Advertisement

ಕಡ್ಡಾಯ ಕ್ವಾರಂಟೈನ್‌: ಗ್ರಾಪಂಗಳ ನಿರ್ಣಯ

06:16 PM May 14, 2020 | Naveen |

ಮೂಡಿಗೆರೆ: ಕೋವಿಡ್‌-19 ಸೋಂಕು ಇರುವ ಭೀತಿ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ ಹೋಂ-ಕ್ವಾರಂಟೈನ್‌ ಮಾಡುವುದಾಗಿ ಹೊರನಾಡು, ಮರಸಣಿಗೆ ಹಾಗೂ ಇಡಕಿಣಿ ಗ್ರಾಮ ಪಂಚಾಯತಿಗಳು ನಿರ್ಣಯ ಕೈಗೊಂಡಿವೆ.

Advertisement

ಹೊರನಾಡು, ಮರಸಣಿಗೆ ಹಾಗೂ ಇಡಕಣಿ ಗ್ರಾಪಂಗಳಲ್ಲಿ ನಡೆಸಲಾದ ಸಭೆಯಲ್ಲಿ ಕೆಂಪು ಹಾಗೂ ಹಳದಿ ವಲಯಗಳಿಂದ ಬರುವ ಯಾವುದೇ ವ್ಯಕ್ತಿಗಳನ್ನು ಊರಿನ ಸುರಕ್ಷತೆಯ ದೃಷಿಯಿಂದ ಕಡ್ಡಾಯವಾಗಿ ಹೋಂ-ಕ್ವಾರಂಟೈನ್‌ ಮಾಡವುದು ಸೂಕ್ತ. ಇದರಿಂದಾಗಿ ಹಲವರಿಗೆ ತೊಂದರೆಯ ಜೊತೆಗೆ ಬೇಸರ ಉಂಟಾದರೂ ಸಹಜ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸನ್ಮತಿ, ಉಪಾಧ್ಯಕ್ಷೆ ವಿನೋದಾ, ಪಿಡಿಒ ಅರುಣ್‌ ಕುಮಾರ್‌, ವೈದ್ಯಾ ಧಿಕಾರಿ ಸುನೈನಾ, ಪೊಲೀಸ್‌ ಸಿಬ್ಬಂದಿ ಮೋಹನ್‌, ರಾಜಣ್ಣ, ಮರಸಣಿಗೆ ಗ್ರಾಪಂ ಸಭೆಯಲ್ಲಿ ಅಧ್ಯಕ್ಷೆ ಇಂದಿರಾ, ಸದಸ್ಯ ವಿಶ್ವನಾಥ್‌, ಪಿಡಿಒ ಸುಧೀರ್‌, ಇಡಕಣಿ ಗ್ರಾಪಂ ಅಧ್ಯಕ್ಷೆ ಸುಚಿತ್ರಾ, ಪಿಡಿಒ ಶ್ರೀನಿವಾಸ್‌, ಗ್ರಾಪಂ ಸದಸ್ಯ ಸುಧಾಕರ್‌, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next