Advertisement

ಫಲಿಸದ ಚಿಕಿತ್ಸೆ : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

11:19 AM Feb 02, 2022 | Team Udayavani |

ಮುದ್ದೇಬಿಹಾಳ : 3 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ತಂಗಡಗಿ ಗ್ರಾಮದ ಬಸವರಾಜ ಡೂಂಗರಗಾವಿ (28) ಚಿಕಿತ್ಸೆ ಫಲಿಸದೆ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

Advertisement

ಇವರು ಸೇವೆಗೆ ಸೇರಿ 8-10 ವರ್ಷಗಳಾಗಿದ್ದು ಪ್ರಸ್ತುತ ಬಿಹಾರ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದು ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಾಗ ಆಲಮಟ್ಟಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿತ್ತು. ಮೃತರಿಗೆ ಪತ್ನಿ, ಎರಡು ಗಂಡು ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ : ಶೇ.10ಕ್ಕಿಂತ ಕಡಿಮೆಯಾದ ಪಾಸಿಟಿವಿಟಿ ದರ: ದೇಶದಲ್ಲಿ 1.61 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next