Advertisement

ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ

04:34 PM May 25, 2020 | Naveen |

ಮುಧೋಳ: ಕಣ್ಣಿಗೆ ಕಾಣದ ಕೋವಿಡ್ ವೈರಸ್‌ ಇಡಿ ಜಗತ್ತನ್ನೆ ತಲ್ಲಣಗೊಳಿಸಿದೆ. ಇದಕ್ಕಾಗಿ ಭಯ ಪಡದೆ ಎಚ್ಚರದಿಂದ ಇರಬೇಕು, ಆಯುಷ್‌ ಆಯುರ್ವೇದ ಪದ್ದತಿ, ಹಿತಮಿತ ಆಹಾರ, ನಿತ್ಯ ವಾಕಿಂಗ್‌ ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮದಿಂದ ಮನುಷ್ಯ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢನಾಗಿ ರೋಗನಿರೋಧಕ ಶಕ್ತಿಯ ವೃದ್ಧಿಯಿಂದ ಕೋವಿಡ್ ಸೇರಿದಂತೆ ಯಾವುದೆ ರೋಗ ತಡೆಗಟ್ಟಬಹುದು ಎಂದು ಆಯುಷ್‌ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ| ಭೂಷಣ ಉಪಾದ್ಯೆ ಹೇಳಿದರು.

Advertisement

ನಗರದ ಸರಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ, ಆರೋಗ್ಯ ಕಿಟ್‌ ವಿತರಣಾ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯವೇ ನಿಜವಾದ ಸಂಪತ್ತು. ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ| ವೆಂಕಟೇಶ ಮಲಘಾಣ ಮಾತನಾಡಿ, ತಾಲೂಕಿನ ವೈದ್ಯರು, ಆಶಾ ಕಾರ್ಯಕರ್ತರು, ನರ್ಸ್‌ ಹಾಗೂ ಆಯುಷ್‌ ಇಲಾಖೆಯ ಡಾ|ಭೂಷಣ ಉಪಾಧ್ಯೆ ನೇತೃತ್ವದ ತಂಡ ಹಗಲಿರುಳು ಸೇವೆ ಮಾಡಿ ಕೋವಿಡ್ ಸೋಂಕು ತಡೆಗಟ್ಟುವಲ್ಲಿ ವಾರಿಯರ್ನಂತೆ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮುಖ್ಯ ವೈದ್ಯಾಧಿಕಾರಿ ಡಾ| ಬಸವರಾಜ ಪಾಟೀಲ ಆಯುರ್ವೇದ ಕಿಟ್‌ ವಿತರಿಸಿದರು. ಡಾ| ರಾಘವೇಂದ್ರ ನಾಲತವಾಡ, ಉಪನೋಂದಣಿ ಅಧಿಕಾರಿ ಎಸ್‌.ಆರ್‌. ಕಟ್ಟಿಮನಿ, ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ಡಾ|ಪ್ರವೀಣ ಜಹಾಗಿರದಾರ ಉಪಸ್ಥಿತರಿದ್ದರು. ಡಾ| ಶ್ರೇಣಿ ನಾವಲಗಿ, ಡಾ| ಗೀತಾ ಮದಭಾವಿ ಆರೋಗ್ಯ ತಿಳಿವಳಿಕೆ ನೀಡಿದರು. ಡಾ| ಉಪಾಧ್ಯೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕುಮಾರ ಬೊನಗೇರಿ ನಿರೂಪಿಸಿದರು. ವೈದ್ಯಾಧಿಕಾರಿ ಡಾ| ಸುನೀಲ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next