ಮುದ್ದೇಬಿಹಾಳ: ತಾಲೂಕಿನ ದೇವರ ಹುಲಗಬಾಳ ಗ್ರಾಮದ ಚಲವಾದಿ ಸಮಾಜದ ಹಿರಿಯ ವ್ಯಕ್ತಿ ಹಣಮಪ್ಪ ಚಲವಾದಿ (88) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹಣಮಪ್ಪ ಚಲವಾದಿ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ತಂಗಡಗಿ ಸೇತುವೆ ಮೇಲಿಂದಾ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಉಂಟಾಗಿದ್ದು, ಪೊಲೀಸರು, ಅಗ್ನಿಶಾಮಕ ದಳದ ತಂಡ ಮತ್ತು ನುರಿತ ಈಜುಗಾರರು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸೇತುವೆಯ ಹತ್ತಿರ ಇವರ ಚಪ್ಪಲಿ, ಪಿಂಚಣಿ ಬುಕ್, ಗುರುತಿನ ಚೀಟಿ ದೊರೆತಿರುವುದು ಆತಂಕಕ್ಕೆ ಕಾರಣವಾಗಿದೆ. ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ಭರದಿಂದ ನಡೆಸಲಾಗುತ್ತಿದೆ.
ಹಣಮಪ್ಪ ಇವರು ಗೋವಾ ವಿಮೋಚನಾ ಹೋರಾಟದಲ್ಲಿ ಅದೇ ಗ್ರಾಮದ ಬಿ.ಎಚ್.ಮಾಗಿ ಅವರೊಂದಿಗೆ ಹೋರಾಟದಲ್ಲಿ ಭಾಗವಹಿಸಿ ಅವರ ಒಡನಾಡಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.