Advertisement

Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ‌ ಖಂಡನೆ; ಮನವಿ ಸಲ್ಲಿಕೆ

08:50 PM Sep 24, 2024 | Team Udayavani |

ಮುಧೋಳ: ನಗರದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಡೆದ ಪ್ರತಿಭಟನೆಯನ್ನು ಖಂಡಿಸಿ ಹಿಂದೂ ಪರ‌‌ ಸಂಘಟನೆ ಕಾರ್ಯಕರ್ತರು ಸೆ.24ರ ಮಂಗಳವಾರ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಡಗಣ್ಣ ಬಾಲಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಶಿವಾಜಿ ವೃತ್ತಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು.

ಈ ವೇಳೆ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ಹನಮಂತ ಮಳಲಿ, ದೇಶದಲ್ಲಿನ ಮುಸ್ಲಿಮರು ಹಿಂದೂಗಳೊಂದಿಗೆ ನ್ಯಾಯಯುತವಾಗಿ ಹೊಂದಾಣಿಕೆ ಮಾಡಿಕೊಂಡರೆ ನಿಮಗೆ ದೇಶದಲ್ಲಿ ಭವಿಷ್ಯವಿದೆ. ಒಂದು ವೇಳೆ ಹೊಂದಾಣಿಕೆ ಜೀವನ ಸಾಗಿಸದೆ ಹೋದರೆ ಮುಂದಿನ ದಿನ ನಿಮಗೆ ಕೆಟ್ಟ ದಿನಗಳಾಗಲಿವೆ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮುಧೋಳ ನಗರದ ಮಸೀದಿಗೆ ಬಂದು ಹೋಗುತ್ತಾರೆ. ಪೊಲೀಸ್ ಇಲಾಖೆ ಅವರನ್ನು ಹಿಡಿಯುವ ಕೆಲಸ ಮಾಡದೆ, ನಮ್ಮ ಜನಪ್ರತಿನಿಧಿ ಯತ್ನಾಳ್ ಮುಧೋಳಕ್ಕೆ ಆಗಮಿಸಿದರೆ ಅವರಿಗೆ ತೊಂದರೆ ನೀಡುತ್ತೀರಿ ಎಂದು ಇಲಾಖೆ‌ ನಡೆಗೆ ಬೇಸರ ವ್ಯಕ್ತಪಡಿಸಿದರು.

Advertisement

ಮುಸ್ಲಿಮರು ಯಾವ ಕೆಲಸ ಮಾಡಿದರೂ ಬಿಡಿಸಿಕೊಂಡು ಬರಬೇಕು ಎಂದು ಈಗಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಮತ ಹಾಕಿದ್ದಾರೆ. ಅದೇ ಧೈರ್ಯದ ಮೇಲೆ ಇಂದು ಸಮಾಜದಲ್ಲಿ ಹಲವಾರು ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದಾರೆ. ಸರ್ಕಾರ ಅವರಿಗೆ ಕೊಟ್ಟ ಮಾತಿನಂತೆ ಬಿಡಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

ಹಿಂದೂ ಬಾಂಧವರು ರಾಜಕೀಯವಾಗಿ ಯಾವುದೇ ಪಕ್ಷದಲ್ಲಿ ಕೆಲಸ ಮಾಡಿ. ಆದರೆ ದೇಶದ ಹಾಗೂ ಧರ್ಮಕ್ಕೆ ಸಮಸ್ಯೆ ಎದುರಾದಾಗ ಒಂದಾದರೆ ಮಾತ್ರ ನಮ್ಮ ವಿರುದ್ದ ಶಕ್ತಿಗಳು ಗೌಣವಾಗುತ್ತವೆ. ಈ ನಿಟ್ಟಿನಲ್ಲಿ ಪ್ರತಿ ಹಿಂದೂ ಕೂಡಾ ಒಗ್ಗಟ್ಟಿನ‌ ಮಂತ್ರ ಪಠಿಸಬೇಕು. ಪಾಕಿಸ್ತಾನದಲ್ಲಿನ ಬಡತನದಿಂದ ಬೇಸತ್ತಿರುವ ಅಲ್ಲಿನ ಜನರು ಅನ್ನ, ನೀರು ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಅವರೇ ನಮ್ಮ ದೇಶದ ಧ್ವಜ ಹಾರಿಸ್ತಿವಿ ಅಂತಾ ಹೇಳುತ್ತಿರುವಾಗ, ನಮ್ಮ ದೇಶದಲ್ಲಿರುವ ನೀವು ನಮ್ಮ ದೇಶಕ್ಕೆ ದ್ರೋಹ ಬಗೆಯುತ್ತಿರುವುದು ಸರಿಯಲ್ಲ. ಮುಂದಿನ ದಿನದಲ್ಲಿ ನಿಮ್ಮ ನಡುವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳದೆ ಹೋದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ರಾಜ್ಯದ ಮುಖ್ಯಮಂತ್ರಿಯವರು ಅಹಲ್ಯಬಾಯಿ ಹೊಳ್ಕರ, ಸಂಗೊಳ್ಳಿರಾಯಣ್ಣ, ಕನಕದಾಸರ ವಂಶಸ್ಥರು. ಆದರೆ ಅವರು ವಾಸನೆ ಬರುವ ಟೊಪ್ಪಿ ಹಾಕಿಕೊಂಡು ಕುಳಿತ್ತಿದ್ದಾರೆ. ಅಹಲ್ಯಬಾಯಿ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ಮುಖ್ಯಮಂತ್ರಿಗಳಿಗೆ ಇಲ್ಲವೆಂದು ಸಿದ್ದರಾಮಯ್ಯನವರನ್ನು ಪರೋಕ್ಷವಾಗಿ ಜರಿದರು.

