Advertisement

Mudhol: ಪ್ರಕರಣ ಹಿಂಪಡೆಯದಿದ್ದರೆ ಹಿಂದೂ ಪರ‌ ಸಂಘಟನೆಯಿಂದ ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ

09:39 PM Oct 01, 2024 | Team Udayavani |

ಮುಧೋಳ: ಇತ್ತೀಚೆಗೆ ನಗರದಲ್ಲಿ‌ ಹಿಂದೂ ಒಕ್ಕೂಟಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಮುಖಂಡ‌ ಸುನೀಲ‌ ಕಂಬೋಗಿ ಅವರು ಮಾತನಾಡಿರುವ ಭಾಷಣ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತದೆ ಎಂಬ ನೆಪವನ್ನು ಮುಂದಿಟ್ಟಕೊಂಡು ಕಂಬೋಗಿ ಅವರ ಮೇಲೆ‌ ಪೊಲೀಸ್ ಇಲಾಖೆ ಸ್ವಯಂಪ್ರೇರಿತ‌ ಪ್ರಕರಣ ದಾಖಲಿಸಿಕೊಂಡಿರುವ ಕ್ರಮವನ್ನು ಹಿಂದೂ ಸಮಾಜ ಖಂಡಿಸುತ್ತದೆ ಎಂದು ಹಿಂದೂ ಪರ‌ ಮುಖಂಡರು ತಿಳಿಸಿದ್ದಾರೆ.

Advertisement

ಗಣೇಶೋತ್ಸವದ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಗರದಲ್ಲಿ ಭಾಷಣ ಮಾಡಿರುವ ಕ್ರಮವನ್ನು ಖಂಡಿಸಿ‌ ಅನ್ಯಕೋಮಿನವರು ಯತ್ನಾಳರ ವಿರುದ್ದ ಪ್ರತಿಭಟನೆ ನಡೆಸಿದ್ದರು. ನಂತರ ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಯತ್ನಾಳರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಅನ್ಯಕೋಮಿನವರ ಪ್ರತಿಭಟನೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದೆವು. ಈ ವೇಳೆ ದಲಿತ ಮುಖಂಡ ಸುನೀಲ‌ ಕಂಬೋಗಿಯವರು ಪರ್ಷಿಯನ್ ದಾಳಿಕೋರ ಔರಂಗಜೇಬನ ಕುರಿತ ಇತಿಹಾಸ ತಿಳಿಸುವ ಭಾಷಣ ಮಾಡಿದ್ದರು. ಇದನ್ನೆ ನೆಪವಾಗಿಟ್ಟುಕೊಂಡ‌‌‌ ಪೊಲೀಸರು ಕಂಬೋಗಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ನಮ್ಮ ದೇಶದಲ್ಲಿ‌ ಇತಿಹಾಸದ ಬಗ್ಗೆ ಮಾತನಾಡಲು ಸರ್ವರಿಗೂ ಸಾಂವಿಧಾನಿಕ ಹಕ್ಕಿದೆ. ಓರ್ವ ದಾಳಿಕೋರನ ಬಗ್ಗೆ ಹೇಳಿದರೆ ಮತ್ತೊಂದು ಕೋಮಿಗೆ ನೋವುಂಟಾಗುತ್ತದೆ ಎಂಬ ಇಲಾಖೆ ನಿರ್ಧಾರ ಸಂವಿಧಾನಕ್ಕೆ ವಿರೋಧವಾಗಿದೆ. ಪೊಲೀಸರು ಯಾರದ್ದೋ‌ ಒತ್ತಡಕ್ಕೆ‌ ಮಣಿದು ಪ್ರಕರಣ ದಾಖಲಿಸುವುದು ಇಲಾಖೆಗೆ ಶೋಭೆ ತರುವುದಿಲ್ಲ. ಕೂಡಲೇ ಕಂಬೋಗಿ ಅವರ ಮೇಲೆ ದಾಖಲಿಸಿರುವ ಪ್ರಕಣವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹಿಂದು ಸಂಘಟನೆಗಳ ಒಕ್ಕೂಟ ಉಗ್ರ ಹೋರಾಟ ನಡೆಸುತ್ತದೆ ಎಂದು ಹಿಂದುಪರ‌ ಸಂಘಟನೆಗಳ‌ ಮುಖಂಡರಾದ ಸದಾ ಜಾಧವ, ಗುರುಪಾದ ಕುಳಲಿ, ಆನಂದ ಬನ್ನೂರ, ಶಿವು ಬೆಟಗೇರಿ, ವೆಂಕಣ್ಣ ಕಳ್ಳಿಗುದ್ದಿ, ಆಕಾಶ‌ ಪೂಜಾರಿ, ಶ್ರೀಶೈಲ‌‌ ಪಾಟೀಲ, ಪುಂಡಲೀಕ ಮೋಹಿತೆ, ಪರಸು ನಿಗಡೆ, ಕೇದಾರಿ ಕದಂ ಅವರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next