Advertisement

ಹಳ್ಳಿಗಳಿಗಿಲ್ಲ ಗ್ರಂಥಾಲಯ

07:04 PM Nov 14, 2019 | Naveen |

ಗೋವಿಂದಪ್ಪ ತಳವಾರ
ಮುಧೋಳ:
ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಸರ್ಕಾರ ಆರಂಭಿಸಿರುವ ಗ್ರಾಮ ಪಂಚಾಯತ್‌ಗೊಂದು ಗ್ರಂಥಾಲಯ ಕಲ್ಪನೆ, ಗ್ರಾಮ ಪಂಚಾಯತ್‌ ಗಳಿಗೆ ಸೀಮಿತವಾಗಿರುವುದರಿಂದ ಗ್ರಾಪಂ ವ್ಯಾಪ್ತಿಯಲ್ಲಿನ ಇನ್ನುಳಿದ ಗ್ರಾಮಗಳ ನಿವಾಸಿಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

Advertisement

ಸರ್ಕಾರ ಪ್ರತಿ ಗ್ರಾಪಂಗೆ ಒಂದು ಗ್ರಂಥಾಲಯ ನಿರ್ಮಿಸಬೇಕು ಎಂಬ ಯೋಜನೆ ಬಹುತೇಕ ಯಶಸ್ವಿಯಾಗಿದ್ದರೂ ಗ್ರಾಪಂ ಇಲ್ಲದ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಮಾಡದ ಕಾರಣ ಗ್ರಾಮೀಣ ಭಾಗದ ಓದುಗರಿಗೆ ಪ್ರಚಲಿತ ವಿದ್ಯಮಾನದ ಬಗ್ಗೆ ತಿಳಿದುಕೊಳ್ಳಲು ತೊಂದರೆ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡವರೆ ಅಧಿಕ ಪ್ರಮಾಣದಲ್ಲಿ ವಾಸಿಸುವುದರಿಂದ ವಿದ್ಯಾರ್ಥಿಗಳಿಗೆ ನಿತ್ಯ ದಿನಪತ್ರಿಕೆ, ಸ್ಪರ್ಧಾತ್ಮ ಪರೀಕ್ಷೆಗೆ ಅವಶ್ಯವಿರುವ ಪುಸ್ತಕಗಳು ಕೊಂಡು ಓದುವುದು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ಗ್ರಂಥಾಲಯವಿಲ್ಲದ ಕಾರಣ ಅನಿವಾರ್ಯವಾಗಿ ಓದಿನಿಂದ ವಂಚಿತಂತರಾಗುವಂತಾಗಿದೆ.

ಸರ್ಕಾರದ ನಿರ್ಲಕ್ಷ: ರಾಜ್ಯ ಸರ್ಕಾರ ಗ್ರಾಪಂಗೆ ಒಂದರಂತೆ ಗ್ರಂಥಾಲಯ ನಿರ್ಮಿಸುವಲ್ಲಿ ಯಶಸ್ವಿಯಾದರೂ ಗ್ರಾಪಂ ಕಚೇರಿಯಿಲ್ಲದ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಿಲ್ಲ. ಇನ್ನು ಈ ಬಗ್ಗೆ ಪ್ರಶ್ನಿಸಿದರೆ ಅಂತಹ ಗ್ರಾಮದ ಜನರು ಆಸಕ್ತಿ ವಹಿಸಿ ಸಂಬಂಧಿ ಸಿದ ಅಧಿಕಾರಿಗಳಿಗೆ ಮನವಿ ನೀಡಿದರೆ ಸರ್ಕಾರ ಗ್ರಂಥಾಲಯ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಬಹುದು ಎನ್ನುತ್ತಾರೆ.

ಒಂದೇ ಗ್ರಾಮದಲ್ಲಿ ಗ್ರಂಥಾಲಯ: ತಾಲೂಕಿನ ಗ್ರಾಪಂ ಕಚೇರಿಯಿಲ್ಲದೆ ಸ್ವತಂತ್ರವಾಗಿ ಒಂದೇ ಒಂದು ಗ್ರಾಮದಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಇಂಗಳಗಿ ಗ್ರಾಪಂ ವ್ಯಾಪ್ತಿಯ ಯಡಹಳ್ಳಿ ಗ್ರಾಮದಲ್ಲಿ ಮಾತ್ರ ಸ್ವತಂತ್ರವಾದ ಗ್ರಂಥಾಲಯ ಕೇಂದ್ರವಿದ್ದು, ಇನ್ನುಳಿದಂತೆ 29 ಗ್ರಾಪಂಗಳ ಪೈಕಿ 2015ರಲ್ಲಿ ಪುನರ್ವಿಂಗಡಣೆಗೊಂಡ 5 ಗ್ರಾಪಂ ಕಚೇರಿ ಸೇರಿ ತಾಲೂಕಿನ 49 ಗ್ರಾಮಗಳು ಗ್ರಂಥಾಲಯ ಸೌಲಭ್ಯದಿಂದ ವಂಚಿತವಾಗಿವೆ.

ಸಾರ್ವಜನಿಕರ ನಿರಾಸಕ್ತಿ: ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡದ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹುತೇಕರು ಕೂಲಿಕಾರ್ಮಿಕರೆ ವಾಸವಾಗಿರುವ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆಯೇ ವಾಪಸ್ಸಾಗುತ್ತಾರೆ.

Advertisement

ಅಂತಹ ಜನ ಗ್ರಂಥಾಲಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಆದರೆ ಅಲ್ಲಿನ ವಿದ್ಯಾವಂತರಿಂದ ಮಾತ್ರ ನಮ್ಮ ಊರಿಗೊಂದು ಗ್ರಂಥಾಲಯ ಬೇಕು ಎಂಬ ಕೂಗು ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next