Advertisement

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

11:44 AM Dec 08, 2021 | Team Udayavani |

ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್‌ ರೇಸ್‌ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್‌ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಡಾ. ಪ್ರಗ್ಬಲ್‌ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಿರ್ದೇಶಕರು ಐದು ವರ್ಷ ಶ್ರಮಪಟ್ಟು ಈ ಸಿನಿಮಾ ಮಾಡಿದ್ದಾರೆ.

ಮಡ್‌ ರೇಸ್‌ ಕುರಿತಾದ ಸಿನಿಮಾ ಇದಾಗಿದ್ದು, ಈ ರೀತಿಯ ಕಥ್ಯೆನ್ನಿಟ್ಟುಕೊಂಡು ಮಾಡಿರುವ ಭಾರತದ ಮೊದಲ ಸಿನಿಮಾ ಇದು ಎಂಬುದು ಚಿತ್ರತಂಡದ ಮಾತು.

ಇದನ್ನೂ ಓದಿ:ಕೀರ್ತಿ ಆಜಾದ್ ಮೆಲುಕು:ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!

ಚಿತ್ರದ ಬಗ್ಗೆ ಮಾತನಾಡುವ ರವಿ ಬಸ್ರೂರು, ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್‌ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ ಮಡ್ಡಿ ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡು ವರ್ಷಗಳ ಅವಧಿ ಹಿಡಿದಿದೆ ಎಂದರು.

Advertisement

ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಯವನ್‌ ಕೃಷ್ಣ, ರಿಧಾನ್‌ ಕೃಷ್ಣ, ಅಮಿತ್‌ ಶಿವದಾಸ್‌, ಅನುಷಾ ಸುರೇಶ್‌, ರೆಂಜಿ ಪಣಿಕರ್‌, ಹರೀಶ್‌ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next