ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 20ನೇ ವರ್ಷದ ಮೂಡುಬಿದಿರೆಯ ಹೊನಲು ಬೆಳಕಿನ “ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಶನಿವಾರ ಚೌಟರ ಅರಮನೆ ಕುಲದೀಪ ಎಂ. ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್, ಅಲಂಗಾರು ಪುತ್ತಿಗೆ ನೂರನಿ ಮಸೀದಿಯ ಮೌಲಾನಾ ಝಿಯಾವುಲ್É ಹಕ್, ಉದ್ಯಮಿ ಕುಂಟಾಡಿ ಸು ಧೀರ್ ಹೆಗ್ಡೆ ಹಾಗೂ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಅವರು ಕರೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಒಂಟಿಕಟ್ಟೆಯ ಅಯ್ಯಪ್ಪ ಮಂದಿರ ಸಹಿತ ಮೂಡುಬಿದಿರೆಯ ವಿವಿಧ ದೇವಸ್ಥಾನ, ದೈವಸ್ಥಾನಗಳ ಪ್ರಸಾದವನ್ನು ಕರೆಗೆ ಸಮರ್ಪಿಸ ಲಾಯಿತು. ವೀರ ರಾಣಿ ಅಬ್ಬಕ್ಕ ಪ್ರತಿಮೆಗೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್, ಕೋಶಾಧಿಕಾರಿ ಭಾಸ್ಕರ ಎಸ್. ಕೋಟ್ಯಾನ್, ಪ್ರ. ಕಾರ್ಯದರ್ಶಿ ಗುಣಪಾಲ ಕಡಂಬ, ಪಿಎಸ್‌ಐ ಸಿದ್ದಪ್ಪ ಸಹಿತ ಗಣ್ಯರು ಹಾರಾರ್ಪಿಸಿ ಪುಷ್ಪಾರ್ಚನೆಗೈದರು. ವೇದಿಕೆಯಲ್ಲಿ ಕೋಟಿ ಚೆನ್ನಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ಸಮ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ, ಕಂಬಳ ಕೋಣಗಳ ಯಜಮಾನ ಹಾಗೂ ಹಿರಿಯ ದೈವ ಪಾತ್ರಿ ಅಣ್ಣು ಶೆಟ್ಟಿ ಲಾಡಿ ಅವರನ್ನು ಸಮ್ಮಾನಿಸಲಾಯಿತು.
ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಂಡಲಾಧ್ಯಕ್ಷ ಸುನಿಲ್ ಆಳ್ವ, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ರೋಟರಿ ಅಧ್ಯಕ್ಷ ಮಹಮ್ಮದ್ ಆರಿಫ್, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಪ್ರವೀಣ್ ಪಿರೇರಾ, ರೋಟರಿ ಮಿಡ್‌ಟೌನ್ ಅಧ್ಯಕ್ಷ ಪುಷ್ಪರಾಜ್ ಜೈನ್, ಜೇಸಿಐ ಅಧ್ಯಕ್ಷೆ ಶಾಂತಲಾ ಆಚಾರ್ಯ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್, ಹನುಮಂತ ಮತ್ತು ವೆಂಕಟರಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಾಯ್ಲಸ್ ಡಿ’ಸೋಜಾ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ಅಬುಲ್ ಅಲಾ ಪುತ್ತಿಗೆ, ಮುಡಾದ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ವಕೀಲರಾದ ಎಂ.ಎಸ್. ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಮನೋಜ್ ಶೆಣೈ, ಅಲಂಗಾರು ಲಯನ್ಸ್ ಅಧ್ಯಕ್ಷ ವಿನೋದ್ ನಜ್ರತ್, ಪುರಸಭಾ ಮುಖ್ಯಾ ಧಿಕಾರಿ ಇಂದು ಎಂ., ಬಿಜೆಪಿ ಮುಖಂಡ ಜಗದೀಶ ಅಧಿ ಕಾರಿ, ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ, ಸುರೇಶ್ ಕೆ. ಪೂಜಾರಿ, ಗೋಪಾಲ್ ಶೆಟ್ಟಿಗಾರ್, ಅಜಯ್ ರೈ, ಪ್ರಶಾಂತ್ ಭಂಡಾರಿ ಮೊದಲಾದವರಿದ್ದರು.
ಕೋಣಗಳನ್ನು ಕರೆಗಿಳಿಸಿ ಯಜಮಾನರಿಗೆ ತೌಳವ ಸಂಸ್ಕೃತಿಯ ಗೌರವ ಸಲ್ಲಿಸಲಾಯಿತು. ನೇಗಿಲು ಕಿರಿಯ ವಿಭಾಗದಿಂದ ಮೊದಲ್ಗೊಂಡು ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು.
ದಾಖಲೆ ಸಂಖ್ಯೆಯ ಕೋಣಗಳು
ಕಳೆದ ಒಂದು ದಶಕದ ಕಂಬಳಕೂಟದ ಇತಿಹಾಸದಲ್ಲಿ ದಾಖಲೆ ಸಂಖ್ಯೆಯ 158 ಜೋಡಿ ಕೋಣಗಳು ಭಾಗವಹಿಸಿವೆ.