Advertisement

Mudhol;ಕೋಟ್ಯಂತರ ಮೌಲ್ಯದ ನಕಲಿ ಗುಟ್ಕಾ‌ ವಶ; 9 ಆರೋಪಿಯ ಬಂಧನ

05:41 PM Jun 12, 2024 | Team Udayavani |

ಮುಧೋಳ : ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ‌ ಮಾರುಕಟ್ಟೆಯಲ್ಲಿ‌ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತರನ್ನು ದೇವದುರ್ಗದ ಮಹಮ್ಮದ ವಶೀಂ, ಹೈದರಾಬಾದಿನ ಮುನೀರ, ಹಿಮಾಯತ, ದೆಹಲಿಯ ಮಹಮ್ಮದ ಅಲಿ, ನಿಪ್ಪಾಣಿಯ ವಿಕಾಸ ಚವಾಣ್, ಸಂತೋಷ ಬಳ್ಳೊಳ್ಳೆ, ಬೆಳಗಾವಿಯ ಜಹೀರ ಅಬ್ಬಾಸ, ನದೀಮ ಹಾಗೂ ಇಕ್ಬಾಲ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಆರ್ ಎಂಡಿ ತಂಬಾಕು ಉತ್ಪನ್ನವನ್ನು ನಕಲಿಯಾಗಿ ತಯಾರಿಸಿ ಕಂಪನಿಗೆ ಅಪಾರ ಹಾನಿಯನ್ನುಂಟು ಮಾಡುತ್ತಿದ್ದರು. ಈ ಬಗ್ಗೆ ಮುಧೋಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ನಾಲ್ಕು ರಾಜ್ಯಗಳ ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ.

ನಕಲಿ ಗುಟ್ಕಾ‌ ತಯಾರಿಕೆಗೆ ಬಳಕೆ ಮಾಡುತ್ತಿದ್ದ ಮೂರು ಯಂತ್ರಗಳು, ಖಾಲಿ ಪ್ಯಾಕೆಟ್ ಸೇರಿ ಕೋಟ್ಯಂತರ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಿಪಿಐ ಆರ್.ಆರ್. ಪಾಟೀಲ‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ರಮೇಶ ಪಾಟೀಲ, ರಾಕೇಶ ಬಗಲಿ ಪೊಲೀಸ್ ಸಿಬ್ಬಂದಿ ಆರ್.ಬಿ.ಕಟಗೇರಿ, ಬೀರಪ್ಪ ಕುರಿ, ಹನಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ ಅತ್ರಾವತ, ಎಚ್.ವೈ.ಕೋಳಿ, ಎನ್.ವೈ. ಐದಮನಿ ಅವರ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next