ಶ್ರೀರಾಮ ಸೇನೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗುಂಜಗಾವಿ ಮಾತನಾಡಿ, ಮುಸ್ಲಿಮರು ಹಿಂದೂಗಳ ಸಹನೆಯನ್ನು ಬಹಳ ದಿನದಿಂದ ಪ್ರತೀಕ್ಷೆ‌ ಮಾಡುತ್ತಿದ್ದಾರೆ. ಒಮ್ಮೆ ನಮ್ಮ‌ ಶಕ್ತಿ ಅಬರಿಗೆ ಅರಿವಾದರೆ ಮುಂದಿನ ದಿನದಲ್ಲಿ ಅವರ ಜೀವನ ತುಂಬಾ ಕಷ್ಟಕರವಾಗಲಿದೆ‌ ಎಂದು ತಿಳಿಸಿದರು.

ದಲಿತರು ಕಟ್ಟಾ ಹಿಂದೂಗಳೆ, ಹಿಂದೂ-ದಲಿತ ಬೇರೆ ಅಲ್ಲ, ನಾವು ನೀವು ಎಲ್ಲ ಒಂದೆ ಎಂದು ತಿಳಿಸಿದರು.

ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಇಷ್ಟೆಲ್ಲ ಆಟವಾಡುತ್ತಿದ್ದಾರೆ. ಹಿಂದುತ್ವದ ಉಳಿವಿಗೆ ನಾವೆಲ್ಲ ಒಂದಾಗಬೇಕು ಎಂದು ಹೇಳಿದರು.

ಹಿಂದೂ ಪರ‌ ಮುಖಂಡರಾದ ಶ್ರೀಶೈಲಗೌಡ ಪಾಟೀಲ ಹಾಗೂ ಸುನೀಲ‌ ಕಂಬೋಗಿ ಮಾತನಾಡಿದರು.

ವಿಶ್ವ ಹಿಂದೂ‌ ಪರಿಷತ್ ಜಿಲ್ಲಾ‌ ಪ್ರಮುಖ ಗುರುಪಾದ ಕುಳಲಿ, ಹಿಂದೂ ಪರ ಕಾರ್ಯಕರ್ತರಾದ ಅನಂತರಾವ್ ಘೋರ್ಪಡೆ, ಸದಾ ಜಾಧವ, ಆನಂದ ಬನ್ನೂರ, ಬಸವರಾಜ ಮಹಾಲಿಂಗೇಶ್ವರಮಠ, ಪರಶು ನಿಗಡೆ, ಮಲ್ಲಿಕಾರ್ಜುನ‌ ಕಾಬಿ, ಸಂಗಣ್ಣ ಕಾತರಕಿ, ನಾಗಪ್ಪ ಅಂಬಿ, ನಾರಾಯಣ ಯಡಹಳ್ಳಿ, ಕುಮಾರ ಪಮ್ಮಾರ ಸೇರಿದಂತೆ ಸಾವಿರಾರು ಹಿಂದು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಂಗಡಿ ಮುಂಗಟ್ಟು ಬಂದ್ : ನಗರದಲ್ಲಿ ಪ್ರತಿಭಟನಾ‌ ಮೆರವಣಿಗೆ ಹಿನ್ನೆಲೆ‌ ಸೂಕ್ತ‌ ಬಂದೋ ಬಸ್ತ್ ಏರ್ಪಡಿಸಿದ್ದ ಪೊಲೀಸ್ ಇಲಾಖೆ‌ ಮುಂಜಾಗೃತಾ ಕ್ರಮವಾಗಿ ಮೆರವಣಿಗೆ ಸಾಗಿರಬರುವ ದಾರಿಯಲ್ಲಿನ‌ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next