Advertisement

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

05:18 PM Mar 27, 2022 | Team Udayavani |

ಹೆಣ್ಣಿನ ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೊಂದು ಮೆರುಗು ನೀಡುವ ಜನಪ್ರಿಯ ಮತ್ತು ಅಭೂತಪೂರ್ವ ರೇಷ್ಮೆ ಸೀರೆಗಳ ಬ್ರ್ಯಾಂಡ್‌ ʻಮುಗ್ಧʼ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತನ್ನ ಮಳಿಗೆಯನ್ನು ತೆರೆಯುತ್ತಿದೆ.

Advertisement

ಮಳಿಗೆಯು ಚೆಟ್ಟಿನಾಡಿನ ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರಿಗೆ ಅದ್ಭುತ ದೇವಸ್ಥಾನದ ಒಳಗೆ ತಾವು ಖರೀದಿಗೆ ಬಂದಿರುವಂತೆ ಪವಿತ್ರವಾದ ಅನುಭೂತಿಯನ್ನು ನೀಡುತ್ತದೆ.

ಈ ಮಳಿಗೆಯು ನಾಡಿನ ಕೈಮಗ್ಗಗಳ ಅದ್ಭುತ ಪರಂಪರೆಗೆ ಸಲ್ಲಿಸುವ ವಿಶೇಷ ಗೌರವವೇ ಸರಿ. ಕಾಂಚೀವರಂ ನಿಂದ ಬನಾರಸಿ ಸೀರೆಗಳ ವರೆಗೆ, ಇಕ್ಕಟಾದಿಂದ ಗಡ್ವಾಲ್‌ ವರೆಗೆ, ಪೈಥಾನಿಸ್‌ನಿಂದ ಹಿಡಿದು ಉಪ್ಪದಾಸ್‌ ವರೆಗೆ, ಹೀಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ನೇಯ್ಗೆಯಾದ ಸುಂದರ ಸೀರೆಗಳು ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನೂತನವಾಗಿ ಶುರುವಾಗಿರುವ ಮಳಿಗೆಯಲ್ಲಿ ಲಭ್ಯವಿರುತ್ತದೆ.

‘ನಮ್ಮ ಕನಸಿನ ಕೂಸೊಂದು ಗರಿ ಬಿಚ್ಚುತ್ತಿದೆ. ನಮ್ಮ ಅದ್ಧೂರಿ ಮಳಿಗೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ತೆರೆಯುತ್ತಿದ್ದೇವೆ ಎಂಬುದನ್ನು ಹಂಚಿಕೊಳ್ಳುವ ಈ ಕ್ಷಣವು, ಮರಿ ಹಕ್ಕಿಯು ತನ್ನ ಪುಟ್ಟ ರೆಕ್ಕೆಗಳನ್ನು ಬಡಿಯುತ್ತ ಎತ್ತರಕ್ಕೆ ಹಾರುವುದನ್ನು ಕಣ್ತುಂಬಿಕೊಳ್ಳುವ ತಾಯಿ ಹಕ್ಕಿಗೆ ಆಗುವಂಥ ಅನುಭವ. ನಮ್ಮ ಗ್ರಾಹಕರಿಗೆ ಅತ್ಯುತ್ತಮ ಅನುಭೂತಿಯನ್ನು ಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ’ ಎನ್ನುತ್ತಾರೆ ‘ಮುಗ್ಧ’ ಸಂಸ್ಥಾಪಕಿ ಹಾಗು ವಿನ್ಯಾಸಕಿ ಶಶಿ ವಂಗಪಲ್ಲಿ.

