Advertisement

ರಿಯಾಯಿತಿ ದರದ ಬಿತ್ತನೆ ಬೀಜ ಪೂರೈಕೆಗೆ ಚಾಲನೆ

05:45 PM Jun 11, 2020 | Naveen |

ಮುದ್ದೇಬಿಹಾಳ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ರಿಯಾಯಿತಿ ದರದ ಬಿತ್ತನೆ ಬೀಜ ಪೂರೈಕೆಗೆ ಚಾಲನೆ ನೀಡಲಾಗಿದ್ದುಮ ತಾಲೂಕಿನ ಮುದ್ದೇಬಿಹಾಳ, ತಾಳಿಕೋಟೆ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಅಡಿ ಬರುವ ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್‌. ಯರಝರಿ ಮನವಿ ಮಾಡಿದ್ದಾರೆ.

Advertisement

ತಾಲೂಕಿನ ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬಿತ್ತನೆ ಬೀಜ ಪಡೆಯಲು ಆಧಾರ್‌ ಕಾರ್ಡ್‌, ಜಮೀನಿನ ಉತಾರ ಸೇರಿದಂತೆ ಅಗತ್ಯ ದಾಖಲೆ ಸಮೇತ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.

ಬೀಜ ಪಡೆದುಕೊಳ್ಳುವಾಗ ಪ್ರತಿ ರೈತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಕಿವಿಮಾತು ಹೇಳಿದರು. ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ ಕೋವಿಡ್‌-19 ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸಿ ಬಿತ್ತನೆ ಪೂರ್ವ ಬೀಜೋಪಚಾರದ ಮಹತ್ವ ತಿಳಿಸಿಕೊಟ್ಟರು. ಕೃಷಿ ಅ ಧಿಕಾರಿ ಬಸವರಾಜ ಟಕ್ಕಳಕಿ, ಸಂಗಮೇಶ ಸಜ್ಜನ, ಎಸ್‌.ಎಸ್‌. ಚೌಧರಿ, ಶರಣಬಸು ಪಾಟೀಲ, ನಾಗರಾಜ ಹಳಬರ, ರೈತರಾದ ಶಿವಬಸಪ್ಪ ಮೇಟಿ, ನಡಿಗೇರಪ್ಪ ಬೀರಗೊಂಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next