Advertisement
ನಿರ್ದೇಶಕರ ಆಯ್ಕೆ: ಮಾಕಾಪುರ ಪಿಕೆಪಿಎಸ್‌ಗೆ ಈರಪ್ಪ ವೀರಭದ್ರಪ್ಪ ಮಾಕಾಪುರು, ಶಂಕ್ರಮ್ಮ ಈರಪ್ಪ ತಲೆಕಟ್ಟು, ಬಾಲಮ್ಮ ಅಡಿವೆಪ್ಪ ಆರ್ಯಭೋಗಾಪುರು (ಪರಿಶಿಷ್ಟ ಪಂಗಡ) ದೊಡ್ಡಬಸವ ನೀಲಪ್ಪ ಮಾಕಾಪುರು ಈ ನಾಲ್ವರು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಹನುಮೇಶ ತಿಮ್ಮಣ್ಣ ಹೂನೂರು, ಬಸವರಾಜ ಗಿರಿಯಪ್ಪಗೌಡ ಮಾಕಾಪುರು, ರವಿಚಂದ್ರ ಸಂಗಣ್ಣ ಹೂನೂರು, ಮಲ್ಲರಡ್ಡೆಪ್ಪ ಅಮರಪ್ಪ ಬ್ಯಾಲಿಹಾಳ, ಶರಣಪ್ಪಗೌಡ ಪರನಗೌಡ ತುರಡಗಿ, ಲಕ್ಷ್ಮಮ್ಮ ಹುಲುಗಪ್ಪ ತುರಡಗಿ (ಪರಿಶಿಷ್ಟ ಜಾತಿ) ಶಕುಂತಲಾ ಶರಣಪ್ಪ ಮರಳಿ (ಮಹಿಳಾ ಕ್ಷೇತ್ರ), ಅಕ್ಕಮಾಹದೇವಿ ವೀರಯ್ಯ ರಾಮತ್ನಾಳ (ಮಹಿಳಾ ಕ್ಷೇತ್ರ) ಇವರು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
8 ಜನ ಚುನಾಯಿತರು ಸೇರಿ 12 ಜನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ
ಪೂರ್ಣಗೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು 7
ಜನ ನಿರ್ದೇಶಕರ ಬಲ ಬೇಕು. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದವರು ಕಾಂಗ್ರೆಸ್ ಬೆಂಬಲಿತ 7 ಜನ ನಿರ್ದೇಶಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಧ್ಯಕ್ಷರ ಅಧಿಕಾರಾವಧಿ 5 ವರ್ಷ ಇದ್ದು, 3 ಜನ ನಿರ್ದೇಶಕರು ತಲಾ 20 ತಿಂಗಳಂತೆ ಅಧಿಕಾರ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತ್ತಿದ್ದಾರೆನ್ನಲಾಗಿದೆ. ಮೊದಲ ಅವಧಿಗೆ ತಲೆಕಟ್ಟು ಗ್ರಾಮದ ಶಂಕ್ರಮ್ಮ ಈರಪ್ಪ ಅಧ್ಯಕ್ಷರಾಗಿ, ಬ್ಯಾಲಿಹಾಳ ಗ್ರಾಮದ ಮಲ್ಲರಡ್ಡೆಪ್ಪ ಅಮರಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ .ಆದರೆ ಕಾಂಗ್ರೆಸ್ ಬೆಂಬಲಿತ ಎರಡ್ಮೂರು ಜನ ನಿರ್ದೇಶಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆನ್ನಲಾಗಿದೆ. ಒಟ್ಟಾರೆ ಸಚಿವರು, ಸಂಸದರು, ಶಾಸಕರು, ಜಿಪಂ-ತಾಪಂ ಹಾಗೂ ಗ್ರಾಪಂ ಸದಸ್ಯರಲ್ಲಿ ಕಾಣುತ್ತಿದ್ದ ರೆಸಾರ್ಟ್ ರಾಜಕೀಯ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೂ ಕಾಲಿರಿಸಿರುವುದು ವಿಪರ್ಯಾಸವಾಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
Related Articles
Advertisement