Advertisement
ಬಲ್ಲಾಳರಾಯನ ದುರ್ಗದ ಅರಣ್ಯವೂ ಮೀಸಲು ಅರಣ್ಯವಾಗಿದ್ದು, ಈ ಅರಣ್ಯದೊಳಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ಆದರೆ ದುರ್ಗದಹಳ್ಳಿಯ ರಾಣಿಝರಿಯ ನೆತ್ತಿಯ ಮೇಲೆ ಕೆಲ ಪ್ರವಾಸಿಗರು ಟೆಂಟ್ ನಿರ್ಮಿಸಿ ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಸೂಚನಾಫಲಕ ಅಳವಡಿಸಲಿ: ಬಲ್ಲಾಳರಾಯನ ದುರ್ಗದ ಪ್ರವೇಶಿಸುವ ಮಾರ್ಗದ ಆರಂಭದಲ್ಲಿ ಅರಣ್ಯ ಇಲಾಖೆ ಮೀಸಲು ಅರಣ್ಯದೊಳಗೆ ಪ್ರವೇಶಿಸದಂತೆ ಸೂಚನಾಫಲಕಗಳನ್ನು ಅಳವಡಿಸಿಸುವ ಅಗತ್ಯವಿದೆ. ಅಕ್ರಮ ಪ್ರವೇಶ ಮಾಡಿದರೆ ಕಾನೂನಿನಲ್ಲಿ ಅದಕ್ಕಿರುವ ಶಿಕ್ಷೆ ಅಥವಾ ದಂಡದ ಪ್ರಮಾಣವನ್ನು ಸೂಚನಾಫಲಕದಲ್ಲಿ ಅಳವಡಿಸಿದರೆ ಅಕ್ರಮ ಪ್ರವೇಶ ಮಾಡುವವರ ಪ್ರಮಾಣ ಸ್ವಲ್ಪವಾದರೂ ಕಡಿಮೆಯಾಗಬಹುದಾಗಿದೆ.
ಗ್ರಾಪಂ ಪ್ರಯತ್ನಕ್ಕೆ ಅಡ್ಡಗಾಲದ ಪ್ರವಾಸಿಗರು: ಬಲ್ಲಾಳರಾನದುರ್ಗದ ಮೀಸಲು ಅರಣ್ಯವೂ ಸುಂಕಸಾಲೆ ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಈ ಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಗಾಗ ಸ್ವಚ್ಛತಾ ಆಂದೋಲನ ನಡೆಸುತ್ತಾ ಬಂದಿದ್ದು ಅಲ್ಲಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಸೂಚನಾಫಲಕಗಳನ್ನು ಅಳವಡಿಸಿದೆ. ಹತ್ತಾರು ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಇಡಲಾಗಿದೆ. ಆದರೂ ಪ್ರವಾಸಿಗರು ಪ್ಲಾಸ್ಟಿಕ್ ಮದ್ಯದ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕದೇ ಅರಣ್ಯದೊಳಗೆ ಎಸೆಯುತ್ತಿರುವುದು ನಡೆಯುತ್ತಲ್ಲೆ ಇದೆ.
ಮೀಸಲು ಅರಣ್ಯದ ನೆಪದಲ್ಲಿ ಸಣ್ಣರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇವುಗಳು ಕಣ್ಣಿಗೆ ಬಿದ್ದರೂ ಮೌನವಹಿಸಿರುವುದು ಪ್ರವಾಸಿಗರ ಮೇಲಿನ ಪ್ರೀತಿಗೋ ಅಥವಾ ಅವರು ಕೊಡುವ ಹಣದಾಸೆಗೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ.•ಅಶ್ವಥ್, ಕೊಟ್ಟಿಗೆಹಾರದ ಪರಿಸರಪ್ರೇಮಿ