Advertisement

ಈರುಳ್ಳಿ ಬೆಳೆಗಾರರಿಗೆ ಸಲಹೆ

01:11 PM Jun 10, 2020 | Naveen |

ಮೂಡಿಗೆರೆ: ಈರುಳ್ಳಿ ಬೆಳೆಯುವ ರೈತರು ಹಲವು ಮುನ್ಸೂಚನಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಅಧಿಕ ಇಳುವರಿ ಕೊಡುವ ಭೀಮಾ ಸೂಪರ್‌, ಅರ್ಕಾ ಕಲ್ಯಾಣ್‌, ಅರ್ಕಾ ನಿಕೇತನ್‌, ಲೈನ್‌-883 ತಳಿಗಳನ್ನು ಆಯ್ದುಕೊಂಡು ಉತ್ತಮ ಬೆಳೆ ಬೆಳೆಯಹುದಾಗಿದೆ ಎಂದು ಮೂಡಿಗೆರೆ ವಲಯ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Advertisement

ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿರುವ ಕೇಂದ್ರವು, ಬೀಜಗಳನ್ನು ಕೈ ಅಥವಾ ಕೂರಿಗೆಯಲ್ಲಿ ಬಿತ್ತನೆ ಮಾಡುವಾಗ ಒಂದು ಎಕರೆ ಪ್ರದೇಶಕ್ಕೆ ಸಮಾರು 8-10ಕೆಜಿ ಬೀಜಗಳನ್ನು ಬಳಸಬೇಕಾಗುತ್ತದೆ. ಬಿತ್ತನೆಗೆ ಮುನ್ನ ಒಂದು ಕೆಜಿ ಬಿತ್ತನೆ ಬೀಜಕ್ಕೆ 2ಗ್ರಾಂ ಕ್ಯಾಪ್ಟನ್‌ ಅಥವಾ 2.5 ಗ್ರಾಂ ಥ್ಯಾರಮ್‌ ಅಥವಾ 2ಗ್ರಾಂ ಬಿನೋಮಿಲ್‌ ಔಷಧಿಯನ್ನು ಬೀಜೋಪಚಾರಕ್ಕೆ ಬಳಸಬೇಕು ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ. ದೂ. 08263-228198 ಅನ್ನು ಸಂಪರ್ಕಿಸಲು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next