ಹೆಬ್ರಿ : ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ನಡೆಯುತ್ತಿರುವ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ ಪ್ರಯುಕ್ತ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಂಗಭೂಮಿಯ ಕುರಿತ ವಿಚಾರ ಸಂಕಿರಣ ನಡೆಯಿತು.
ಮಧ್ಯಪ್ರದೇಶದ ಮಯಾಂಕ್ ತಿವಾರಿ ವಿಚಾರ ಸಂಕಿರಣ ಉದ್ಘಾಟಿಸಿದರು. ಸಮಕಾಲೀನ ರಂಗಭೂಮಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ರಂಗಕರ್ಮಿ ಬೆಂಗಳೂರಿನ ವೆಂಕಟೇಶ್ ವಿಚಾರ ಮಂಡನೆ ಮಾಡಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಮುದ್ರಾಡಿ ಶುಭದರ ಶೆಟ್ಟಿ ಅವರು ಪತ್ರಕರ್ತ ಸುಕುಮಾರ್ ಮುನಿಯಾಲ್ ಅವರಿಗೆ ರಂಗಾಭಿನಂದನೆ ನೀಡಿ ಗೌರವಿಸಿದರು.
ಪ್ರಾಂಶುಪಾಲ ಪ್ರೊ| ಎಂ.ಆರ್.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಎಸ್.ನಮ ತುಳುವೆರ್ ಕಲಾ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್, ಅಧ್ಯಕ್ಷ ಸುಕುಮಾರ್ ಮೋಹನ್, ಸಂಘಟನಾ ಕಾರ್ಯದರ್ಶಿ ಜಗದೀಶ ಜಾಲ, ವಾಣಿ ಸುಕುಮಾರ್, ಸುಗಂಧಿ, ಉಮೇಶ ಕಲ್ಮಾಡಿ ಉಪಸ್ಥಿತರಿದ್ದರು.
ಸಂಜೆ ಮುದ್ರಾಡಿ ನಾಟ್ಕದೂರು ಬಯಲು ರಂಗಮಂದಿರದಲ್ಲಿ ಮಧ್ಯಪ್ರದೇಶ ಲೋಕ್ ರಂಗದರ್ಪಣ ಕಲಾ ಕೇಂದ್ರದ ವತಿಯಿಂದ ಟ್ಯಾಕ್ಸ್ ಫ್ರೀ ಎಂಬ ಹಿಂದಿ ನಾಟಕ ಪ್ರದರ್ಶನಗೊಂಡಿತು.