Advertisement

ಐತಿಹಾಸಿಕ ಮುಘಲ್‌ಸರಾಯ್‌ ಇನ್ನು ದೀನ್‌ ದಯಾಲ್‌ ಉಪಾಧ್ಯಾಯ ಜಂಕ್ಷನ್‌

05:00 PM Aug 04, 2018 | udayavani editorial |

ಚಾಂದೋಲಿ/ಲಕ್ನೋ : ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ನಾಳೆ ಭಾನುವಾರ ಇಲ್ಲಿನ ಪ್ರಾತಿನಿಧಿಕ ರೈಲ್ವೇ ನಿಲ್ದಾಣಕ್ಕೆ ಅಗಮಿಸಲಿದ್ದು, ಮುಘಲ್‌ಸರಾಯ್‌ ಜಂಕ್ಷನ್‌ಗೆ ಹಿರಿಯ ದಿವಂಗತ ಆರ್‌ಎಸ್‌ಎಸ್‌ ನಾಯಕ ದೀನ್‌ ದಯಾಲ್‌ ಉಪಾಧ್ಯಾಯ ಅವರನ್ನು ಹೆಸರನ್ನು ಇಡಲಾಗುವುದು. 

Advertisement

ಅತ್ಯಂತ ದಟ್ಟನೆಯ ದಿಲ್ಲಿ – ಹೌರಾ ಮಾರ್ಗದಲ್ಲಿರುವ ಶತಮಾನದಷ್ಟು ಹಳೆಯ ಮುಘಲ್‌ಸರಾಯ್‌ ಜಂಕ್ಷನ್‌ಗೆ ಈ ಮೂವರು ನಾಯಕರು ನಾಳೆ ಭಾನುವಾರ ಅಗಮಿಸಿ ಸಂಪೂರ್ಣವಾಗಿ ಮಹಿಳಾ ಸಿಬಂದಿಯಿಂದಲೇ ನಡೆಸಲ್ಪಡುವ ಒಂದು ಪ್ರಯಾಣಿಕರ ರೈಲು ಮತ್ತು ಒಂದು ಗೂಡ್ಸ್‌ ಟ್ರೈನಿಗೆ ಹಸಿರು ನಿಶಾನೆ ತೋರುವರು ಮತ್ತು ಸ್ಮಾರ್ಟ್‌ ಯಾರ್ಡ್‌ ಯೋಜನೆಗೆ ಚಾಲನೆ ನೀಡುವರು.

ಐತಿಹಾಸಿಕ ಮುಘಲ್‌ಸರಾಯ್‌ ಜಂಕ್ಷನ್‌ ಕಟ್ಟಡಕ್ಕೆ ಕೇಸರಿ ಬಣ್ಣ ನೀಡಲಾಗಿದ್ದು ಇದರ ಸೈನ್‌ಬೋರ್ಡ್‌ಗಳಲ್ಲಿ ಹೊಸ ಹೆಸರು (ದೀನ್‌ ದಯಾಳ್‌ ಉಪಾಧ್ಯಾಯ) ಬರೆಯಲಾಗಿದೆ. ಆರ್‌ಎಸ್‌ಎಸ್‌ ನಾಯಕ ಉಪಾಧ್ಯಾಯ ಅವರು 1968ರ ಫೆಬ್ರವರಿಯಲ್ಲಿ ಮುಘಲ್‌ ಸರಾಯ್‌ ಜಂಕ್ಷನ್‌ ಬಳಿ ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟಿದ್ದರು. 

ಮುಘಲ್‌ ಸರಾಯ್‌,  ಜೈಜವಾನ್‌ ಜೈಕಿಸಾನ್‌ ಘೋಷಣೆ ಖ್ಯಾತಿಯ ಭಾರತದ ಮಾಜಿ ಪ್ರಧಾನಿ ಲಾಲಬಹದ್ದೂರ್‌ ಶಾಸ್ತ್ರೀ ಅವರ ಹುಟ್ಟೂರು ಕೂಡ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next