Advertisement

ಮಳಿಗೆ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಕನ್ನಡದ ಮುದ್ದು ಮುಖದ ನಟಿ ಆಶಿಕಾ ರಂಗನಾಥ್, ʻಎಲ್ಲ ಹುಡುಗಿಯರಿಗೂ ಸೀರೆ ಅಂದ್ರೆ ಒಂದು ಸಂಭ್ರಮವೇ ಸರಿ. ಇಲ್ಲಿರುವ ವಿವಿಧ ವಿನ್ಯಾಸದ ಸೀರೆಗಳು ನೋಡೋದಕ್ಕೆ ಕಣ್ಣಿಗೆ ಹಬ್ಬ ಅನ್ನಿಸತ್ತೆ ಇನ್ನು ಉಟ್ಟರೆ ಅದರ ಖುಷಿಗೆ ಪಾರವೇ ಇರುವುದಿಲ್ಲ. ನನಗಂತೂ ಸೀರೆ ಎಂದರೆ ತುಂಬಾ ಇಷ್ಟ’ ಎಂದು ಸೀರೆ ಬಗ್ಗೆ ಮನಬಿಚ್ಚಿ ಮಾತನಾಡಿದರು.

ಬ್ರ್ಯಾಂಡ್-ಮುಗ್ಧ ಆರ್ಟ್‌ ಸ್ಟುಡಿಯೊ

ಮುಗ್ಧಾ ಆರ್ಟ್‌ ಸ್ಟುಡಿಯೊ 2012ರಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಜನ್ಮತಾಳಿತು. ಅಲ್ಲಿಂದ ಈವರೆಗೆ ಬ್ರ್ಯಾಂಡ್‌ ನಿರಂತರ ಹೊಸತನದೊಂದಿಗೆ ಸಾಕಷ್ಟು ದೂರವನ್ನು ಕ್ರಮಿಸಿದೆ. ಜಗತ್ತಿನ ವಿವಿಧ ಭಾಗಗಳ ಗ್ರಾಹಕರನ್ನು ಒಳಗೊಂಡಿರುವ ʻಮುಗ್ಧʼ, ವಿಶಿಷ್ಟ ಮತ್ತು ಅಭೂತಪೂರ್ವ ಸೇವೆಗಳನ್ನು ಒದಗಿಸುತ್ತಿದೆ.  ಹೊಚ್ಚಹೊಸ ಕಾಂಚಿ ಪಟ್ಟು ಸೀರೆಗಳ ಸಂಗ್ರಹವು ಜೀವಕಳೆ ತುಂಬುವ ಅದ್ಭುತ ಬಣ್ಣಗಳನ್ನು ಮತ್ತು ಆಧುನಿಕ ಭಾರತದ ವಧುವಿಗೆ ಹೇಳಿಮಾಡಿಸಿದಂಥ ವಿನ್ಯಾಸಗಳನ್ನು ಒಳಗೊಂಡಿದೆ. ಸೀರೆಯ ಲಕ್ಷಣಗಳು, ಸೂಕ್ಷ್ಮತೆ ಮತ್ತು ಬಾರ್ಡರ್‌ಗಳು- ಪ್ರತಿಯೊಂದನ್ನೂ ಭಾರತದ ಸಂಪ್ರದಾಯದ ಬೇರು ಹೊಂದಿದ ಮತ್ತು ಹೃದಯದಿಂದ ನವ ಭಾರತದ ಕಲ್ಪನೆ ಹೊಂದಿರುವ ವಧುವಿಗಾಗಿ ಸೂಕ್ತವಾಗಿ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ಐಟಿ ಎಂಜಿನಿಯರ್‌ ಆದಾಗ್ಯೂ ಶಶಿ ವಂಗಪಲ್ಲಿ ಅವರು ತಮ್ಮ ಆಸಕ್ತಿಯ ಚುಂಗನ್ನು ಹಿಡಿದು, 2012ರಲ್ಲಿ ʻಮುಗ್ಧ ಆರ್ಟ್‌ ಸ್ಟುಡಿಯೊʼ ಆರಂಭಿಸಿ ಕನಸಿಗೆ ಒಂದು ರೂಪುರೇಷೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಅನೇಕ ಗಣ್ಯ ಮತ್ತು ದಕ್ಷಿಣ ಭಾರತದ ಅನಿವಾಸಿ ಭಾರತೀಯ ಗ್ರಾಹಕರನ್ನು ಸೆಳೆದರು ಮತ್ತು ತಮ್ಮ ವಿನ್ಯಾಸಕ್ಕೆ ಮೆಚ್ಚುಗೆಯನ್ನೂ ಪಡೆದರು. ಬಹುಬೇಗನೆ ಹೈದರಾಬಾದ್‌ ನಲ್ಲಿ ಅತಿಹೆಚ್ಚು ಬೇಡಿಕೆಯುಳ್ಳ ವಿನ್ಯಾಸಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ವಧುವಿನ ಕೌಚರ್‌ ವಿನ್ಯಾಸಕ್ಕೆ ಹೆಸರಾದ ಅವರು, ನವ ಭಾರತದ ವಧುವಿಗಾಗಿ ಜೀವಕಳೆ ತುಂಬುವ ಸೊಗಸಾದ ಬಣ್ಣಗಳನ್ನು ಹೊಮ್ಮಿಸಿದ್ದಾರೆ. ಭಿನ್ನ ಜನರು, ಸ್ಥಳಗಳು ಮತ್ತು ನಿಸರ್ಗವೇ ಅವರಿಗೆ ಪ್ರೇರಣೆ. ಅವರು ಸುಶ್ಮಿತಾ ಸೇನ್, ರಶ್ಮಿಕಾ, ರಕುಲ್‌ ಪ್ರೀತ್‌ ಸಿಂಗ್‌, ತಾಪ್ಸೀ ಪನ್ನು, ಕಾಜಲ್‌ ಅಗರ್ವಾಲ್, ನೇಹಾ ಧುಪಿಯಾ ಹೀಗೆ ಹಲವು ಸುಂದರ ಸೆಲೆಬ್ರಿಟಿಗಳ ಅಂದವನ್ನು ಇಮ್ಮಡಿಗೊಳಿಸಿದ್ದಾರೆ.

