ಮುಧೋಳ: ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ಕಳೆದೊಂದು ವಾರದಿಂದ ಘಟಪ್ರಭಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ನದಿ ತೀರದ ಗ್ರಾಮದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಸದ್ಯ ಘಟಪ್ರಭಾ ನದಿಗೆ 45785 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಮುಧೋಳ ಹೊರವಲಯದ ಯಾದವಾಡ ಬ್ರಿಜ್ ಮತ್ತೆ ಮುಳುಗುವ ಹಂತಕ್ಕೆ ತಲುಪಿದೆ.
11 ಬ್ರಿಜ್ ಕಂ ಬ್ಯಾರೇಜ್ ಜಲಾವೃತ: ಮುಧೋಳ ತಾಕೂಕು ವ್ಯಾಪ್ತಿಯಲ್ಲಿರು 12 ಬ್ರಿಜ್ ಕಂ ಬ್ಯಾರೇಜ್ ಗಳ ಪೈಕಿ ಮಾಚಕನೂರು ಬ್ರಿಜ್ ಕಂ ಬ್ಯಾರೇಜ್ ಹೊರತುಪಡಿಸಿ ಮಿಕ್ಕೆಲ್ಲ ಬ್ರಿಜ್ ಕಂ ಬ್ಯಾರೇಜ್ ಗಳು ಜಲಾವೃತಗೊಂಡಿವೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರೆದರೆ ಕಳೆದ ತಿಂಗಳಿನಂತೆ ಎಲ್ಲ ಪ್ರಮುಖ ರಸ್ತೆಗಳ ಸಂಚಾರ ಸ್ಥಗಿತಗೊಳ್ಳುವ ಸಂಭವವಿದೆ ಎನ್ನಲಾಗಿದೆ.
ಇದನ್ನೂ ಓದಿ: Encounter: ಸೇನಾ ಕಾರ್ಯಾಚರಣೆ… ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