂದೆ ಹೆಜ್ಜೆ ಹಾಡುಗಳನ್ನು ಆಡಿ ಅವರಿಂದ ಹಬ್ಬದ ಖುಶಿಯಾಗಿ ಹಣವನ್ನು ಪಡೆಯುವ ಕಾಲ ಹಿಂದೇ ಇತ್ತು. ಆದರೆ ಈಗ ಇದು ಕಣ್ಮರೆಯಾಗುತ್ತಿದೆ.

ರಾಮಣ್ಣ ಬಳೂಟಗಿ ಅವರನ್ನು ಹೆಜ್ಜೆ ಕುಣಿತದ ಬಗ್ಗೆ ವಿಚಾರಿಸಿದಾಗ, ಹಿರಿಯರು ಹಿಂದಿನಿಂದ ಈ ಪದ್ದತಿಯನ್ನು ಮಾಡಿಕೊಂಡು ಬಂದಿರುವುದರಿಂದ ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಹೆಜ್ಜೆ ಕುಣಿತದಲ್ಲಿ ಸುಮಾರು ಹತ್ತರಿಂದ ಹದಿನೈದು ಜನರು ಇದ್ದು ಹಬ್ಬದ 3-4 ದಿನಗಳಕಾಲ ನಮ್ಮ ಸುತ್ತಮುತ್ತಲಿನ ಪ್ರದೇಶಗಲ್ಲಿ ಆಟವಾಡಿ ಬಂದ ಹಣದಿಂದ ಹಬ್ಬವನ್ನು ಆಚರಿಸುತ್ತೇವೆ. ನಮ್ಮ ಭಾಗದಲ್ಲಿ ಹಿಂದೆ 3-4 ಹೆಜ್ಜೆ ಕುಣಿತದ ತಂಡಗಳು ಇದ್ದವು ಆದರೆ ಈಗ ಅವು ಕಡಿಮೆಯಾಗಿವೆ, ಕಾರಣ ಕುಣಿತದಲ್ಲಿ ನಮಗೆ ಯಾವ ಲಾಭವು ಬರುವುದಿಲ್ಲ ಕೇವಲ ಇದು ಹಿಂದಿನ ಹಿರಿಯರು ಆಡಿಕೊಂಡು ಬಂದ ಕಾರಣದಿಂದಾಗಿ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ ಹೀಗಿನ ಯುವಕರು ಆಧುನಿಕ ಜಗತ್ತಿಗೆ ಮಾರು ಹೋಗಿದ್ದು ಇಂಥ ಹಳೆಯ ಸಂಪ್ರದಾಯದ ಪದ್ದತಿಗಳು ಅವನತಿಯತ್ತ ಸಾಗಿದೆ ಎಂದರು.

-ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next