Advertisement

Mudhol; ಘಟಪ್ರಭಾ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ

01:32 PM Sep 03, 2023 | Team Udayavani |

ಮುಧೋಳ: ನದಿಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ನಾಪತ್ತೆಯಾಗಿರುವ ಘಟನೆ ನಗರದ ಯಾದವಾಡ ಸೇತುವೆು ಘಟಪ್ರಭಾ ನದಿಯಲ್ಲಿ ರವಿವಾರ ನಡೆದಿದೆ.

Advertisement

ನಗರದ ಝಂಜರಕೊಪ್ಪ ಗಲ್ಲಿ ನಿವಾಸಿ ಶ್ರೀಶೈಲ ಚಿಂಚಲಿ (20 ವ) ಎಂಬಾತ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದಾಗ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ:PM Interview; ದೇಶದಲ್ಲಿ ಭ್ರಷ್ಟಾಚಾರ, ಜಾತಿವಾದ, ಕೋಮುವಾದಕ್ಕೆ ಜಾಗವಿಲ್ಲ; ಪ್ರಧಾನಿ ಮೋದಿ

ಘಟನಾ ಸ್ಥಳಕ್ಕೆ ತಹಶಿಲ್ದಾರ್ ವಿನೋದ ಹತ್ತಳ್ಳಿ, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು, ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement

ಸ್ಥಳದಲ್ಲಿ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next