ಮುದ್ದೇಬಿಹಾಳ : ಮೊದಲ ಹೆರಿಗೆ ನೋವಿನಿಂದ ತೀವ್ರವಾಗಿ ಒದ್ದಾಡುತ್ತಿದ್ದ ಮಹಿಳೆಯೊಬ್ಬರು ಆ್ಯಂಬುಲೆನ್ಸನಲ್ಲೇ, ಆ್ಯಂಬುಲೆನ್ಸ್ ಇಎಂಟಿ ಶ್ರೀಶೈಲ ಹೂಗಾರ ಅವರ ಸಕಾಲಿಕ ನೆರವಿನಿಂದಾಗಿ ಗಂಡು ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಿದ ಘಟನೆ ಕೋಳೂರು-ಮುದ್ದೇಬಿಹಾಳ ಮಾರ್ಗ ಮದ್ಯೆ 108 ಆರೋಗ್ಯ ಕವಚ ಆ್ಯಂಬುಲೆನ್ಸನಲ್ಲಿ ಇಂದು(ಗುರುವಾರ. ಆಗಸ್ಟ್ 19) ಬೆಳಿಗ್ಗೆ ನಡೆದಿದೆ.
ಕೋಳೂರ ಗ್ರಾಮದಿಂದ ಹೆರಿಗೆ ನೋವಿನ ಕರೆ ಬಂದ ಅ್ಯಂಬ್ಯುಲೆನ್ಸ ಜೊತೆಗೆ ಶುಶ್ರೂಷಾ ಅಧಿಕಾರಿ ಶ್ರೀಶೈಲ ಹೂಗಾರ, ಚಾಲಜ ಲಾಡಸಾಬ್ ರಾಜಿಬಾಯಿ ಗ್ರಾಮಕ್ಕೆ ತೆರಳಿದ್ದಾರೆ.
ಇದನ್ನೂ ಓದಿ : ಸಿ.ಟಿ.ರವಿ ಅರೆ ಹುಚ್ಚ..! ಆರ್‌ಎಸ್‌ಎಸ್ ಚಡ್ಡಿಗಳು ಸ್ವಾತಂತ್ರ ತಂದು ಕೊಟ್ಟವರಲ್ಲ..!
ತುಂಬು ಗರ್ಬಿಣಿ 20 ವಯಸ್ಸಿನ ವಿಜಯಲಕ್ಷ್ಮಿ ಮಡಿವಾಳರ ಇವಳ ಒದ್ದಾಟ ಕಂಡು ಸಂಬಂಧಿಕರು ಅಸಾಯಕರಾಗಿ ಗಾಭರಿ ಗೊಂಡಿದ್ದರು. ಮೊದಲನೆ ಹೆರಿಗೆಯಾಗಿದ್ದರಿಂದ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು.
ಆಕೆಯನ್ನು ಆ್ಯಂಬುಲೆನ್ಸನಲ್ಲಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಹೆರಿಗೆ ಆಗಿದೆ. ಸಧ್ಯ ತಾಯಿ ಮಗು ಆರೋಗ್ಯ ಚನ್ನಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುದ್ದೇಬಿಹಾಳದ ತಾಲುಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ್ಯಂಬುಲೆನ್ಸ್ ಸಿಬ್ಬಂದಿಕ ಸಕಾಲಿಕ ಪ್ರಯತ್ನ ತಾಯಿ, ಮಗುವಿನ ಜೀವ ಉಳಿಸುವಲ್ಲಿ ನೆರವಾಗಿದ್ದು ಸಿಬ್ಬಂದಿ ಕಾರ್ಯಕ್ಷಮತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 36,401 ಕೋವಿಡ್ ಪ್ರಕರಣ ಪತ್ತೆ, 530 ಮಂದಿ ಸಾವು