Advertisement

ಕೋಮಾರ್ಕ್‌ ಪ್ರಗತಿಗೆ ಸಹಕರಿಸಿ

03:45 PM Mar 20, 2020 | Naveen |

ಮೂಡಿಗೆರೆ: ತಾಲೂಕಿನ ರೈತರು ಕೋಮಾರ್ಕ್‌ ಸಂಸ್ಥೆಗೆ ಕಾಫಿ ಹಾಗೂ ಕಾಳುಮೆಣಸು ಪೂರೈಕೆ ಮಾಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಅರೆಕುಡಿಗೆ ಶಿವಣ್ಣ ಮನವಿ ಮಾಡಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾಫಿ ಹಾಗೂ ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಕೋಮಾರ್ಕ್‌ ಸಂಸ್ಥೆ ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಬೆಳೆಗಾರರ ಹಿತದೃಷ್ಟಿಯಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ಕಾಫಿ ಹಾಗೂ ಕಾಳುಮೆಣಸು ಖರೀದಿ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಇದೊಂದು ಬಹುರಾಜ್ಯ ಸಹಕಾರ ಸಂಸ್ಥೆಯಾಗಿದ್ದು, ಇದನ್ನು ಪುನಃ ಶ್ಚೇತನಗೊಳಿಸಲು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಪೂರೈಕೆ ಮಾಡಬೇಕು. ಇದರಿಂದ ಸಂಸ್ಥೆ ಅಭಿವೃದ್ಧಿಯಾಗಿ ರೈತರ ಪರವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸ್ಪರ್ಧಾತ್ಮಕ ಬೆಲೆ ಹಾಗೂ ಪಾರದರ್ಶಕ ಸೇವೆ ನೀಡುವ ಜತೆಗೆ ರೈತರ ಪರವಾದ ಉದ್ದೇಶ ಹೊಂದಲಾಗಿದೆ. ಪ್ರಸ್ತುತ ಮಾರುಕಟ್ಟೆ ದರದಲ್ಲಿ ಕಾಫಿ ಮತ್ತು ಕಾಳುಮೆಣಸನ್ನು ಖರೀದಿ ಮಾಡಲಾಗುತ್ತಿದ್ದು, ರೈತರು ಸಹಕರಿಸುವುದರೊಂದಿಗೆ ಸಂಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕೋಮಾರ್ಕ್‌ ಸಂಸ್ಥೆಯ ಉಪಾಧ್ಯಕ್ಷ ಎಚ್‌.ಬಿ.ಬಾಲರಾಜ್‌ ಅವರು ಮಾತನಾಡಿ, ಸಂಸ್ಥೆ ಆರ್ಥಿಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದು ಅತ್ಯಗತ್ಯ. ರೈತರ ಪರ ಸಂಸ್ಥೆಯಾಗಿರುವುದರಿಂದ ರೈತರು ಧೈರ್ಯವಾಗಿ ವ್ಯವಹರಿಸಬಹುದು. ಎಲ್ಲವೂ ಪಾರದರ್ಶಕವಾಗಿ ನಡೆಯುವುದರಿಂದ ಯಾವುದೇ ಅನುಮಾನಗಳಿಗೆ ಆಸ್ಪದ ಇರುವುದಿಲ್ಲ ಎಂದರು.

ಕೋಮಾರ್ಕ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಸ್‌.ಜಯರಾಂ, ಕೆಜಿಎಫ್‌ ಅಧ್ಯಕ್ಷ ತೀರ್ಥ ಮಲ್ಲೇಶ್‌, ಉಪಾಧ್ಯಕ್ಷ ಮೋಹನ್‌ ಕುಮಾರ್‌, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌.ಬಾಲಕೃಷ್ಣ, ಕೋಮಾರ್ಕ್‌ ಸಂಸ್ಥೆ ನಿರ್ದೇಶಕರಾದ ಒ.ಎಸ್‌.ಗೋಪಾಲ ಗೌಡ, ಮನೋಹರ್‌ ಕತ್ಲೆಖಾನ್‌, ಬಸವರಾಜು, ವ್ಯವಸ್ಥಾಪಕ ಕೆ.ಕೆ. ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next