Advertisement

Vaamana love track; ಮುದ್ದು ರಾಕ್ಷಸಿಯ ಹಾವಳಿ ಶುರು..

04:54 PM Aug 08, 2023 | Team Udayavani |

ಮುದ್ದು ರಾಕ್ಷಿಸಿಯ ಹಾವಳಿ ಶುರುವಾಗಿದೆ. ಆಕೆಯನ್ನು ಬಿಡುಗಡೆಗೊಳಿಸಿದ ಕ್ಷಣದಿಂದಲೇ ಆ ರಾಕ್ಷಸಿ ಊರೆಲ್ಲಾ ಸುತ್ತಾಡಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಿದ್ದಾಳೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಯಾವ ರಾಕ್ಷಸಿ ಅಷ್ಟೊಂದು ಮುದ್ದಾಗಿದ್ದಾಳೆ ಎಂದು ನೀವು ಕೇಳಬಹುದು. ಅಂದಹಾಗೆ, ಇವಳು “ವಾಮನ’ನ ಮುದ್ದು ರಾಕ್ಷಸಿ. ಆತನ ಜೊತೆ ಹಾಡಿ, ಕುಣಿದು ಖುಷಿ ಖುಷಿಯಾಗಿರುವ ರಾಕ್ಷಸಿ.

Advertisement

ಹೌದು, ಧನ್ವೀರ್‌ ನಟನೆಯ “ವಾಮನ’ ಚಿತ್ರದಿಂದ “ವಾ.. ವಾ.. ವಾಮನ’ ಎಂಬ ಹಾಡು ಕೇಳದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಈಗ ಚಿತ್ರದ ಎರಡನೇ ಹಾಡು “ಮುದ್ದುರಾಕ್ಷಸಿ’ ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್‌ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತವಿದ್ದು, ವಿಜಯ್‌ ಪ್ರಕಾಶ್‌ ಹಾಗೂ ಹರ್ಷಿಕಾ ದೇವನಾಥ್‌ ಹಾಡಿದ್ದಾರೆ. ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್‌ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಈಕ್ವಿನಾಕÕ… ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಚೇತನ್‌ ಗೌಡ ಅದ್ಧೂರಿಯಾಗಿ ನಿರ್ಮಿಸಿರುವ “ವಾಮನ’ ಸಿನಿಮಾವನ್ನು ಯುವ ನಿರ್ದೇಶಕ ಶಂಕರ್‌ ರಾಮನ್‌ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್‌ ನಲ್ಲಿ ಮುದ್ದು ರಾಕ್ಷಸಿ ಮೆಲೋಡಿ ಹಾಡನ್ನು ಅಭಿಷೇಕ್‌ ಅಂಬರೀಷ್‌ ರಿಲೀಸ್‌ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್‌ ಕೊಟ್ಟರು.

ನಿರ್ಮಾಪಕ ಚೇತನ್‌, ನಿರ್ದೇಶಕ ಶಂಕರ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್‌ ಕೆ ಆರ್‌ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಅರ್ಜುನ್‌ ರಾಜ್, ವಿಕ್ರಮ್‌ ಮೋರ್‌ ಮತ್ತು ಜಾಲಿ ಬಾಸ್ಟಿನ್‌ ಆ್ಯಕ್ಷನ್‌, ನವೀನ್‌ ಕಲಾ ನಿರ್ದೇಶನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next