Advertisement

ಮೊಗರ್ಪಣೆ ಸೇತುವೆ ದುರಸ್ತಿ ಕಾರ್ಯ ಆರಂಭ

03:52 PM Jul 04, 2018 | |

ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ನಗರದ ಮೊಗರ್ಪಣೆ ಸೇತುವೆ ಕೊನೆಗೂ ದುರಸ್ತಿ ಭಾಗ್ಯ ಕಂಡಿದೆ. ಮಂಗಳವಾರ ಬೆಳಗ್ಗೆ ಕಾಮಗಾರಿ ಆರಂಭಿಸಿ, ಶಿಥಿಲಗೊಂಡಿರುವ ಮೇಲ್ಪದರಕ್ಕೆ ಸಿಮೆಂಟ್‌, ಜಲ್ಲಿ ಮಿಶ್ರಿತ ತೇಪೆ ಹಾಕಲಾಗಿದೆ. ಸೇತುವೆಯ ಮೇಲ್ಪದರ ಶಿಥಿಲಗೊಂಡು ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಮಂಗಳವಾರ ಉದಯವಾಣಿ ಸುದಿನ ‘ಮೊಗರ್ಪಣೆ ಸೇತುವೆ ಮೇಲ್ಪದರ ಶಿಥಿಲ; ಇಲಾಖೆ ಮೌನ’ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕೆಆರ್‌ಡಿಸಿಎಲ್‌ ಸ್ಪಂದಿಸಿದ್ದು, ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. 

Advertisement

ಹಳೆ ಸೇತುವೆ ಬಳಕೆ
ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಗಮಕ್ಕೆ ತಾತ್ಕಾಲಿಕ ನೆಲೆಯಲ್ಲಿ ಕೆಲ ವಾಹನಗಳು ಹಳೆ ಸೇತುವೆಯಲ್ಲಿ ಓಡಾಟ ನಡೆಸಿದವು. ಪೊಲೀಸ್‌ ಸಿಬಂದಿ ಸಂಚಾರ ವ್ಯವಸ್ಥೆ ಸುಲಲಿತಗೊಳಿಸಿದರು. ಕಾಮಗಾರಿ ಸ್ಥಳದಲ್ಲಿ ವಾಹನ ಓಡಾಟ ನಡೆಸದಂತೆ ರಕ್ಷಣಾ ಬೇಲಿ ನಿರ್ಮಿಸಿ, ದುರಸ್ತಿ ಕಾರ್ಯ ನಡೆಸಲಾಯಿತು.

ನಿರ್ವಹಣೆ ಬಗ್ಗೆ ನಿಗಾ
ಸೇತುವೆಯ ಪಿಲ್ಲರ್‌, ಸಂಧು ಭಾಗಗಳಲ್ಲಿ ಗುಣಮಟ್ಟ ಹೇಗಿದೆ ಎಂಬ ಬಗ್ಗೆ ಆರು ತಿಂಗಳಿಗೊಮ್ಮೆ ಪರಿಶೀಲಿಸಿದರೆ, ದೀರ್ಘ‌ಕಾಲದ ತನಕ ಬಳಸಬಹುದು. ಮೊಗರ್ಪಣೆ ಹೊಸ ಸೇತುವೆ ಕಾಮಗಾರಿ ಆರಂಭದಲ್ಲೇ ಕಳಪೆ ಕಾಮಗಾರಿ ಕುರಿತಂತೆ ದೂರು ಬಂದು ವಿರೋಧ ವ್ಯಕ್ತವಾಗಿತ್ತು. ಅನಂತರ ಇಲಾಖೆ ಎಂಜಿನಿಯರ್‌ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ, ಮರು ಕಾಮಗಾರಿ ಕೈಗೆತ್ತಿಕೊಂಡಿತ್ತು. ಹಾಗಾಗಿ ಪದೇ-ಪದೆ ಸೇತುವೆ ಶಿಥಿಲ ಸ್ಥಿತಿಗೆ ಬಾರದಂತೆ, ನಿರ್ವಹಣೆ ಬಗ್ಗೆ ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next