 

ʻನಾವಿರುವುದು ನಿಮಗಾಗಿʼ ಎಂಬ ಬ್ರ್ಯಾಂಡ್‌ನ ಘೋಷವಾಕ್ಯವೇ ಶಶಿ ಅವರ ನಂಬುಗೆಯನ್ನು ವ್ಯಾಖ್ಯಾನಿಸುತ್ತದೆ. ಮುಗ್ಧ ಎಂಬುದು ಕೇವಲ ಬಟ್ಟೆಯಷ್ಟೇ ಅಲ್ಲ, ಅದಕ್ಕೂ ಮೀರಿ, ಮಹಿಳೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಮತ್ತು ಅವರ ನೈಜ ಸೌಂದರ್ಯವನ್ನು ತೋರಿಸಲು ನೆರವಾಗುವುದು ಎಂಬುದು ಅವರ ನಂಬಿಕೆ.

ಕೈಮಗ್ಗ ಮತ್ತು ರೇಷ್ಮೆ ಸೀರೆಗಳ ಸೇರ್ಪಡೆಯೊಂದಿಗೆ, ಭಾರತೀಯ ನೇಕಾರರನ್ನು ಉಳಿಸುವ ಮತ್ತು ಒಂದು ಪ್ರಭಾವವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ. ಕೈಮಗ್ಗಗಳನ್ನು ವ್ಯಾಪಕವಾಗಿ ಉತ್ತೇಜಿಸುವ ಆಶಯ ಹೊಂದಿರುವ ಅವರು, ತಮ್ಮ ಹೊಸ ಸಂಗ್ರಹಗಳ ಮೂಲಕ ಭಾರತದ ಕಲಾಕುಸುರಿ ಮತ್ತು ಸಂಸ್ಕೃತಿಯಾದ ʻಕೈಮಗ್ಗʼವನ್ನು ಸೂಕ್ತ ಗ್ರಾಹಕರಿಗೆ ತಲುಪಿಸುವ ಮತ್ತು ಅದಕ್ಕೆ ತಕ್ಕನಾದ ಸ್ಪಂದನೆಯೊಂದನ್ನು ದೊರಕಿಸಿಕೊಡುವ ಧ್ಯೇಯವನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next